ಹಾಸನದಲ್ಲಿ ತಡರಾತ್ರಿ ವಕೀಲನ ಮನೆ ಮುಂದೆ ವೈದ್ಯನಿಂದ ವಾಮಾಚಾರ! ವಿಡಿಯೋ ವೈರಲ್​

blank

ಹಾಸನ: ವಕೀಲನ ಮನೆ ಮುಂದೆ ವೈದ್ಯರೊಬ್ಬರು ವಾಮಾಚಾರ ನಡೆಸಿರುವ ಘಟನೆ ಶುಕ್ರವಾರ ಮಧ್ಯರಾತ್ರಿ ನಗರದಲ್ಲಿ ನಡೆದಿದೆ.

ಮಧ್ಯರಾತ್ರಿ ಸ್ಕೂಟರ್​ನಲ್ಲಿ ವಕೀಲ ದೇವರಾಜೇಗೌಡರ ಮನೆ ಬಾಗಿಲ ಬಳಿ ಬಂದ ಹಾಸನ ಹಿಮ್ಸ್ ವೈದ್ಯ ಡಾ. ಸುರೇಶ್, ಕುಡಿಕೆ ಮತ್ತು ಕೋಳಿಯ ಮಾಂಸ, ಕಾಲುಗಳನ್ನ ಎಸೆದು ಹೋಗಿದ್ದಾರೆ. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ‘ನನ್ನ ಮನೆಗೆ ವೈದ್ಯ ವಾಮಾಚಾರ ಮಾಡಿದ್ದಾರೆ’ ಎಂದು ಆರೋಪಿಸಿ ಡಾ. ಸುರೇಶ್ ವಿರುದ್ಧ ಹಾಸನ ಬಡಾವಣೆ ಪೊಲೀಸ್​ ಠಾಣೆಯಲ್ಲಿ ವಕೀಲರು ಎಫ್​ಐಆರ್​ ದಾಖಲಿಸಿದ್ದಾರೆ.

ವಕೀಲ‌ ದೇವರಾಜೇಗೌಡ‌ ಮನೆ ಸಮೀಪ‌ ಡಾ.ಸುರೇಶ್ ಅವರ ತಂದೆ ರಾಮೇಗೌಡರ ಹೆಸರಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಲಾಗಿದೆ. ಡಾ.ಸುರೇಶ್​ರ ಅಕ್ರಮ ಕಟ್ಟಡದ ವಿರುದ್ಧ ದೂರು ದಾಖಲಿಸಿ ವಕೀಲ ದೇವರಾಜೇಗೌಡ ಹೋರಾಟ ನಡೆಸಿದ್ದರು. ಪರಿಣಾಮ ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಹಾಸನ ನಗರಸಭೆಯು ಅಂತಿಮ ತಿಳಿವಳಿಕೆ ಪತ್ರ ನೀಡಿತ್ತು. ಇದೀಗ ಈ ಪ್ರಕರಣ ಮಾಟ-ಮಂತ್ರ ರೂಪಕ್ಕೆ ತಿರುಗಿರುವುದು ಸ್ಥಳೀಯರಲ್ಲಿ ಭಾರೀ ಚರ್ಚೆಯಾಗುತ್ತಿದೆ.(ದಿಗ್ವಿಜಯ ನ್ಯೂಸ್​)

ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟ ತುಮಕೂರು ಎಸ್​​ಪಿ! ಠಾಣೆ ಮುಂದೆ ಕಾರು ಬರ್ತಿದ್ದಂತೆ ಪಿಎಸ್​ಐ ಗಢಗಢ

ಅಪಘಾತದಲ್ಲಿ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಸಾವು: ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಘೋರ ಸತ್ಯ ಇಲ್ಲಿದೆ

ಪ್ರೇಯಸಿಯನ್ನ ಕೊಂದು ಶವಕ್ಕೆ ಸ್ನಾನ ಮಾಡಿಸಿ ಇಡೀ ರಾತ್ರಿ ಅದರೊಟ್ಟಿಗೆ ಇದ್ದ! ಬೆಳಗಾಗುತ್ತಿದ್ದಂತೆ ನಾಟಕ ಶುರು…

Share This Article

ನೀವು ಮೂರೇ 3 ದಿನ ಸ್ಮಾರ್ಟ್‌ಫೋನ್‌ನಿಂದ ದೂರವಿರಿ! ಅನಗತ್ಯ ಕಾಡುವ ಆರೋಗ್ಯ ಸಮಸ್ಯೆಗಳು ಮಾಯ.. Smartphone

Smartphone:  ಮೊಬೈಲ್​​ನಿಂದ ದೂರ ಇರುವುದು ಅಸಾಧ್ಯವಾಗಿದ್ದರು, ಇತ್ತೀಚಿನ ಸಮೀಕ್ಷೆಯು ಕೆಲವು ಆಶ್ಚರ್ಯಕರ ವಿಷಯಗಳನ್ನು ಬಹಿರಂಗಪಡಿಸಿದೆ. ಸತತ…

ಈ ಮೂರು ರಾಶಿಯವರು ಸ್ವಾಭಾವಿಕವಾಗಿಯೇ ದುರಹಂಕಾರಿಗಳಂತೆ! ನಿಮ್ಮ ರಾಶಿ ಯಾವುದು? Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಯಲ್ಲಿ ಜನಿಸುತ್ತಾನೆ ಎಂಬುದು…