More

    ವಿಜಯವಾಣಿ, ದಿಗ್ವಿಜಯ ನ್ಯೂಸ್ ಆಯೋಜಿಸಿರುವ ‘ರಿಯಲ್ ಎಸ್ಟೇಟ್ ಎಕ್ಸ್​ಪೋ’ಗೆ 2ನೇ ದಿನವೂ ಜನಸಾಗರ: ಫಾರ್ಮ್ ಲ್ಯಾಂಡ್​ಗೆ ಬೇಡಿಕೆ

    ಬೆಂಗಳೂರು: ವಿಜಯವಾಣಿ, ದಿಗ್ವಿಜಯ 24×7 ನ್ಯೂಸ್ ಸಹಯೋಗದಲ್ಲಿ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ‘ರಿಯಲ್ ಎಸ್ಟೇಟ್ ಎಕ್ಸ್​ಪೋ’ಗೆ 2ನೇ ದಿನವಾದ ಶನಿವಾರ ಜನಸಾಗರವೇ ಹರಿದು ಬರ್ತಿದೆ. ಏ.8ರಂದು ಆರಂಭವಾದ ಎಕ್ಸ್​ಪೋ ಭಾನುವಾರದವರೆಗೆ ನಡೆಯಲಿದೆ.

    ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳ ನಡುವೆ ಸೇತುವೆಯಾಗಿ ವಿಜಯವಾಣಿ, ದಿಗ್ವಿಜಯ 24×7 ನ್ಯೂಸ್ ಆಯೋಜಿಸಿರುವ ‘ರಿಯಲ್ ಎಸ್ಟೇಟ್ ಎಕ್ಸ್​ಪೋ’ನಲ್ಲಿ ಮನೆ, ಸೈಟ್, ವಿಲ್ಲಾ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಫಾರ್ಮ್ ಲ್ಯಾಂಡ್​ಗೆ ಹೆಚ್ಚು ಬೇಡಿಕೆ ಬರುತ್ತಿದೆ.

    ಜನರ ನಿವೇಶನ ಕನಸು ನನಸು ಮಾಡಲು ಸ್ಥಳದಲ್ಲೇ ಬ್ಯಾಂಕಿಂಗ್ ಸೌಲಭ್ಯ ಕೂಡ ನೀಡಲಾಗುತ್ತಿದೆ. ಇಂಡಿಯನ್ ಬ್ಯಾಂಕ್​ನ ಚೀಫ್ ಮ್ಯಾನೇಜರ್ ಬಾಲಾಜಿ ಅವರು ಗ್ರಾಹಕರಿಗೆ ಅಗತ್ಯ ಮಾಹಿತಿ ನೀಡುತ್ತಿದ್ದಾರೆ. ದೇಶದ 7ನೇ ಅತಿ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಎಂಬ ಖ್ಯಾತಿ ಪಡೆದಿರುವ ಇಂಡಿಯನ್ ಬ್ಯಾಂಕ್, ಬೆಂಗಳೂರಿನಲ್ಲಿ 76 ಶಾಖೆಗಳನ್ನು ಹೊಂದಿದೆ. ಶೇ.6.50 ಬಡ್ಡಿ ದರದಲ್ಲಿ ಗೃಹ ಸಾಲ ನೀಡುತ್ತಿದೆ.

    ಗೌರಿಬಿದನೂರಿನ ಬಳಿ ಇರುವ ಕರಣಶ್ರೀ ಫಾರ್ಮ್ ಡೆವಲಪರ್ಸ್ ಅವರ ಫಾರ್ಮ್ ಲ್ಯಾಂಡ್​ಗೆ ಹೆಚ್ಚು ಬೇಡಿಕೆ ಬರುತ್ತಿದೆ. 6 ಕುಂಟೆ ಜಾಗದ ಫಾರ್ಮ್ ಲ್ಯಾಂಡ್​ನಲ್ಲಿ 23 ಸ್ಯಾಂಡಲ್ ವುಡ್, 12 ಟೀ ವುಡ್, 2 ಮಾವು, 2 ಹಲಸು, 2 ತೆಂಗು, 4 ಸೇಬು ಮರಗಳು, ವಿವಿಧ ಬಗೆಯ ಹಣ್ಣು, ತರಕಾರಿ ಬೆಳೆಯಲು ಅವಕಾಶವಿದೆ.

    40 ಎಕರೆ ಕೆರೆ ಪ್ರದೇಶದವಿದ್ದು, ಸುತ್ತ ಜಾಗಿಂಗ್ ಟ್ರಾಕ್ ಕೂಡ ಇದೆ. ಪಕ್ಕಾ ಹಳ್ಳಿ ವಾತಾವರಣ ಸೃಷ್ಟಿ ಮಾಡಲಾಗಿದೆ. ಎಕ್ಸ್​ಪೋದಲ್ಲಿ 2 ಲಕ್ಷ ರೂ. ಕೊಟ್ಟು ಸ್ಪಾಟ್ ಬುಕ್ಕಿಂಗ್ ಮಾಡಿದವರಿಗೆ ಮೊದಲ 100 ಗ್ರಾಹಕರಿಗೆ EV ಬೈಕ್ ಅನ್ನು ಉಚಿತವಾಗಿ ಕೊಡಲಾಗುತ್ತಿದೆ ಎಂದು ಕರುಣಶ್ರೀ ಫಾರ್ಮ್ ಡೆವಲಪರ್ಸ್​ನ ಮಾರ್ಕೆಟಿಂಗ್ ಹೆಡ್ ರಾಜದೀಪ್ ಮಾಹಿತಿ ನೀಡಿದ್ದಾರೆ.

    ಅಶ್ವಸೂರ್ಯ ರಿಯಾಲಿಟಿಸ್ ಅರ್ಪಿಸುವ ಈ ಎಕ್ಸ್​ಪೋದಲ್ಲಿ ರಾಜ್ಯದ ಪ್ರಮುಖ ರಿಯಾಲ್ಟಿ ಕಂಪನಿಗಳಾದ ಪ್ರಾವಿಡೆಂಟ್, ಎಸ್​ಆರ್​ಎಸ್ ಪ್ರಮೋಟರ್ಸ್, ಅಥರ್ವ ಗ್ರೂಪ್ಸ್, ಡಿಎಸ್ ಮ್ಯಾಕ್ಸ್, ಕೆಎನ್​ಎಸ್ ಇನ್​ಫ್ರಾ, ಕಲ್ಯಾಣ್ ಶೆಲ್ಟರ್ಸ್, ಗುರು ಪುನ್ವಾನಿ, ಆರ್ಯನ್ ಡೆವಲಪರ್ಸ್ ಮತ್ತು ಪ್ರಮೋಟರ್ಸ್, ಶರಣ್ಯ ಫಾರ್ಮ್ಸ್, ಎಂ.ಆರ್. ಪ್ರಾಪರ್ಟಿಸ್, ಆಶೀರ್ವಾದ ಪ್ರಾಪರ್ಟೀಸ್ , ಅಲೈಡ್ ಹ್ಯಾಬಿಟ್ಯಾಟ್ಸ್, ಕರ್ನಾಟಕ ಗೃಹ ಮಂಡಳಿ, ಓಂ ಶ್ರೀ ಇನ್​ಫ್ರಾಸ್ಟ್ರಕ್ಚರ್, ಎ4 ಪ್ರಾಪರ್ಟಿಸ್, ಭಗಿನಿ ಡೆವಲಪರ್ಸ್, ಎಂಎಚ್ ಪ್ರಮೋಟರ್ಸ್, ಎಂಡಿಎಸ್, ಗೃಹಮಿತ್ರ ಡೆವಲಪರ್ಸ್, ಪಿ.ಸಿ. ರಿಯಾಲ್ಟಿ, ಮದರ್ ಅರ್ತ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಮತ್ತು ಎಟಿಝುಡ್ ಪ್ರಾಪರ್ಟಿಸ್ ಸೇರಿ ವಿವಿಧ ರಿಯಾಲ್ಟಿ ಕಂಪನಿಗಳು ಮೇಳದಲ್ಲಿ ಭಾಗವಹಿಸಿವೆ.

    ಬಿದನಗೆರೆಯಲ್ಲಿ ಮೊಳಗಿದೆ ಹನುಮ ನಾಮ ಸ್ಮರಣೆ: 161 ಅಡಿ ಎತ್ತರದ ಪಂಚಮುಖಿ ಆಂಜನೇಯ ವಿಗ್ರಹ ಲೋಕಾರ್ಪಣೆ ನಾಳೆ

    ಮಗಳೇ, ಬಾರವ್ವ ಆ ಕಾಮುಕನಿಗೆ ತಕ್ಕ ಪಾಠ ಕಲಿಸೋಣ… ಎನ್ನುತ್ತಾ ಕೋಣೆಗೆ ಹೋದ ತಂದೆಗೆ ಕಾದಿತ್ತು ಆಘಾತ!

    BJP ಸರ್ಕಾರದಲ್ಲಿ HDK ಅವರೇ ಪ್ರಭಾವಿ? ತಹಸೀಲ್ದಾರ್​ ಎತ್ತಂಗಡಿಗೆ ಕೈ ಹಾಕಿದ CPYಗೆ ಕೆಲವೇ ಗಂಟೆಯಲ್ಲಿ ಶಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts