

ವಿಜಯಪುರ: ಕಾಲುವೆ ಪಕ್ಕದಲ್ಲಿರುವ ಜಮೀನಿಗೆ ನೀರು ಹಾಯಿಸಲು ಹೋಗಿದ್ದ ಸಹೋದರರಿಬ್ಬರು ನೀರು ಪಾಲಾದ ಘಟನೆ ಕೊಲ್ಹಾರ ಪಟ್ಟಣದ ಹಳ್ಳದ ಗೆಣ್ಣೂರ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಸುನೀಲ ಕಲ್ಲಪ್ಪ ಮಾದರ ಮತ್ತು ಅನಿಲ ಕಲ್ಲಪ್ಪ ಮಾದರ ನೀರು ಪಾಲಾದವರು. ಭಾನುವಾರ ಬೆಳಗ್ಗೆ ಸಹೋದರರಿಬ್ಬರು ನೀರು ಹಾಯಿಸಲೆಂದು ಜಮೀನಿಗೆ ತೆರಳಿದ್ದರು. ಈ ವೇಳೆ ಕಾಲುವೆಗೆ ಕಾಲುಜಾರಿ ಬಿದ್ದಿದ್ದು, ಮಧ್ಯಾಹ್ನ 1 ಗಂಟೆಯಾದರೂ ಇವರು ಸುಳಿವು ಪತ್ತೆಯಾಗಿಲ್ಲ. ಶೋಧ ಕಾರ್ಯ ಮುಂದುವರಿದಿದೆ.