More

    ನೀವು ನೂಡಲ್ಸ್​ ಪ್ರಿಯರೇ? ಹಾಗಿದ್ರೆ ಎಚ್ಚರ! ಈ ಸ್ಟೋರಿ ಓದಲೇಬೇಕು

    ಉತ್ತರಪ್ರದೇಶ: ನಗರ ಮತ್ತು ಇದೀಗ ಹಳ್ಳಿಗಳಲ್ಲಿ ನೂಡಲ್ಸ್ ಫೇಮಸ್​. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅತ್ಯಂತ ಪ್ರಿಯವಾದ ಖಾದ್ಯ. ಜೋರಾಗಿ ಹೊಟ್ಟೆ ಹಸಿವಾದಾಗ ನಮಗೆಲ್ಲಾ ನೆನಪಾಗುವುದೇ ಎರಡು ನಿಮಿಷದಲ್ಲಿ ಸಿದ್ಧವಾಗುವ ಮ್ಯಾಗಿ ನೂಡಲ್ಸ್. ಇದರಿಂದ ನೂಡಲ್ಸ್ ಅನ್ನು ಇನ್ನಷ್ಟು ಆರೋಗ್ಯಕರವಾಗಿ ತಯಾರಿಸಬಹುದು ಹಾಗೂ ಅದರ ರುಚಿಯೂ ಇಮ್ಮಡಿಗೊಳ್ಳುತ್ತದೆ.

    ಇದನ್ನೂ ಓದಿ:ಮತ್ತೆ ಕೆರಳಿಸಿದ ಕೆನಡಾ: ಆ ದೇಶದ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪ?!

    ಬೀದಿ ಬದಿ ವ್ಯಾಪಾರಿಯೊಬ್ಬರು ನದಿಯಲ್ಲಿ ನೂಡಲ್ಸ್ ತೊಳೆಯುತ್ತಿರುವ ದೃಶ್ಯ ಇದು. ಬೀದಿ ಆಹಾರ ತಯಾರಿಕೆಯ ನೈರ್ಮಲ್ಯದ ಬಗ್ಗೆ ಅನುಮಾನ ಹುಟ್ಟು ಹಾಕುವಂತಿದೆ. ಈ ಘಟನೆ ಉತ್ತರ ಪ್ರದೇಶದ ಕುಕುರ್ಘಾಟಿ ಗ್ರಾಮದಲ್ಲಿನ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಈ ನೀರು ಅತ್ಯಂತ ಕಲುಷಿತವಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

    ಸಾಮಾನ್ಯವಾಗಿ ನೂಡಲ್ಸ್ ತಯಾರಿಸಲು ಮೊದಲು ಅದನ್ನು ಕುದಿಸಿ ನಂತರ ತೊಳೆಯಲಾಗುತ್ತದೆ. ಹೀಗೆ ಕುದಿಸಿದ ನೂಡಲ್ಸ್ ಅನ್ನು ತೊಳೆಯುವುದು ಅವು ಪರಸ್ಪರ ಅಂಟಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ಆರೋಗ್ಯದ ದೃಷ್ಟಿಯಿಂದ ನೂಡಲ್ಸ್ ಅನ್ನು ಹುರಿಯುವ ಮೊದಲು ಶುದ್ಧ ತಣ್ಣೀರಿನಿಂದ ತೊಳೆಯಬೇಕು ಎಂದು ತಜ್ಞರು ಸೂಚಿಸುತ್ತಾರೆ. ಆದರೆ ಈ ವ್ಯಾಪಾರಿ ಬೇಯಿಸಿದ ನೂಡಲ್ಸ್ ಅನ್ನು ಟ್ರೇಯಲ್ಲಿ ತೆಗೆದುಕೊಂಡು ಹೋಗಿ ಕಲುಷಿತ ನೀರಿನಲ್ಲಿ ಮುಳಗಿಸುತ್ತಿರುವುದು ಕಂಡು ಬಂದಿದೆ.

    ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮಾಡಲಾದ ಈ ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಇನ್ನು ಮುಂದೆ ಬೀದಿ ಬದಿ ಆಹಾರ ಸೇವಿಸುವ ಮುನ್ನ ನೂರು ಬಾರಿ ಆಲೋಚಿಸಿ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. ಬಹಳಷ್ಟು ರೋಗಗಳು ಅಶುದ್ಧ ನೀರಿನಿಂದಾಗಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಆಹಾರದ ವಿಚಾರದಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಬೇಕು ಎಂದು ಹಲವರು ಎಚ್ಚರಿಸಿದ್ದಾರೆ.

    ಅಲರ್ಜಿಯಿಂದ ನೃತ್ಯಗಾರ್ತಿ ಓರ್ಲಾ ಬ್ಯಾಕ್ಸೆಂಡೇಲ್ ಮೃತ್ಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts