More

    VIDEO| ರ‍್ಯಾಪರ್​ ಆದ ಪೇದೆ; ಕಂಡ ಕಷ್ಟ, ಮುಂದಿನ ಗುರಿಯೇ ಆತನ ಸಾಹಿತ್ಯ

    ಶ್ರೀನಗರ: ರ‍್ಯಾಪ್​ ಸಾಂಗ್​ಗಳ ಮೂಲಕ ಜನರನ್ನು ಹುಚ್ಚೆದ್ದು ಕುಣಿಸುವಂತೆ ಮಾಡಿರುವ ರ‍್ಯಾಪ್​ ಸ್ಟಾರ್​ಗಳನ್ನ ನೋಡಿದ್ದೇವೆ. ವಿಶೇಷವೆನಿಸುವಂತೆ ಜಮ್ಮು ಕಾಶ್ಮೀರದಲ್ಲಿ ಜನ ಸೇವೆಗೆಂದು ಕಾಕಿ ತೊಟ್ಟಿರುವ ಪೊಲೀಸ್​ ಪೇದೆಯೊಬ್ಬ ರ‍್ಯಾಪರ್​ ಆಗಿದ್ದು ಜನರ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾನೆ.

    ಮುಕೇಶ್​ ಸಿಂಗ್​ ಎನ್ನುವವರು ಟ್ವಿಟ್ಟರ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಪೇದೆಯೊಬ್ಬ ರ‍್ಯಾಪ್​ ಸಾಂಗ್​ ಹೇಳುವ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಆ ವಿಡಿಯೋದಲ್ಲಿ ಪೇದೆ ರ‍್ಯಾಪ್​ ಸಾಂಗ್​ನ ಸಾಹಿತ್ಯವಾಗಿ ತನ್ನ ಬದುಕನ್ನೇ ಬಳಸಿಕೊಂಡಿದ್ದಾನೆ. ತಾನು ಕಂಡ ಕಷ್ಟ, ತನ್ನ ಕನಸು, ಕನಸಿಗಾಗಿ ನಿದ್ದೆ ಬಿಟ್ಟು ಶ್ರಮಿಸಿದ ಬಗೆ, ತನ್ನ ಮುಂದಿರುವ ಗುರಿಯನ್ನೇ ಆತ ಸಾಲುಗಳಾಗಿ ಪರಿವರ್ತಿಸಿದ್ದಾನೆ.

    ಈ ವಿಡಿಯೋ ಕೇವಲ ಟ್ವಿಟ್ಟರ್​ ಮಾತ್ರವಲ್ಲದೆ ಫೇಸ್​ಬುಕ್​ನಲ್ಲಿಯೂ ಸಹ ಸೌಂಡ್​ ಮಾಡುತ್ತಿದೆ. ನಿಜವಾದ ಪ್ರತಿಭೆ ಎಂದು ಅನೇಕರು ಹಾಡಿ ಹೊಗಳುತ್ತಿದ್ದಾರೆ. ಟ್ವಿಟ್ಟರ್​ನಲ್ಲಿ ವಿಡಿಯೋ ಹೊರಬಿದ್ದ ಒಂದೇ ದಿನದಲ್ಲಿ ಸಾವಿರಾರು ವೀಕ್ಷಣೆ ಪಡೆದುಕೊಂಡಿದೆ. (ಏಜೆನ್ಸೀಸ್​)

    VIDEO| ಗ್ರಾಮಸ್ಥರನ್ನು ಅಟ್ಟಿಸಿಕೊಂಡು ಗ್ರಾಮಕ್ಕೆ ಬಂದ ಸಿಂಹ, ಮುಂದೆ ಏನಾಯಿತು?

    ಕೊರೊನಾ ವೈರಸ್ ರೋಗಿಗಳಿಗಾಗಿ ವೈದ್ಯರ ಡಾನ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts