More

    ನನ್ಗೆ ಅಧಿಕಾರದ ಆಸೆಯೇ ಇಲ್ಲ… ಸಿಎಂ ಸ್ಥಾನ ಬಿಟ್ಟುಕೊಡ್ತೀವಿ ಅಂದ್ರೂ ಮಾಯಾವತಿ ಸ್ಪಂದಿಸಲಿಲ್ಲ: ರಾಹುಲ್​ ಗಾಂಧಿ

    ನವದೆಹಲಿ: ನಾನು ಅಧಿಕಾರದ ಶಕ್ತಿ ಸ್ಥಾನದಲ್ಲೇ ಜನಿಸಿದೆ. ಆದರೆ, ಅದರ ಬಗ್ಗೆ ನನಗೆ ಆಸಕ್ತಿಯೇ ಬೆಳೆಯಲಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

    ನವದೆಹಲಿಯ ಜವಾಹರ ಭವನದಲ್ಲಿ ‘ದಿ ದಲಿತ್​ ಟ್ರೂತ್​’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾಹುಲ್​ ಗಾಂಧಿ, ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಅಧಿಕಾರದ ಬಗ್ಗೆ ಆಸಕ್ತಿಯೇ ಇಲ್ಲ. ದೇಶವನ್ನು ಅರ್ಥ ಮಾಡಿಕೊಳ್ಳಲು ಈಗ ಪ್ರಯತ್ನಿಸುತ್ತಿದ್ದೇನೆ ಎಂದರು. ಉತ್ತರ ಪ್ರದೇಶದ ಚುನಾವಣೆಯಲ್ಲಿ ಮಾಯಾವತಿ ಅವರು ಸ್ಪರ್ಧಿಸಲಿಲ್ಲ. ಮೈತ್ರಿ ರಚನೆ ಬಗ್ಗೆ ಸಂದೇಶ ಕಳುಹಿಸಿದೆವು. ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿದೆವು. ಅವರು ಯಾವುದಕ್ಕೂ ಸ್ಪಂದಿಸಲಿಲ್ಲ ಎಂದು ರಾಹುಲ್​ ಟೀಕಿಸಿದರು.

    ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ ಹಾಗೂ ಪೆಗಾಸಸ್​ಗಳಿಗೆ ಬೆದರಿದ ಮಾಯಾವತಿ ಅವರು ನಮ್ಮ ಜೊತೆ ಮಾತನಾಡಲೂ ಮುಂದಾಗಲಿಲ್ಲ. ಆ ಮೂಲಕ ಬೆಜೆಪಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು ಎಂದು ರಾಹುಲ್​ ಹೇಳಿದರು.

    ಕೇಸರಿ ಶಾಲು ಧರಿಸಿ ಶ್ರೀರಾಮನವಮಿ ಆಚರಿಸಿದ ಮುಸ್ಲಿಮರು! ಪಾನಕ ಹಂಚಿ ನಾವೆಲ್ಲರೂ ಒಂದೇ ಎಂಬ ಸಂದೇಶ ರವಾನೆ

    ನಟ ರವಿಚಂದ್ರನ್​ಗೆ ಬೆಂಗಳೂರು ನಗರ ವಿವಿಯಿಂದ ಗೌರವ ಡಾಕ್ಟರೇಟ್

    ಖಾಸಗಿ ವಾಹನಕ್ಕೆ ಸರ್ಕಾರಿ ಲಾಂಛನ-ನಾಮಫಲಕ ಹಾಕಿಕೊಂಡು ಪ್ರವಾಸಕ್ಕೆ ಬಂದ ಗ್ರಾಪಂ ಅಧ್ಯಕ್ಷ!

    ಬೆಂಗ್ಳೂರಲ್ಲಿ ಹಾಡಹಗಲೇ ಮಗನಿಗೆ ಬೆಂಕಿ ಇಟ್ಟು ಕೊಂದ ತಂದೆ! ಅಪ್ಪಾ.. ಪ್ಲೀಸ್​ ಬೇಡಪ್ಪ… ಅಂದ್ರೂ ಕರಗಲಿಲ್ಲ ಕ್ರೂರಿ ಮನಸ್ಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts