More

    ಮಹಿಳೆ ಕಿಡ್ನಾಪ್ ಕೇಸ್​ಗೆ ಮಹತ್ವದ ತಿರುವು?: ಸಂತ್ರಸ್ತ ಮಹಿಳೆಯ ಹೇಳಿಕೆ ವಿಡಿಯೋ ವೈರಲ್​..!

    ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಕೇಸ್​ ಪ್ರಕರಣಕ್ಕೆ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಕೆ.ಆರ್.ನಗರ ಮಹಿಳೆ ಅಪಹರಣ ಕೇಸ್​ಗೆ ಸಂಬಂಧಿಸಿದಂತೆ ಸಂತ್ರಸ್ತೆಯನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುವ ಮೊದಲು ಮಾಡಲಾಗಿದೆ ಎನ್ನಲಾಗಿರುವ ವಿಡಿಯೋ ವೈರಲ್​ ಆಗಿದೆ.

    ಇದನ್ನೂ ಓದಿ: ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ 62 ವರ್ಷದ ವ್ಯಕ್ತಿ ಸಾವು: ಕಾರಣ ಹೀಗಿದೆ..!

    ವೈರಲ್​ ಆಗಿರೋ ವಿಡಿಯೋದಲ್ಲಿ ಏನಿದೆ ?: ನನ್ನನ್ನೂ ಯಾರೂ ಕಿಡ್ನಾಪ್ ಮಾಡಿಲ್ಲ, ನನ್ನ ಮಗ ಗೊತ್ತಿಲ್ಲದೇ ದೂರು ಕೊಟ್ಟಿದ್ದಾನೆ. ರೇವಣ್ಣ, ಪ್ರಜ್ವಲ್, ಭವಾನಿ ಅಕ್ಕನಿಂದ​ ರೇವಣ್ಣ ಕುಟುಂಬದಿಂದ ಯಾವುದೇ ತೊಂದರೆ ಆಗಿಲ್ಲ. ನಾನು ಸುರಕ್ಷಿತವಾಗಿದ್ದೇನೆ, ನನಗೆ ಯಾರಿಂದಲೂ ತೊಂದರೆಯಾಗಿಲ್ಲ. ಚೆನ್ನಾಗಿ ನೋಡಿಕೊಂಡಿದ್ದಾರೆ ಸಂಬಂಧಿಕರ ಮನೆಯಲ್ಲಿದ್ದೀನಿ, 4 ದಿನ ಹೊರಗೆ ಹೋಗಿದ್ದೀನಿ, ವಾಪಸ್ ಬರ್ತೀನಿ . ನಾನು ಕೂಲಿ ಮಾಡಿ ಬದುಕುತ್ತಿದ್ದೀನಿ. ನಮಗೆ ಯಾವುದೇ ಹಿಂಸೆ ಕೊಡಬೇಡಿ. ನಮಗೆ ಏನಾದ್ರೂ ತೊಂದರೆ ಆದರೆ ನೀವೇ ಹೊಣೆ ಎಂದು ಹೇಳಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts