More

    ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಕಾಳಿ ನದಿ ನೀರಲ್ಲಿ ಕೊಚ್ಚಿಹೋಗಿದ್ದ ವೃದ್ಧ 3 ದಿನ ಹೋರಾಡಿ ಸಾವನ್ನೇ ಗೆದ್ದ!

    ಕಾರವಾರ: ಆಯಸ್ಸು ಗಟ್ಟಿಯಾಗಿದ್ದರೆ ಕೂದಲೆ ಆಸರೆ ಸಿಕ್ಕರೂ ಅಪಾಯದಿಂದ ಪಾರಾಗ್ತಾರೆ ಎಂಬುದಕ್ಕೆ ಜೀವಂತ ಸಾಕ್ಷಿ ಈ ಘಟನೆ.

    ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಕಾಳಿ ನದಿಯ ಹಿನ್ನೀರಿಲ್ಲಿ ಕೊಚ್ಚಿ ಹೋಗಿದ್ದ ವೃದ್ಧ ಕಟರಾಯ್ ಕೋಠಾರಕರ್ ಎಂಬುವವರು ಸಣ್ಣದೊಂದು ಗಿಡ ಹಿಡಿದುಕೊಂಡು ಸತತ ಮೂರು ದಿನ ಸಾವು-ಬದುಕಿನ ಮಧ್ಯೆ ಹೋರಾಡಿ ಸಾವನ್ನೇ ಗೆದ್ದು ಬಂದಿದ್ದಾರೆ. ಇಂತಹ ಘಟನೆ ಕಾರವಾರ ತಾಲೂಕಿನ ಹಣಕೋಣದಲ್ಲಿ ನಡೆದಿದೆ.

    ಮೇ 16ರಂದು ಮೇಯಲು ಹೋಗಿದ್ದ ಕಟರಾಯ್ ಕೋಠಾರಕರ್​ರ ಮನೆಯ ಜಾನುವಾರು ವಾಪಸ್​ ಬಂದಿರಲಿಲ್ಲ. ಅಂದು ಸಂಜೆ ಜಾನುವಾರನ್ನು ಹುಡುಕಿಕೊಂಡು ಬರುವುದಾಗಿ ಕಟರಾಯ್ ಕೋಠಾರಕರ್​ ಹೊರಹೋಗಿದ್ದರು. ಆ ವೇಳೆ ತೌಕ್ತೆ ಚಂಡಮಾರುತ ಅಬ್ಬರಿಸುತ್ತಲೇ ಇತ್ತು. ಅವರೂ ವಾಪಸ್​ ಬಾರದಿದ್ದಾಗ ಭಯಗೊಂಡ ಮಗ ಎಲ್ಲೆಡೆ ಹುಡುಕಾಡಿದ್ದಾರೆ. ಗ್ರಾಮಸ್ಥರೊಂದಿಗೆ ಹಳ್ಳ, ಬಾವಿ ಎಲ್ಲೆಡೆ ಹುಡುಕಾಡಿದ್ದು, ಎರಡು ದಿನವಾದರೂ ಪತ್ತೆಯಾಗಿಲಿಲ್ಲ.

    ಕೊನೆಗೆ ಕಾಳಿ ನದಿಯ ಹಿನ್ನೀರಿನಲ್ಲಿ ಮುಳುಗಿದ್ದ ವೃದ್ಧ ಸಣ್ಣದೊಂದು ಗಿಡ ಹಿಡಿದುಕೊಂಡಿರುವುದು ಗೊತ್ತಾಗಿದೆ. ಕೂಡಲೇ ಗ್ರಾಮಸ್ಥರು ನೀರಿಗೆ ಇಳಿದು ಆತನನ್ನು ರಕ್ಷಣೆ ಮಾಡಿದ್ದಾರೆ. ಮೂರು ದಿನ ನೀರಿನಲ್ಲಿದ್ದ ಕಾರಣ ಕಟರಾಯ್ ಕೋಠಾರಕರ್​ರ ಆರೋಗ್ಯ ಸ್ವಲ್ಪ ಹದಗೆಟ್ಟಿದೆ. ಸದ್ಯ ಮನೆಯಲ್ಲಿ ಆರೈಕೆ ಮಾಡಲಾಗುತ್ತಿದೆ.

    ವಿವಾಹಿತೆ ಜತೆ ಪರಪುರುಷನ ಕಾಮದಾಟ! 5 ವರ್ಷದ ಅಕ್ರಮ ಸಂಬಂಧಕ್ಕೆ ಬಿತ್ತು ಮೂವರ ಹೆಣ

    ಬೆಳ್ಳಂಬೆಳಗ್ಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಭಯಾನಕ ಘಟನೆ! ಕಕ್ಕಾಬಿಕ್ಕಿಯಾಗಿ ಓಡಿದ ಕರೊನಾ ಸೋಂಕಿತರು, ಬೆಚ್ಚಿಬೀಳಿಸುತ್ತೆ ಆ ದೃಶ್ಯ

    ತಾಯಿ ಗರ್ಭದಿಂದ ಮಗುವಿನ ಕಾಲು ಹೊರ ಬಂದಿದೆ.. ಯಾರಾದರೂ ಹೆರಿಗೆ ಮಾಡಿ… ಆಸ್ಪತ್ರೆ ಬಾಗಿಲಲ್ಲಿ ಕುಟುಂಬಸ್ಥರ ಆಕ್ರಂದನ

    ಇನ್ನೆರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 24 ವರ್ಷದ ಪಿಎಸ್​ಐ ಕರೊನಾಗೆ ಬಲಿ!

    ಕರೊನಾ ಸೋಂಕಿನಿಂದ ಸತ್ತವನ ಮೃತದೇಹ ತಬ್ಬಿಕೊಂಡು ತುಟಿಗೆ ಮುತ್ತಿಟ್ಟ ಭೂಪ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts