More

    ಮನೆ ಬಾಡಿಗೆಗೆ ಇದೆ ಎಂದು ಜಾಹಿರಾತು ಹಾಕಿದ ಟೆಕ್ಕಿಗೆ 94 ಸಾವಿರ ರೂ. ಧೋಖಾ !

    ಬೆಂಗಳೂರು: ಕರೊನಾ 2ನೇ ಅಲೆ ದಿನಕ್ಕೊಂದು ಅವತಾರ ತಾಳುತ್ತಿರುವುದರಿಂದ ಆತಂಕಗೊಂಡ ಜನ ನಗರ ತೊರೆದು ಊರುಗಳಿಗೆ ತೆರಳುತ್ತಿರುವ ಪರಿಣಾಮ ಬಾಡಿಗೆಗಿರುವ ಹಲವು ಮನೆಗಳು ಖಾಲಿಯಾಗಿವೆ.

    ಇಲ್ಲೊಂದು ಪ್ರಕರಣದಲ್ಲಿ ಮನೆ ಬಾಡಿಗೆಗಿದೆ ಎಂದು ಜಾಹಿರಾತು ಹಾಕಿದ ಟೆಕ್ಕಿಗೆ ಸೇನಾಧಿಕಾರಿ ಸೋಗಿನಲ್ಲಿ ಕರೆ ಮಾಡಿದ ಸೈಬರ್ ವಂಚಕರು ಮುಂಗಡ ಹಣ ನೀಡುವ ನೆಪದಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತೆ ಸೂಚಿಸಿ 94 ಸಾವಿರ ರೂ. ಲಪಟಾಯಿಸಿದ್ದಾರೆ.

    ಸಿವಿ ರಾಮನ್ ನಗರ ನಿವಾಸಿ ಸುದರ್ಶನಮ್ (49) ವಂಚನೆಗೊಳಗಾದವರು.

    ಇದನ್ನೂ ಓದಿ; ಆಕ್ಸಿಜನ್ ಕಾನ್ಸಂಟ್ರೇಟರ್ ಬೇಕೆಂದು ಇಂಟರ್‌ನೆಟ್‌ ಹುಡುಕಿ ಹಣ ಕಳೆದುಕೊಂಡ ಉದ್ಯೋಗಿ!

    ನಗರದ ಪ್ರತಿಷ್ಠಿತ ಖಾಸಗಿ ಸಂಸ್ಥೆಯಲ್ಲಿ ಸ್‌ಟಾವೇರ್ ಇಂಜಿನಿಯರ್ ಆಗಿರುವ ಸುದರ್ಶನಮ್ ನಗರದಲ್ಲಿ ಸ್ವಂತ ಮನೆಯೊಂದನ್ನು ಬಾಡಿಗೆಗೆ ಕೊಟ್ಟಿದ್ದರು. ಬಾಡಿಗೆಗಿದ್ದವರು ಇತ್ತೀಚೆಗೆ ಮನೆ ಖಾಲಿ ಮಾಡಿಕೊಂಡು ಹೋಗಿದ್ದರು. ಹೀಗಾಗಿ ಸುದರ್ಶನ್ ಮ್ಯಾಜಿಕ್ ಬ್ರಿಕ್ಸ್ ವೆಬ್‌ಸೈಟ್‌ನಲ್ಲಿ ಮನೆ ಬಾಡಿಗೆಗೆ ಇದೆ ಎಂದು ಜಾಹಿರಾತು ಹಾಕಿದ್ದರು. ಮೇ 8ರಂದು ಅಪರಿಚಿತ ವ್ಯಕ್ತಿ ಅವದೇಶ್ ಕುಮಾರ್ ಎಂಬಾತ ಸುದರ್ಶನ್‌ಗೆ ಕರೆ ಮಾಡಿ ತಾನು ಸೇನೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಸೇನೆಯ ನಕಲಿ ಐಡಿಕಾರ್ಡ್ ಕಳುಹಿಸಿ ನಿಮ್ಮ ಮನೆ ಬಾಡಿಗೆಗೆ ಪಡೆದುಕೊಳ್ಳುವುದಾಗಿ ನಂಬಿಸಿದ್ದ.

    ಮೇ9 ರಂದು ಅವದೇಶ್ ಪರ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ, ತಾನೂ ಸೇನೆಯ ಅಧಿಕಾರಿ ಎಂದು ಪರಿಚಯಿಸಿಕೊಂಡು ಮುಂಗಡವಾಗಿ 40 ಸಾವಿರ ರೂ. ಪಾವತಿಸುವುದಾಗಿ ಗೂಗಲ್ ಪೇಯಲ್ಲಿ ಯುಪಿಐ ನಂಬರ್ ನಮೂದಿಸಲು ಸೂಚಿಸಿದ್ದ. ನಂತರ ಕೆಲ ಕ್ಯೂಆರ್ ಕೋಡ್‌ನ್ನು ಕಳುಹಿಸಿ ಸ್ಕಾೃನ್ ಮಾಡುವಂತೆ ಹೇಳಿದ್ದ. ಅದರಂತೆ ಸುದರ್ಶನಮ್ ಕ್ಯೂಆರ್ ಕೋಡ್ ಸ್ಕಾೃನ್ ಮಾಡುತ್ತಿದ್ದಂತೆ ಅವರ ಬ್ಯಾಂಕ್ ಖಾತೆಯಲ್ಲಿದ್ದ 94,699 ರೂ. ಕಡಿತಗೊಂಡಿದೆ. ಇದೀಗ ತಾನು ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆ ವೈಟ್‌ಫೀಲ್ಡ್ ಸಿಇಎನ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.

    ಇದನ್ನೂ ಓದಿ; ಸಾಮಾಜಿಕವಾಗಿ, ನೈತಿಕವಾಗಿ ಒಪ್ಪದ ಸಂಬಂಧ ಲಿವ್‌ ಇನ್‌ ರಿಲೇಷನ್‌ ಎಂದ ಹೈಕೋರ್ಟ್‌- ಜೋಡಿ ಅರ್ಜಿ ವಜಾ

    ಇದುವರೆಗೆ ಕೇವಲ ವಸ್ತುಗಳನ್ನು ಮಾರಾಟ ಮಾಡುವುದು, ಉಡುಗೊರೆ ನೀಡುವ ಹೆಸರಲ್ಲಿ ವಂಚಿಸುತ್ತಿದ್ದ ಸೈಬರ್ ವಂಚಕರು ಇದೀಗ ಮನೆ ಬಾಡಿಗೆಗೆ ಇದೆ, ವಸ್ತುಗಳು ಮಾರಾಟಕ್ಕಿವೆ ಎಂದು ಆನ್‌ಲೈನ್‌ನಲ್ಲಿ ಜಾಹಿರಾತು ಹಾಕುವವರನ್ನೇ ಟಾರ್ಗೆಟ್ ಮಾಡಲಾರಂಭಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts