More

    ಯಶಸ್ವಿ ರೋಬೋಟಿಕ್ ಮೂತ್ರಪಿಂಡ ಕಸಿ; ಖಾಸಗಿ ಆಸ್ಪತ್ರೆಯಲ್ಲಿ ಹೊಸ ದಾಖಲೆ

    ಬೆಂಗಳೂರು: ಕೊನೆಯ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಇಬ್ಬರಿಗೆ ರೋಬೋಟಿಕ್ ಸಹಾಯದಿಂದ ಸಂಕೀರ್ಣ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನು ಮಾಡುವಲ್ಲಿ ಖಾಸಗಿ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿದೆ.

    ಯೆಮೆನ್ ದೇಶದ 11 ವರ್ಷದ ಬಾಲಕ ಮತ್ತು ಬೆಂಗಳೂರಿನ 34 ವರ್ಷದ ಸ್ಟಾವೇರ್ ಉದ್ಯೋಗಿಗೆ ಕಿಡ್ನಿ ಸಮಸ್ಯೆ ಎದುರಾಗಿತ್ತು. ಕೊನೇ ಹಂತದ ಸಮಸ್ಯೆಯಿಂದ ಬಳಲುತ್ತಿದ್ದ ಈರ್ವರಿಗೂ ರೋಬೋಟ್ ತಂತ್ರಜ್ಞಾನ ಬಳಸಿ ಯಶಸ್ವಿ ಶಸಚಿಕಿತ್ಸೆ ನಡೆಸಲಾಗಿದೆ. ಯುರೋ ಆಂಕೊಲಾಜಿಸ್ಟ್ ಡಾ. ಮೋಹನ್ ಕೇಶವಮೂರ್ತಿ ಹಾಗೂ ನೆಫ್ರಾಲಜಿಸ್ಟ್ ಡಾ. ಎಸ್. ಮಂಜುನಾಥ್ ಅವರು ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದರು.

    ಯೆಮೆನ್ ದೇಶದ 11 ವರ್ಷದ ಅಹ್ಮದ್ ಎಂಬ ಬಾಲಕ ತನ್ನ ನಾಲ್ಕನೇ ವಯಸ್ಸಿನಿಂದಲೇ ಮೂತ್ರಪಿಂಡಕ್ಕೆ ಸಂಬಂಧಿಸಿದ ಸ್ಟೆರಾಯ್ಡ್ ರೆಸಿಸ್ಟೆಂಟ್ ನೆಫ್ರೋಟಿಕ್ ಸಿಂಡ್ರೋಮ್ (ಎಸ್‌ಆರ್‌ಎನ್‌ಎಸ್)ನಿಂದ ಬಳಲುತ್ತಿದ್ದ. ಮೂತ್ರದಲ್ಲಿ ಪ್ರೋಟೀನ್, ರಕ್ತದಲ್ಲಿನ ಕಡಿಮೆ ಮಟ್ಟದ ಪ್ರೋಟೀನ್, ಅಧಿಕ ಕೊಲೆಸ್ಟ್ರಾಲ್ ಮತ್ತು ಊತದಿಂದ ಕೂಡಿರುತ್ತದೆ. ಬಾಲಕನಿಗೆ ಈಗಾಗಲೇ ಸಾಕಷ್ಟು ಕಡೆ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗಿರಲಿಲ್ಲ. ಫೋರ್ಟಿಸ್ ಆಸ್ಪತ್ರೆಯಲ್ಲಿ ಬಾಲಕನ ಚಿಕ್ಕಮ್ಮನ ಒಂದು ಕಿಡ್ನಿಯನ್ನು ರೋಬೋಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

    ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಚೇತನ್ ಎಂಬುವವರು ಮೊದಲಿನಿಂದಲೂ ಕೇವಲ ಒಂದು ಕಿಡ್ನಿಯನ್ನು ಮಾತ್ರ ಹೊಂದಿದ್ದು, ಅಧಿಕ ರಕ್ತದೊತ್ತಡದ ಕಾರಣಕ್ಕೆ ಕಾಯಿಲೆಗೆ ತುತ್ತಾಗಿದ್ದರು. ಕೊನೆಯ ಹಂತಕ್ಕೆ ತಲುಪಿದ್ದ ಸಮಸ್ಯೆಯಿಂದ ಜೀವಕ್ಕೆ ಅಪಾಯವಿತ್ತು. 74 ವರ್ಷದ ಅವರ ತಂದೆಯ ಕಿಡ್ನಿಯನ್ನೇ ರೋಬೋಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಚೇತನ್ ಅವರಿಗೆ ಅಳವಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts