More

    ಚಾಮುಂಡಿ ಹುಂಡಿ ಹಣ ಎಣಿಕೆ: ಆಷಾಢ ಮಾಸದಲ್ಲಿ ಕುಸಿತ ಕಂಡ ಹಣ ಸಂಗ್ರಹ

    ಮೈಸೂರು: ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯ ಶನಿವಾರ ನಡೆದಿದ್ದು, ಆಗಸ್ಟ್ ತಿಂಗಳಿನಲ್ಲಿ ದೇವಸ್ಥಾನದಲ್ಲಿ 82,16,754 ಲಕ್ಷ ರೂ. ಸಂಗ್ರಹವಾಗಿದೆ. ಜುಲೈ ತಿಂಗಳಿಗೆ ಹೋಲಿಕೆ ಮಾಡಿದರೆ ಆಗಸ್ಟ್​ನಲ್ಲಿ ಹುಂಡಿ ಹಣದಲ್ಲಿ ಇಳಿಕೆ ಕಂಡುಬಂದಿದೆ.

    ಜುಲೈ ತಿಂಗಳಿನಲ್ಲಿ 1.13 ಕೋಟಿ ರೂ. ಸಂಗ್ರಹವಾಗಿತ್ತು. ಜುಲೈ ತಿಂಗಳಿನಲ್ಲಿ ಆಷಾಢ ಶುಕ್ರವಾರ ಪೂಜಾ ಮಹೋತ್ಸವ ಇದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬೆಟ್ಟಕ್ಕೆ ಭೇಟಿ ನೀಡಿದ್ದರು. ಆದರೆ, ಆಗಸ್ಟ್ ತಿಂಗಳಿನಲ್ಲಿ ಭಕ್ತಾದಿಗಳ ಸಂಖ್ಯೆ ಸ್ವಲ್ಪ ಇಳಿಮುಖವಾಗಿತ್ತು.

    ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ಆಷಾಢ ಶುಕ್ರವಾರ ಪೂಜಾ ಮಹೋತ್ಸವಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಶನಿವಾರ, ಭಾನುವಾರವೂ ಭಕ್ತಾದಿಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ, ಭಕ್ತರು ಸೋಮವಾರದಿಂದ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜುಲೈ ತಿಂಗಳಿನಲ್ಲಿ ಹುಂಡಿ ಹಣದಲ್ಲಿ ಸ್ವಲ್ಪ ಏರಿಕೆ ಕಂಡಿತ್ತು ಎಂದು ಮುಜರಾಯಿ ತಹಸೀಲ್ದಾರ್ ಯತಿರಾಜ್ ‘ವಿಜಯವಾಣಿ’ಗೆ ಮಾಹಿತಿ ನೀಡಿದರು.

    ನೋಟು ಅಮಾನ್ಯೀಕರಣದಿಂದ ರದ್ದಾದ 1,000 ಹಾಗೂ 500 ಮುಖ ಬೆಲೆಯ ತಲಾ ಒಂದು ನೋಟುಗಳು ಹುಂಡಿ ಎಣಿಕೆ ಸಂದರ್ಭ ಕಂಡು ಬಂದಿದೆ. ಗರಿಷ್ಠ ಮುಖಬೆಲೆಯ ನೋಟುಗಳು ಅಮಾನ್ಯೀಕರಣಗೊಂಡು 5 ವರ್ಷ ಕಳೆದರೂ ಇಂದಿಗೂ ಚಾಮುಂಡೇಶ್ವರಿ ದೇವಸ್ಥಾನದ ಹುಂಡಿ ಎಣಿಕೆ ಸಂದರ್ಭ ಇವು ಕಂಡು ಬರುತ್ತಿವೆ.

    ಕುಪ್ಪೂರು ಗದ್ದುಗೆ ಮಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

    ಎಗ್​ರೈಸ್- ಗೋಬಿ ಮಂಚೂರಿ ತಿನ್ನಿಸುವ ಆಸೆ ಹುಟ್ಟಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts