More

    ಸ್ವಾಮೀಜಿಗಳ ಮೇಲೆ ನನಗೆ ಅಪಾರ ಗೌರವ ಇದೆ: ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾದ ಸಿದ್ದರಾಮಯ್ಯ!

    ಮೈಸೂರು: ಹಿಜಾಬ್​ ವಿಚಾರದಲ್ಲಿ ಸ್ವಾಮೀಜಿಗಳನ್ನು ಎಳೆದುತಂದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಭುಗಿಲೇಳುತ್ತಿದ್ದಂತೆ ಡ್ಯಾಮೇಜ್ ಕಂಟ್ರೋಲ್​ ಸಿದ್ದು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ನೀವೆ ಪ್ರಶ್ನೆ ಕೇಳ್ತೀರಿ, ಕಾಂಟ್ರವರ್ಸಿನೂ ನೀವೇ ಮಾಡ್ತೀರಿ ಎಂದು ಸುದ್ದಿಗಾರರಿಗೆ ಹೇಳಿದ ಸಿದ್ದರಾಮಯ್ಯ, ನಮ್ಮ ಹೆಣ್ಣು ಮಕ್ಕಳು ಕೂಡ ದುಪ್ಪಟ್ಟಾ ಹಾಕ್ತಾರೆ ಎಂದಿದ್ದೆ. ಹಿಜಾಬ್ ಬಗ್ಗೆ ನಾನು ಪ್ರಶ್ನೆಯನ್ನೇ ಮಾಡಿಲ್ಲ. ಹಿಜಾಬ್ ಬೇರೆ, ದುಪ್ಪಟ್ಟಾ ಬೇರೆ. ಬುರ್ಖಾ ಬೇರೆ. ಹಿಂದಿನಲ್ಲಿ ಉರ್ದುನಲ್ಲಿ ದುಪ್ಪಟ್ಟಾ ಅಂತ ಕರೀತಾರೆ ಅದನ್ನೇ ನಾನು ಹೇಳಿದೆ ಸಮರ್ಥಿಸಿಕೊಂಡರು.

    ನಾನು ಸ್ಪಷ್ಟವಾಗಿ ಹೇಳುತ್ತೇನೆ. ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಈಗಲೂ ಇದೆ, ಮುಂದೆಯೂ ಇರತ್ತೆ. ಯಾವತ್ತೂ ಕೂಡ ಸ್ವಾಮೀಜಿಗಳಿಗೆ ಅಗೌರವವಾಗಿ ನಡೆದುಕೊಂಡಿರುವ ನಿದರ್ಶನ ಇಲ್ಲ. ಅವರ ಜತೆ ಸಂಬಂಧ ಮೊದಲಿನಿಂದಲೂ ಚೆನ್ನಾಗಿದೆ. ಸಮವಸ್ತ್ರದ ಜತೆ ಹೆಣ್ಣುಮಕ್ಕಳಿಗೆ ದುಪ್ಪಟ್ಟಾ ಹಾಕಲು ಅವಕಾಶ ಮಾಡಿ ಕೊಡಿ. ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಪರೀಕ್ಷೆ ಬರೆಯಲು ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದ್ದೇನೆ ಎನ್ನುತ್ತಾ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದರು.

    ನಾನು ಬಿಜೆಪಿಗೆ ಉತ್ತರ ಕೊಡಲ್ಲ. ಹಿಜಾಬ್​ಗೆ ಸ್ವಾಮೀಜಿಗಳ ಶಿರವಸ್ತ್ರವನ್ನ ಹೋಲಿಕೆ ಮಾಡಿಲ್ಲ. ಹಿಜಾಬ್ ಪ್ರಸ್ತಾಪವನ್ನೇ ಮಾಡಿಲ್ಲ. ಸದನದಲ್ಲೂ ದುಪ್ಪಟ್ಟಾ ಹಾಕೋದಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳಿದ್ದೇನೆ. ನ್ಯಾಯಾಲಯಕ್ಕೂ ಗೌರವ ಕೊಡಬೇಕು. ಸರ್ಕಾರ ಪರೀಕ್ಷೆ ಬರೆಯುವುದಕ್ಕೂ ಅವಕಾಶ ಮಾಡಿಕೊಡಬೇಕು. ಸಮವಸ್ತ್ರ ಹಾಕಿಕೊಳ್ಳಬೇಕು. ದುಪ್ಪಟ್ಟಾ ಹಾಕೋದಕ್ಕೂ ಅವಕಾಶ ಮಾಡಿಕೊಡಬೇಕು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

    ಹಿಂದೂ ಹೆಣ್ಣು ಮಕ್ಕಳು ತಲೆ ಮೇಲೆ ಬಟ್ಟೆ ಹಾಕಲ್ವಾ? ಇದನ್ನೂ ಪ್ರಶ್ನಿಸ್ತೀರಾ?… ಹಿಜಾಬ್​ ಕೆಂಡ ಕೆದಕಿದ ಸಿದ್ದರಾಮಯ್ಯ

    ಒಂದೇ ದಿನ ವಿದ್ಯಾರ್ಥಿ-ಶಿಕ್ಷಕಿ ನಾಪತ್ತೆ! ಮದ್ವೆ ಆಗಿ ಬಾಲಕನ ಜತೆ ಸಂಸಾರ ನಡೆಸುತ್ತಿದ್ದಾಕೆ ಸಿಕ್ಕಿಬಿದ್ದದ್ದೇ ರೋಚಕ

    ಮಾ.28ರಿಂದ ಎಸ್ಸೆಸ್ಸೆಲ್ಸಿ ಎಕ್ಸಾಂ: ಹಿಜಾಬ್​ ಧರಿಸಿ ಬಂದ್ರೆ ಪರೀಕ್ಷೆಗಿಲ್ಲ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts