More

    ಬಾಲ್ಕನಿಯಿಂದ ಕೆಳಗೆ ಪಲ್ಟಿ ಹೊಡೆದ ದಂಪತಿ! ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ

    ಪೀಟರ್ಸ್​ಬರ್ಗ್​: ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಎನ್ನುತ್ತಾರೆ. ಆದರೆ ಇಲ್ಲೊಂದು ಜೋಡಿ ಬೆಳಿಗ್ಗೆಯೇ ಜಗಳ ಆರಂಭಿಸಿದ್ದು ಅವರ ಕಥೆ ಏನಾಯಿತು ಎಂಬುದನ್ನು ನೀವೇ ನೋಡಿ..

    ರಷ್ಯಾದ ಪೀಟರ್ಸ್​ಬರ್ಗ್​ನಲ್ಲಿ ಓಲ್ಗಾ ವೋಲ್ಕೊವಾ ಮತ್ತು ಯೆವ್ಗೆನಿ ಕಾರ್ಲಗಿನ್ ವಾಸಿಸುತ್ತಿದ್ದಾರೆ. ಒಬ್ಬ ಮಗನೂ ಇರುವ ಈ ಜೋಡಿ ಶನಿವಾರ ಬೆಳಗ್ಗೆಯೇ ಜಗಳ ಆರಂಭಿಸಿದೆ. ಜಗಳ ತಾರಕಕ್ಕೇರಿದ್ದು, ಇಬ್ಬರು ಮನೆಯ ಬಾಲ್ಕನಿಗೆ ಬಂದು ಕಿತ್ತಾಡಿಕೊಳ್ಳಲಾರಂಭಿಸಿದ್ದಾರೆ. ಕಿತ್ತಾಟದ ಫೋರ್ಸ್​ಗೆ ಬಾಲ್ಕನಿಯ ಅಡ್ಡಪಟ್ಟಿ ಮುರಿದಿದ್ದು, ಇಬ್ಬರೂ ಒಟ್ಟಿಗೆ ಸುಮಾರು 25 ಅಡಿ ಕೆಳಗೆ ಬಿದ್ದಿದ್ದಾರೆ.

    ಮನೆಯ ಬಾಲ್ಕನಿಯಿಂದ ಸೀದಾ ಫುಟ್​ಪಾತ್​ಗೆ ದಂಪತಿ ಬಿದ್ದಿದ್ದಾರೆ. ಈ ದೃಶ್ಯವನ್ನು ದಾರಿಹೋಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್​ ಇಬ್ಬರ ಪ್ರಾಣಕ್ಕೆ ಏನೂ ಹಾನಿಯುಂಟಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್)

    ಮಗನ ಕಷ್ಟ ನೋಡಲಾಗುತ್ತಿಲ್ಲ, ದಯಾಮರಣ ಕೊಡಿ ಎಂದು ಅರ್ಜಿ ಸಲ್ಲಿಸಿದ ಎರಡೇ ಗಂಟೆಗಳಲ್ಲಿ ಮಡಿಲಲ್ಲೇ ಪ್ರಾಣ ಬಿಟ್ಟ ಮಗ

    ‘ಬ್ಲ್ಯಾಕ್​ಫಂಗಸ್​ ಆಗಿದೆ.. ಕಣ್ಣು, ದವಡೆ ತೆಗಿಲೇಬೇಕು’ ಎಂದರೂ ಕೇಳದೆ ರೋಗಿಯನ್ನು ಮಾಂತ್ರಿಕನ ಬಳಿ ಕರೆತಂದ ಗ್ರಾಮಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts