More

    ಸಿಂಧೂರಿ ವರ್ಗಾವಣೆ ಆಗಲ್ಲ, ಶಿಲ್ಪಾನಾಗ್ ರಾಜೀನಾಮೆಗೆ ಕಿಮ್ಮತ್ತು ಸಿಗೋದೆ ಡೌಟು! ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ ​

    ಮೈಸೂರು: ಹಾವು ಸಾಯಲ್ಲ, ಕೋಲು ಮುರಿಯಲ್ಲ ಎಂಬ ಮಾತಿನಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜೀನಾಮೆಯೂ ಅಂಗೀಕಾರ ಆಗಲ್ಲ, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯೂ ಇಲ್ಲ ಎಂಬ ಮಾಹಿತಿ ‘ದಿಗ್ವಿಜಯ ನ್ಯೂಸ್‌’ಗೆ ಉನ್ನತ ಮೂಲಗಳಿಂದ ಲಭ್ಯವಾಗಿದೆ.

    ರೋಹಿಣಿ ಸಿಂಧೂರಿ ವೈಯಕ್ತಿಕವಾಗಿ ಟಾರ್ಗೆಟ್​ ಮಾಡಿ ನಿರಂತರವಾಗಿ ಕಿರುಕುಳ ಕೊಡುತ್ತಿದ್ದಾರೆ. ಅವರೂ ಒಬ್ಬ ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಐಎಎಸ್ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ? ನನ್ನನ್ನು ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದೆ. ಅವರ ದುರಾಹಂಕಾರ, ಹೀಗೋದಿಂದ ನಮ್ಮ ಕೆಲಸಕ್ಕೆ ಮನ್ನಣೆ ಸಿಗುತ್ತಿಲ್ಲ. ಉಸಿರುಗಟ್ಟಿಸುವ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಐಎಎಸ್​ ಹುದ್ದೆಗೇ ರಾಜೀನಾಮೆ ಕೊಟ್ಟೀದ್ದೀನಿ ಎಂದು ಮಾಧ್ಯಮಗಳ ಮುಂದೆ ಘೋಷಿಸುವ ಮೂಲಕ ಶಿಲ್ಪಾನಾಗ್​ ಭಾರೀ ಸಂಚಲನ ಮೂಡಿಸಿದ್ದರು. ಈ ವಿದ್ಯಮಾನ ಕಿತ್ತಾಟಕ್ಕೆ ಮಾತ್ರ ಸಮೀತವಾಗಲಿದ್ದು, ಶಿಲ್ಪಾನಾಗ್ ರಾಜೀನಾಮೆಗೆ ಕಿಮ್ಮತ್ತು ಸಿಗೋದೆ ಅನುಮಾನ.

    ಮೇಲಧಿಕಾರಿಯಿಂದ ಮಾನಸಿಕ ಕಿರುಕುಳ ಅನ್ನುವ ಕಾರಣ ರಾಜೀನಾಮೆಗೆ ಸೂಕ್ತ ಕಾರಣವೇ ಅಲ್ಲ. ಹೊಂದಾಣಿಕೆಯಿಂದ ಕೆಲಸ ಮಾಡಿ ಅಂತ ಶಿಲ್ಪಾನಾಗ್‌ಗೆ ತಾಕೀತು ಮಾಡುವ ಸಾಧ್ಯತೆ ಹೆಚ್ಚಿದೆ. ಇನ್ನು ಜಿಲ್ಲಾಧಿಕಾರಿ ವರ್ತನೆ ಬಗ್ಗೆ ಎಲ್ಲೆಡೆ ಅಸಾಮಾಧಾನ‌ ಇದೆ. ಸಚಿವರು, ಶಾಸಕರು ಡಿಸಿ ವಿರುದ್ಧ ಹೇಳಿದ ದೂರು ಕೇಳಿ ಕೇಳಿ ಸಿಎಂಗೂ ಸಾಕಾಗಿದೆ. ಆದರೆ, ವರ್ಗಾವಣೆಗೆ ನೀಡಬಹುದಾದಷ್ಟು ರೋಹಿಣಿ ಸಿಂಧೂರಿ ವಿರುದ್ಧ ಪ್ರಬಲ ಆಡಳಿತಾತ್ಮಕ ಕಾರಣವೇ ಇಲ್ಲ. ತಾವೇ ಪೋಸ್ಟ್ ಮಾಡಿದ ಅಧಿಕಾರಿಯನ್ನು ತಾವೇ ವರ್ಗಾವಣೆ ಮಾಡಿದ್ರೆ ತಪ್ಪು ಸಂದೇಶ ರವಾನಿಸಬಹುದು ಎಂಬುದು ಸರ್ಕಾರದ ಚಿಂತನೆ.

    ಸಿಎಟಿ, ಹೈಕೋರ್ಟ್‌ಗೆ ಹಿಂದಿನ ಜಿಲ್ಲಾಧಿಕಾರಿ ಬಿ.ಶರತ್ ದೂರು ಸಲ್ಲಿಸಿದ್ದಾರೆ. ಒಂದು ವೇಳೆ ಹೈಕೋರ್ಟ್​ನ ಆದೇಶ ಬಂದರೆ ಮಾತ್ರ ರೋಹಿಣಿ ‌ಸಿಂಧೂರಿ‌ ವರ್ಗಾವಣೆ ಆಗಲಿದೆ. ಇಲ್ಲವಾದರೆ ರೋಹಿಣಿ ಸಿಂಧೂರಿ ಮತ್ತು ಶಿಲ್ಪಾನಾಗ್ ಮೈಸೂರಿನಲ್ಲಿಯೇ ಮುಂದುವರಿಯಲಿದ್ದಾರೆ.

    ಇನ್ನು ನಿನ್ನೆ (ಶುಕ್ರವಾರ) ಮೈಸೂರಿಗೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ರವಿಕುಮಾರ್​, ಶಿಲ್ಪಾನಾಗ್ ಅವರ ರಾಜೀನಾಮೆ ಪತ್ರ ಬಂದಿಲ್ಲ. ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ ಎಂದ್ದಿದ್ದರು. ಈ ಹೇಳಿಕೆಯು ರಾಜೀನಾಮೆ ವಿದ್ಯಮಾನವೇ ಹೈಡ್ರಾಮ, ಬೆದರಿಕೆ ತಂತ್ರಕ್ಕೆ ಶಿಲ್ಪಾನಾಗ್ ಮುಂದಾಗಿದ್ದಾರಾ? ಎಂಬ ಅನುಮಾನ ಹುಟ್ಟುಹಾಕಿತ್ತು.

    ಮೈಸೂರಿನಲ್ಲಿ ಇಂಜಿನಿಯರ್​ ಸಾವು! 2 ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದವರ ಬಾಳಿಗೆ ಕೊಳ್ಳಿ ಇಟ್ಟಿದ್ದೇನು?

    ಹಿರಿಯ ನಟಿ ಬಿ. ಜಯಾರ ಮೃತದೇಹವನ್ನ ಕಸದರಾಶಿ ಬಳಿ ಇಟ್ಟು ಅವಮಾನ! ವಿಡಿಯೋ ವೈರಲ್​

    ರಾಜ್ಯದಲ್ಲಿ ಜುಲೈ 1ರಿಂದ ಶಾಲಾ ಕಾಲೇಜು ಆರಂಭ

    ಕೋವಿಡ್ ಆಸ್ಪತ್ರೆಯಲ್ಲಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಪ್ರೇಮಿಗಳು! ಇವರ ಕೃತ್ಯ ಕೇಳಿದ್ರೆ ಹಿಡಿಶಾಪ ಹಾಕೋದು ಗ್ಯಾರಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts