More

    ತನ್ನ ಮಗ ಜನರಲ್​ ಮ್ಯಾನೇಜರ್​ ಆಗಬೇಕೆಂದು ಆಸೆಪಟ್ಟ ತಂದೆಗೆ ಮಹಾಮೋಸ! 70 ಲಕ್ಷ ರೂ. ಕಳಕೊಂಡು ಕಂಗಾಲು

    ಶಿವಮೊಗ್ಗ: ರೈಲ್ವೆ ಇಲಾಖೆಯಲ್ಲಿ ಮಗ ಜನರಲ್ ಮ್ಯಾನೇಜರ್ ಆಗಬೇಕೆಂದು ಬಯಸಿದ್ದ ವ್ಯಕ್ತಿಯೊಬ್ಬ ಮಧ್ಯವರ್ತಿಗೆ 70 ಲಕ್ಷ ರೂ. ಕೊಟ್ಟು ಮೋಸ ಹೋಗಿದ್ದಾರೆ.

    ಮಲ್ಲೇನಹಳ್ಳಿಯ ರಂಗನಾಥ್ ಎಂಬುವರಿಗೆ 2019ರಲ್ಲಿ ಮಹಿಳೆಯೊಬ್ಬರ ಮೂಲಕ ಆಂಧ್ರಪ್ರದೇಶದ ಆನಂದಪುರ ಜಿಲ್ಲೆಯ ಹೇಮಾವತಿ ತಾಲೂಕಿನ ಬಿ.ಚಿಕ್ಕಣ್ಣ ಎಂಬುವರ ಪರಿಚಯವಾಗಿತ್ತು. ಆತ ತಾನು ರೈಲ್ವೆ ಇಲಾಖೆ ವ್ಯವಸ್ಥಾಪಕ. ನಮ್ಮೂರಿನ ಅನೇಕರಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸಿದ್ದೇನೆ. ಕೆಲವರು ಉನ್ನತ ಸ್ಥಾನದಲ್ಲಿದ್ದಾರೆ. ನಿಮ್ಮ ಮಗನಿಗೂ ರೈಲ್ವೆ ಇಲಾಖೆಯಲ್ಲಿ ಜನರಲ್ ಮ್ಯಾನೇಜರ್ ಹುದ್ದೆ ಕೊಡಿಸುತ್ತೇನೆ. ಆದರೆ ಅದಕ್ಕೆ ಸ್ವಲ್ಪ ಹಣ ಖರ್ಚಾಗುತ್ತದೆ ಎಂದು ಪುಸಲಾಯಿಸಿದ್ದ.

    ಇದನ್ನು ನಂಬಿದ ರಂಗನಾಥ್, ಮಗನಿಗೆ ರೈಲ್ವೆ ಇಲಾಖೆಯಲ್ಲಿ ಒಳ್ಳೆಯ ಉದ್ಯೋಗ ಸಿಗುತ್ತೆ ಎಂಬ ಆಸೆಯಲ್ಲಿ 2019 ರಿಂದ 2021ರ ಅಕ್ಟೋಬರ್‌ವರೆಗೆ ಹಲವು ಕಂತಿನಲ್ಲಿ 87,53,920 ರೂಪಾಯಿಯನ್ನು ಚಿಕ್ಕಣ್ಣ ಎಂಬುವರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ಆದರೆ, ರೈಲ್ವೆ ಇಲಾಖೆಯಿಂದ ರಂಗನಾಥ್​ರ ಮಗನಿಗೆ ನೇಮಕಾತಿ ಪತ್ರ ಮಾತ್ರ ಬರಲಿಲ್ಲ. ಅತ್ತ ಮಗನಿಗೆ ಕೆಲಸವೂ ಸಿಗದೆ, ಇತ್ತ ನೀಡಿದ ಲಕ್ಷಾಂತರ ರೂ. ಕೈ ಸೇರುವ ಸಾಧ್ಯತೆಯೂ ಕಾಣದೆ ರಂಗನಾಥ್ ಕಂಗಾಲಾಗಿದ್ದಾರೆ.

    ಸತತ ಪ್ರಯತ್ನದ ನಡುವೆ ಪದೇಪದೆ ಆಂಧ್ರಪ್ರದೇಶದಕ್ಕೆ ಹೋಗಿ ಚಿಕ್ಕಣ್ಣನನ್ನು ಹಿಡಿದುಕೊಂಡು ಹೇಗೋ 16.90 ಲಕ್ಷ ರೂಪಾಯಿಯನ್ನು ರಂಗನಾಥ್ ವಸೂಲಿ ಮಾಡಿದ್ದಾರೆ. ಈಗ ಚಿಕ್ಕಣ್ಣ ಕೈಗೂ ಸಿಗುತ್ತಿಲ್ಲ, ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಬಾಕಿ 70 ಲಕ್ಷ ರೂ ಕಳೆದುಕೊಳ್ಳವ ಭೀತಿಯಲ್ಲಿ ಹೊಳೆಹೊನ್ನೂರು ಪೊಲೀಸ್​ ಠಾಣೆ ಮೆಟ್ಟಿಲೇರಿದ ರಂಗನಾಥ್, ವಂಚಕನ ವಿರುದ್ಧ ದೂರು ದಾಖಲಿಸಿ ಹಣ ಕೊಡಿಸುವಂತೆ ಮನವಿ ಮಾಡಿದ್ದಾರೆ.

    ಯೋಗ ಕ್ಲಾಸ್​​ನಲ್ಲಿ ಪರಪುರಷನ ಜತೆ ಲವ್ವಿಡವ್ವಿ! ಪತ್ನಿಯ ಈ ಅಸಹ್ಯ ಗಂಡನಿಗೆ ತಿಳಿಯುವ ಮುನ್ನವೇ ಘೋರ ದುರಂತ

    ಮದ್ವೆ ಮಂಟಪಕ್ಕೆ ಹೊರಡುವ ಮುನ್ನವೇ ವರ ಮನೆಯಲ್ಲಿ ದುರಂತ: ಅಯ್ಯೋ ವಿಧಿಯೇ ಇನ್ನೊಂದು ದಿನ ಬಿಡಬಾರದಿತ್ತೇ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts