More

    ಸೆಮಿಪೈನಲ್​ನಿಂದ ಹಿಂದೆ ಸರಿದ ರಾಫೆಲ್ ನಡಾಲ್: ಕಿಬ್ಬೊಟ್ಟೆ ನೋವಿಂದ ಸ್ಪೇನ್​ ದಿಗ್ಗಜನ ಕನಸು ಭಗ್ನ

    ಪ್ಯಾರಿಸ್: ಸ್ಪೇನ್ ದಿಗ್ಗಜ ರಾಫೆಲ್ ನಡಾಲ್ ಅವರು ವಿಂಬಲ್ಡನ್​ ಪುರುಷರ ಸಿಂಗಲ್ಸ್​ ವಿಭಾಗದ ಸೆಮಿಪೈನಲ್​ ಪಂದ್ಯದಿಂದ ಹಿಂದೆ ಸರಿದ್ದು, ಹ್ಯಾಟ್ರಿಕ್​ ಗ್ರಾಂಡ್ ಸ್ಲಾಂ ಪ್ರಶಸ್ತಿ ಕನಸು ಭಗ್ನಗೊಂಡಿದೆ. ತೀವ್ರವಾಗಿ ಕಿಬ್ಬೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ನಡಾಲ್​ ಈ ಪಂದ್ಯದಿಂದ ಹೊರ ಬರುವುದಾಗಿ ಗುರುವಾರ ಘೋಷಿಸಿದ್ದಾರೆ. ಸೆಮೀಸ್​ನಲ್ಲಿ ಎದುರಾಳಿಯಾಗಬೇಕಿದ್ದ ಆಸ್ಟ್ರೇಲಿಯಾದ ನಿಕ್​ ಕಿರ್ಗಿಯೋಸ್​ ಮೊಟ್ಟ ಮೊದಲ ಬಾಲಿಗೆ ಗ್ರಾಂಡ್​ ಸ್ಲಾಂ ಫೈನಲ್​ಗೇರಿದ್ದಾರೆ.

    36 ವರ್ಷ ವಯಸ್ಸಿನ ರಾಫೆಲ್​ ನಡಾಲ್​, 22 ಬಾರಿ ಟೆನಿಸ್ ಗ್ರಾಂಡ್‌ ಸ್ಲಾಮ್ ಪ್ರಶಸ್ತಿ ಪಡೆದಿದ್ದು, ಈ ಭಾರಿ 23ನೇ ಗ್ರಾಂಡ್‌ ಸ್ಲಾಮ್ ಪ್ರಶಸ್ತಿಯನ್ನ ತನ್ನ ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದರು. ಜತೆಗೆ 1969ರ ಬಳಿಕ ಕ್ಯಾಲೆಂಡರ್​ ಸ್ಲಾಂ ಸಾಧಿಸಿದ ಮೊದಲ ಆಟಗಾರ ಎನಿಸಿಕೊಳ್ಳುವ ಆಸೆಯಲ್ಲಿ ನಡಾಲ್​ ಇದ್ದರು. ಆದರೆ, ಅತೀವವಾಗಿ ಕಾಣಿಸಿಕೊಂಡ ಹೊಟ್ಟೆನೋವು ಅವರ ಎಲ್ಲ ಆಸೆಯನ್ನೂ ನುಚ್ಚು ನೂರು ಮಾಡಿತು.

    ಬುಧವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ 11ನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ವಿರುದ್ಧ 5 ಸೆಟ್​ಗಳ ಮ್ಯಾರಾಥಾನ್​ ಕಾದಾಟದಲ್ಲಿ ಹೊಟ್ಟೆನೋವಿನ ನಡುವೆಯೂ ನಡಾಲ್ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಪಂದ್ಯದ ವೇಳೆಯೇ ನಡಾಲ್​ ಅವರಿಗೆ ಹೊಟ್ಟೆ ನೋವು ಬಾಧಿಸಿತ್ತು. ಈ ಸಂದರ್ಭದಲ್ಲಿ ನಡಾಲ್​ ಅವರು ವಿವಿಧ ಸ್ಕ್ಯಾನ್​ಗೆ ಒಳಗಾಗಿದ್ದರು. ಗಯಾದ ಗಂಭೀರತೆ ಅರಿತು ಪಂದ್ಯದಿಂದಲೇ ಹೊರ ನಡೆಯುವ ನಿರ್ಧಾರ ಪ್ರಕಟಿಸಿದರು.

    ಕಳೆದ ತಿಂಗಳು ರೋಲ್ಯಾಂಡ್ ಗ್ಯಾರಸ್‌ನಲ್ಲಿ ನಡೆದ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ರಾಫೆಲ್ ನಡಾಲ್ ದಾಖಲೆಯ 14ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ದಾಖಲೆಯ 22ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನೊಂದಿಗೆ ನಗೆಬೀರಿದ್ದರು. ಈ ಪಂದ್ಯದ ವೇಳೆಯೂ ನಡಾಲ್​ ಹೊಟ್ಟೆನೋವಿನಿಂದ ಬಳಲುತ್ತಿದ್ದರು.

    ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ: ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ

    ಇನ್ಫಿ ಮೂರ್ತಿ ಅಳಿಯ ರಿಷಿ ಸುನಾಕ್​ಗೆ ಬ್ರಿಟನ್​ ಪ್ರಧಾನಿ ಸ್ಥಾನ ಒಲಿಯುವ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts