More

    ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಶಿಕ್ಷೆ? ಇನ್ನೂ ಹತ್ತು ಸಲ ತನಿಖೆ ಮಾಡಲಿ… ಎಚ್​ಡಿಕೆ ಬಳಿ ಕಣ್ಣೀರಿಟ್ಟ PSI ಅಭ್ಯರ್ಥಿಗಳು

    ಹುಬ್ಬಳ್ಳಿ: ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಇಡೀ ಪರೀಕ್ಷೆಯನ್ನೇ ರದ್ದು ಮಾಡಿ ಮರುಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರ ಬೆನ್ನಲ್ಲೇ ಪಿಎಸ್​ಐ ಹುದ್ದೆಗೆ ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ಹುಬ್ಬಳ್ಳಿ ನಗರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದಾರೆ.

    ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಶಿಕ್ಷೆ? ಇನ್ನೂ ಹತ್ತು ಸಲ ತನಿಖೆ ಮಾಡಲಿ. ಆದ್ರೆ ಪ್ರಾಮಾಣಿಕರಿಗೆ ಅನ್ಯಾಯ ಮಾಡೋದು ಬೇಡ ಎಂದು ರಾಜ್ಯದ ವಿವಿಧ ಜಿಲ್ಲೆಯ ಅಭ್ಯರ್ಥಿಗಳು ಕುಮಾರಸ್ವಾಮಿ‌ ಎದುರು ಕಣ್ಣೀರು ಹಾಕಿದ್ದಾರೆ.

    ಬಳಿಕ ಮಾತನಾಡಿದ ಎಚ್​ಡಿಕೆ, ಪಿಎಸ್‌ಐ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಈ ಸಮಯದಲ್ಲಿ ಮರು ಪರೀಕ್ಷೆ ಬೇಡ, ಇಲ್ಲಿ ಸರ್ಕಾರದ ತಪ್ಪಿದೆ. ಪಿಎಸ್‌ಐ ಪರೀಕ್ಷೆಯಲ್ಲಿ ಎಷ್ಟು ಜನ ಭಾಗಿಯಾಗಿದ್ದಾರೆಂದು ಹೊರಗಡೆ ಬರಲಿ. ಹಣದ ಪಿಶಾಚಿಗಳು ಬೇಗನೆ ದುಡ್ಡು ಮಾಡಬೇಕೆಂದು ‌ಹೊರಟಿದ್ದಾರೆ. ಯಾರು ಹಣ ಕೊಟ್ಟು ನೇಮಕಾತಿ ಆಗಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಿ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಇಲ್ಲಿ ಅನ್ಯಾಯ ಆಗೋದು ಬೇಡ‌. ಸರ್ಕಾರಕ್ಕೆ ಸರಿಯಾಗಿ ಪರೀಕ್ಷೆ ನಡೆಸಲು ಬಂದಿಲ್ಲ. ಇತ್ತೀಚಿಗೆ ಎಲ್ಲಾ ಇಲಾಖೆಗಳಲ್ಲೂ ಅಕ್ರಮ ನಡೆದಿದೆ. ಈ ವ್ಯವಸ್ಥೆ ಉಳ್ಳವರಿಗೆ ಮಾತ್ರ, ದುಡ್ಡ ಇರುವವರಿಗೆ ಮಾತ್ರ. ಈ ಅವ್ಯವಸ್ಥೆಯನ್ನ ಸರಿಪಡಿಸಬೇಕು ಎಂದು ಆಗ್ರಹಿಸಿದರು.

    ಮದ್ವೆಯಾದ 11ನೇ ದಿನಕ್ಕೆ ವರ ಸಾವು, ವಧುವಿನ ಸ್ಥಿತಿ ಚಿಂತಾಜನಕ! ಕುಟುಂಬಸ್ಥರ ಗೋಳಾಟ ನೋಡಲಾಗ್ತಿಲ್ಲ

    PSI ಹುದ್ದೆ ನೇಮಕಾತಿ ಅಕ್ರಮ: ಇಡೀ ಪರೀಕ್ಷೆ ರದ್ದು, ಮರು ಪರೀಕ್ಷೆಗೆ ಆದೇಶಿಸಿದ ಸರ್ಕಾರ

    ಚಾಮರಾಜನಗರದಲ್ಲಿ ಯುವತಿ ಸಾವು, ಕದ್ದು ಮುಚ್ಚಿ ಅಂತ್ಯಸಂಸ್ಕಾರ… ವಾರದ ಬಳಿಕ ಸ್ಫೋಟಕ ಮಾಹಿತಿ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts