More

    ಕಾಂಗ್ರೆಸ್‌ನಿಂದ ಎಲ್ಲರಿಗೂ ಜನಪರ ಕಾರ್ಯಕ್ರಮ

    ಜಮಖಂಡಿ: ಇಂದಿರಾಗಾಂಧಿ ಕಾಲದಿಂದ ಬಡವರ ಪರ ಕೆಲಸ ಮಾಡುತ್ತಿರುವ ಕಾಂಗ್ರೆಸ್ ತನ್ನದೇ ಆದ ಇತಿಹಾಸ ಹೊಂದಿದೆ. ಇಂತಹ ಪಕ್ಷದಲ್ಲಿ ನಾವು ಕಾರ್ಯಕರ್ತರಾಗಿರುವುದು ಹೆಮ್ಮೆಯ ಸಂಗತಿ. ಸಿದ್ದರಾಮಯ್ಯ ಸರ್ಕಾರ ಬಡವರ ಪಾಲಿಗೆ ಆಶಾಕಿರಣವಾಗಿದೆ. ಕಾರ್ಯಕರ್ತರು ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕೆಂದು ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಹೇಳಿದರು.

    ತಾಲೂಕಿನ ಸಾವಳಗಿ ಗ್ರಾಮದ ಮಾಳಿ ಸಮುದಾಯ ಭವನದಲ್ಲಿ ಮಂಗಳವಾರ ಜಮಖಂಡಿ ಮತ್ತು ಸಾವಳಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

    ಎಲ್ಲ ವರ್ಗದ ಜನರಿಗೆ ಜನಪರ ಕಾರ್ಯಕ್ರಮ ನೀಡಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಪಿ.ಸಿ. ಗದ್ದಿಗೌಡರು ಕ್ಷೇತ್ರಕ್ಕೆ ಯಾವುದೇ ಕೆಲಸ ಮಾಡದೆ ಬೇರೆಯವರ ಅಲೆಯಲ್ಲೇ ಚುನಾಯಿತರಾಗಿದ್ದಾರೆ. ಅವರ ಲಕ್ ಭಾರಿ ಇತ್ತು. ಆದರೆ, ನಾನು ಗಜಕೇಸರಿ ಯೋಗದಲ್ಲಿ ಜನ್ಮ ಪಡೆದಿದ್ದೇನೆ. ನಾನು ಈ ಬಾರಿ ಬಾಗಲಕೋಟೆಗೆ ಸಂಸದೆ ಆಗುತ್ತೇನೆ. ಯಾರು ಪರಿಶ್ರಮ ಪಡುತ್ತಾರೋ ಅವರು ಯಶಸ್ಸು ಕಾಣುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಆನಂದ ನ್ಯಾಮಗೌಡ ಮಾತನಾಡಿ, ನಮ್ಮ ತಂದೆ ಕೇಂದ್ರ ಸಚಿವರಿದ್ದಾಗ ಸರ್ಕಾರದಿಂದ ಅನುಮೋದನೆಗೊಂಡಿದ್ದ ಕುಡಚಿ- ಬಾಗಲಕೋಟೆ ರೈಲು ನಿಲ್ದಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಗದ್ದಿಗೌಡರು ನಮ್ಮ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಂಸತ್ತಿನಲ್ಲಿ ಒಂದು ಬಾರಿಯೂ ಧ್ವನಿ ಎತ್ತಿಲ್ಲ. ನಮ್ಮ ಅಭ್ಯರ್ಥಿ ಸಂಯುಕ್ತ ಪಾಟೀಲ ಚುನಾಯಿತರಾಗಿ ಬಾಗಲಕೋಟೆ ಕುಡಚಿ ರೈಲು ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಜಿಲ್ಲೆಯನ್ನು ಮಾದರಿಯಾಗಿ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳಿಂದ ಎಲ್ಲರಿಗೂ ಅನುಕೂಲವಾಗಿದೆ. ನುಡಿದಂತೆ ನಡೆದಿದ್ದೇವೆ, ಮುಂದೆಯೂ ನಡೆಯುತ್ತೇವೆ ಎಂದರು.

    ಜಮಖಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಶ್ರೀಶೈಲ ದಳವಾಯಿ, ಮುತ್ತಣ್ಣ ಹಿಪ್ಪರಗಿ, ಬಿ.ಎಸ್. ಸಿಂಧೂರ, ಎನ್.ಎಸ್. ದೇವರವರ, ನಜೀರ್ ಕಂಗನೊಳ್ಳಿ, ಸಿದ್ದು ಮೀಶಿ, ಅನ್ವರ ಮೋಮಿನ್, ರಾಜು ಮೇಲಿನಕೇರಿ, ಬಿ.ಜಿ. ಪಾಟೀಲ, ಬಿ.ಟಿ. ಹಿಪ್ಪರಗಿ, ಅಭಯಕುಮಾರ ನಾಂದ್ರೇಕರ, ಸಮೀರ್ ಕಂಗನೊಳ್ಳಿ, ಈಶ್ವರ ವಾಳೆನ್ನವರ, ಅಶೋಕ ಮಾಳಿ, ಬಸುಗೌಡ ಹೊನವಾಡ, ಗಜಾನನ ಮಾಳಿ, ಚಂದು ಮಾದರ, ಶ್ರೀಮಂತ ಮಾನೆ, ಶಿವನಿಂಗ ಬಂಡಿವಡ್ಡರ, ಸಂದೀಪ್ ಬುಲಗೌಡ, ಸತೀಶ ಗೆಣ್ಣೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts