More

    ವಿಶ್ವಮಾನವ ಸಂದೇಶ ಸಾರಿದ ಜಗದ ಕವಿ

    ಎನ್.ಆರ್.ಪುರ: ಕುವೆಂಪು ವಿಶ್ವ ಮಾನವ ಸಂದೇಶ ಸಾರಿ ಜಗದ ಕವಿ, ಯುಗದ ಕವಿಯಾಗಿದ್ದಾರೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಹೇಳಿದರು.

    ಕಸಾಪ ಆಯೋಜಿಸಿದ್ದ ಕುವೆಂಪು ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವೀಯತೆ ಮರೆಯಾಗುತ್ತಿದೆ. ರಾಜ್ಯದಲ್ಲಿ ಕನ್ನಡಪರ ಹೋರಾಟ ಹತ್ತಿಕ್ಕಲಾಗುತ್ತಿದೆ. ಕನ್ನಡ ನಾಡಿನಲ್ಲಿ ಕನ್ನಡ ಉಳಿಸಲು ಹೋರಾಟ ಮಾಡಬೇಕಾಗಿರುವುದು ವಿಪರ್ಯಾಸ. ಕಸಾಪದಿಂದ ತಿಂಗಳಿಗೆ ಓರ್ವ ಪತ್ರಕರ್ತನನ್ನು ಅಭಿನಂದಿಸಲಾಗುವುದು ಎಂದರು.
    ಪೂರ್ವಾಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್ ಮಾತನಾಡಿ, ಕುವೆಂಪು ಅವರ ವಿಶ್ವಮಾನವ ಗುಣ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಭಾವ ಬೆಳೆಸಿಕೊಳ್ಳಬೇಕು. ಕುವೆಂಪು ನಮ್ಮ ಜಿಲ್ಲೆಯಲ್ಲಿ ಜನಿಸಿದ್ದಾರೆ ಎಂಬುದು ನಮಗೆ ಹೆಮ್ಮೆ ಎಂದರು.
    ಕಸಾಪ ಹೋಬಳಿ ಘಟಕದ ಅಧ್ಯಕ್ಷೆ ಜುಬೇದಾ ಮಾತನಾಡಿ, ಸ್ವಾಸ್ಥೃ ಸಮಾಜ ನಿರ್ಮಾಣ ಮಾಡುವುದರಲ್ಲಿ ಯುವಕರ ಪಾತ್ರ ಮುಖ್ಯ. ರಾಜ್ಯದಲ್ಲಿ ನಾಮಫಲಕಗಳಲ್ಲಿ ಶೇ.60 ಕನ್ನಡದಲ್ಲಿರಬೇಕೆಂಬ ಆದೇಶ ಸರ್ಕಾರ ಮಾಡಿದೆ. ಮುಂದೆ ಪಪಂನಿಂದ ನೀಡುವ ಎಲ್ಲ ವಾಣಿಜ್ಯ ಉದ್ದಿಮೆಗಳ ಪರವಾನಗಿಯಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಫಲಕ ಅಳವಡಿಸುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
    ಕಸಾಪ ನಗರ ಘಟಕದ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಕುವೆಂಪು ನಡೆದಾಡುವ ಸಾಹಿತ್ಯದ ಭಂಡಾರವಾಗಿದ್ದರು. ಜಾತಿ, ಧರ್ಮದ ಎಲ್ಲೆ ಮೀರಿ ಬೆಳೆದವರು ಎಂದರು.
    ಪತ್ರಕರ್ತ ಎಂ.ಸಿ.ಗುರುಶಾಂತಪ್ಪ ದಂಪತಿಯನ್ನು ಸನ್ಮಾನಿಸಲಾಯಿತು. ಕಸಪಾ ಹೋಬಳಿ ಘಟಕದ ಕಾರ್ಯದರ್ಶಿ ವಾಣಿ ನರೇಂದ್ರ, ಸಹ ಕಾರ್ಯದರ್ಶಿ ಶ್ರುತಿ ಗುರುಶಾಂತಪ್ಪ, ಸುಚಿತ್ರಾ, ಬಿ.ನಂಜುಂಡಪ್ಪ, ಜಯಣ್ಣ, ನಗರ ಘಟಕದ ಕಾರ್ಯದರ್ಶಿ ದೇವರಾಜ್, ಸೈಯದ್‌ಸಮೀರ್, ಭಾನು, ಚಕ್ರಪಾಣಿ, ನಾಗರಾಜ್, ಜೇಸಿ ಅಧ್ಯಕ್ಷ ಅಬ್ರಾಹಂ, ಕೆ.ಗಂಗಾಧರ್, ರಘು, ಜಿ.ಪುರುಷೋತ್ತಮ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts