More

    ಕಾರ್ಯಗಳ ಮೂಲಕ ಪುನೀತ್ ಜೀವಂತ; ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಡಾ.ಬಸವರಾಜ ಕಳಸ ಅಭಿಮತ

    ಪುನೀತ್ ನುಡಿ ನಮನ ಕಾರ್ಯಕ್ರಮ

    ರಾಯಚೂರು: ಪುನೀತ್ ರಾಜಕುಮಾರ್ ನಮ್ಮನ್ನು ಬಿಟ್ಟು ಅಗಲಿಲ್ಲ. ಅವರ ಚಿತ್ರಗಳು ಮತ್ತು ಸಮಾಜ ಸೇವೆಗಳ ಮೂಲಕ ಜೀವಂತವಾಗಿದ್ದು, ಮುಂದಿನ ದಿನಗಳಲ್ಲಿಯೂ ಜನಮಾನಸದಲ್ಲಿ ಶಾಶ್ವತವಾಗಿ ಇರುತ್ತಾರೆ ಎಂದು ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಡಾ.ಬಸವರಾಜ ಕಳಸ ಹೇಳಿದರು.

    ಕರ್ನಾಟಕ ಸಂಘದಲ್ಲಿ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ, ಮ್ಯಾದಾರ್ ಲಲಿತ ಕಲಾ ಪ್ರತಿಷ್ಠಾನ ಭಾನುವಾರ ಏರ್ಪಡಿಸಿದ್ದ ಪುನೀತ್ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯ ತತ್ತ್ವದ ಅಡಿಯಲ್ಲಿ ಪುನೀತ್ ಬದುಕಿ ತೋರಿಸಿದ್ದಾರೆ. ಚಿಕ್ಕ ಮಗುವಾಗಿದ್ದಾಗಿನಿಂದ ನಟನೆಯಲ್ಲಿ ತೊಡಗಿದ್ದ ಅವರು, ತಮ್ಮ ಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ. ಚಿತ್ರಗಳಲ್ಲಿ ದುಶ್ಚಟ, ಶೈಕ್ಷಣಿಕ ಮಾಫಿಯಾ ವಿರುದ್ಧ ಗಮನ ಸೆಳೆಯುವಂತಹ ಕೆಲಸ ಮಾಡಿದ್ದಾರೆ. ತಮ್ಮ ಕೆಲಸಗಳ ಮೂಲಕ ಇತರ ನಟರಿಗೆ ಮಾದರಿಯಾಗಿದ್ದಾರೆ ಎಂದರು.


    ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಜೈನ್ ಮಾತನಾಡಿ, ಪುನೀತ್ ಅಗಲಿ ತಿಂಗಳಾದರೂ ಅವರ ಸ್ಮರಣೆಯಲ್ಲಿಯೇ ನಾವಿದ್ದೇವೆ. ಅವರು ತೆರೆಮರೆಯಲ್ಲಿದ್ದು ಸಾಮಾಜಿಕ ಕಾರ್ಯಗಳನ್ನು ನಡೆಸಿದ್ದಾರೆ. ಪ್ರಚಾರಕ್ಕಾಗಿ ಮುಂದೆ ಬರಲಿಲ್ಲ. ನಗರದ ಮಾವಿನಕೆರೆಗೆ ಪುನೀತ ಸರೋವರ ಎಂದು ಹೆಸರಿಟ್ಟು ಅದನ್ನು ಅಭಿವೃದ್ಧಿ ಪಡಿಸಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.


    ಕಾರ್ಯಕ್ರಮದಲ್ಲಿ ಸಾಹಿತಿ ವೀರಹನುಮಾನ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಬಷೀರ್ ಅಹ್ಮದ್ ಹೊಸಮನಿ, ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಚ್.ಮ್ಯಾದಾರ, ವಿವಿಧ ಸಂಘಟನೆಗಳ ಮುಖಂಡರಾದ ಮುರಳೀಧರ ಕುಲಕರ್ಣಿ, ಈರಣ್ಣ ಬೆಂಬಾಲಿ, ಬಸವರಾಜ, ಕೆ.ಗೋವಿಂದರಾಜ್, ಸಾದಿಕ್ ಖಾನ್, ಶಾಂತಾ ಕುಲಕರ್ಣಿ, ರಾಮಾಚಾರಿ ಜೋಷಿ, ಕೆ.ಗೋವಿಂದರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts