More

    ಹಿಂದುಗಳ ಬಹುವರ್ಷದ ಕನಸು ನನಸು

    ಹುಕ್ಕೇರಿ: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಹುಕ್ಕೇರಿ ಪಟ್ಟಣ ಸೇರಿ ತಾಲೂಕಿನ ಎಲ್ಲೆಡೆ ಶ್ರೀರಾಮಮಯವಾಗಿತ್ತು. ಪಟ್ಟಣದ ಮಾರುತಿ ಮಂದಿರದಲ್ಲಿ ಹಿಂದುಪರ ಸಂಘಟನೆಗಳು ಅಯೋಧ್ಯೆ ಕಾರ್ಯಕ್ರಮ ನೇರ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದರು. ಶ್ರೀರಾಮಸೇನಾ ಘಟಕದವರು ಸಿಹಿ ಹಂಚಿ ಸಂಭ್ರಮಿಸಿದರು.

    ಕರಸೇವಕ ಗುರುರಾಜ ಕುಲಕರ್ಣಿ ಮಾತನಾಡಿ, ಭಾರತೀಯರ 500 ವರ್ಷಗಳ ಹೋರಾಟ ಯಶ ಕಂಡಿದೆ. ಇನ್ನು ಮುಂದೆ ದೇಶದಲ್ಲಿ ನಿಜವಾಗಿ ರಾಮರಾಜ್ಯ ಪ್ರಾರಂಭವಾಗುತ್ತದೆ ಎಂದರು.

    ನೂತನ ಬಸ್ ನಿಲ್ದಾಣ ಬಳಿ ಕಾಂಗ್ರೆಸ್ ಮುಖಂಡ ಮೌನೇಶ್ವರ ಪೋತದಾರ ಜನರಿಗೆ ಸಿಹಿ ಹಂಚಿದರು. ಪಟ್ಟಣ ಹೊರವಲಯದ ಜಾಬಾಪುರ ಹನುಮ ಮಂದಿರದಲ್ಲಿ ಮಹಿಳೆಯರು ಹೋಮ- ಹವನ ನೆರವೇರಿಸಿದರು. ತಾಲೂಕಿನ ಅಮ್ಮಣಗಿಯಲ್ಲಿ ಉದ್ಯಮಿ ಪಥ್ವಿ ರಮೇಶ ಕತ್ತಿ ಮತ್ತು ಎಸ್.ಎಂ.ಪಾಟೀಲ ನೇತತ್ವದಲ್ಲಿ ಶ್ರೀರಾಮನ ಭಾವಚಿತ್ರ ಪೂಜಿಸಿ, ಸಿಹಿ ಹಂಚಲಾಯಿತು.

    ಶಿರಗಾಂವ ಗ್ರಾಮದಲ್ಲಿ ಬೆಳಗಿನ ಜಾವ ಮಹಿಳೆಯರು ಕುಂಭ ಮೇಳದೊಂದಿಗೆ ಬಸವಣ್ಣ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ನೆರವೇರಿಸಿದರು.
    ಪುರಸಭೆ ಸದಸ್ಯ ರಾಜು ಮುನ್ನೋಳಿ, ವಕೀಲ ಪ್ರಕಾಶ ಮುತಾಲಿಕ, ಅರವಿಂದ ದೇಶಪಾಂಡೆ, ರಾಜು ಚೌಗಲಾ, ವಿವೇಕ ಪುರಾಣಿಕ, ಸಂಜು ಮುತಾಲಿಕ, ಸಂಪತಕುಮಾರ ಶಾಸಿ, ರಾಜು ಬಿರಾದಾರ ಪಾಟೀಲ, ಸುರೇಶ ತೇರಣಿ, ಬಸವರಾಜ ಘಟಿಗೆನ್ನವರ, ಆನಂದ ಸೋಮನ್ನವರ, ಹರೀಶ ದೊಡಲಿಂಗನವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts