More

    ಬ್ಯಾಂಕಾಕ್​ನಿಂದ ದೆಹಲಿಗೆ ಬಂದಿಳಿದ ವ್ಯಕ್ತಿಯಲ್ಲಿ ಕೊರೊನಾ ಶಂಕೆ: ವಿಮಾನ ನಿಲ್ದಾಣದ ಆರೋಗ್ಯ ಸಂಸ್ಥೆಯ ಅಧಿಕಾರಿಗಳ ವಶದಲ್ಲಿ ಶಂಕಿತ

    ನವದೆಹಲಿ: ಬ್ಯಾಂಕಾಕ್​ನಿಂದ ದೆಹಲಿಗೆ ಬಂದಿಳಿದ ಸ್ಪೈಸ್​ ಜೆಟ್​ ವಿಮಾನದಲ್ಲಿ ಬಂದಿರುವ ಪ್ರಯಾಣಿಕರ ಪೈಕಿ ಒಬ್ಬ ವ್ಯಕ್ತಿಯಲ್ಲಿ ಕೊರೊನಾ ವೈರಸ್​ (COVID-19) ಇರಬಹುದು ಎಂದು ಶಂಕಿಸಲಾಗಿದೆ. ಶಂಕಿತ ವ್ಯಕ್ತಿಯನ್ನು ದೆಹಲಿ ವಿಮಾನ ನಿಲ್ದಾಣದ ಆರೋಗ್ಯ ಸಂಸ್ಥೆಯು ವಶಕ್ಕೆ ಪಡೆದುಕೊಂಡಿದ್ದು ತನ್ನ ನಿಗಾದಲ್ಲಿ ಇರಿಸಿಕೊಂಡಿದೆ.

    ಶಂಕಿತ ವ್ಯಕ್ತಿಯು ಇಂದು (ಫೆ.13) ಸ್ಪೈಸ್​ ಜೆಟ್​ ಎಸ್​ಜಿ-88 ವಿಮಾನದಲ್ಲಿ ದೆಹಲಿಗೆ ಬಂದಿಳಿದಿದ್ದಾನೆ. ಸೀಟ್​ ನಂ.31ರಲ್ಲಿ ಕುಳಿತಿದ್ದ ವ್ಯಕ್ತಿಯ ಅಕ್ಕ ಪಕ್ಕ ಯಾರೂ ಕುಳಿತಿರಲಿಲ್ಲ ಎಂದು ಹೇಳಲಾಗಿದೆ. ಸದ್ಯ ಶಂಕಿತನನ್ನು ನಿಗಾದಲ್ಲಿರಿಸಲಾಗಿದೆ.

    ಚೀನಾದಲ್ಲಿ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್​ನಿಂದಾಗಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಮರಣ ಹೊಂದಿದ್ದಾರೆ. ಅಮೆರಿಕ, ಭಾರತ ಸೇರಿ ಒಟ್ಟು 20ಕ್ಕೂ ಹೆಚ್ಚು ದೇಶಗಳಲ್ಲಿ ವೈರಸ್​ ಇರುವುದು ಪತ್ತೆಯಾಗಿದೆ. ಭಾರತದ ಕೇರಳ ಮತ್ತು ಕೋಲ್ಕತ್ತದಲ್ಲಿ ಕೊರೊನಾ ವೈರಸ್​ ಕಂಡುಬಂದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts