More

    ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನ ಸಾವು, ಹಲವು ಅನುಮಾನಗಳು

    ಮುಂಬೈ: ನೈಜೀರಿಯಾದ ಲಾಗೋಸ್​ನಿಂದ ಮುಂಬೈಗೆ ಶನಿವಾರ ಬರುತ್ತಿದ್ದ ಎಐ1906 ಏರ್​ ಇಂಡಿಯಾ ವಿಮಾನದಲ್ಲಿ 42 ವರ್ಷದ ಪ್ರಯಾಣಿಕರೊಬ್ಬರು ಹಠಾತ್ತನೆ ಮೃತಪಟ್ಟಿದ್ದಾರೆ. ಮಾರ್ಗಮಧ್ಯದಲ್ಲಿ ಇವರು ತುಂಬಾ ನಡಗುತ್ತಿದ್ದದ್ದು ಕಂಡುಬಂದಿತ್ತು. ವಿಚಾರಿಸಿದಾಗ ತಾವು ಮಲೇರಿಯಾದಿಂದ ಬಳಲುತ್ತಿರುವುದಾಗಿ ಹೇಳಿದ್ದರು ಎನ್ನಲಾಗಿದೆ.

    ಆದರೆ, ವಿಮಾನ ಹತ್ತುವ ಸಂದರ್ಭದಲ್ಲೇ ಇವರಿಗೆ ಜ್ವರ ಇತ್ತು. ಮಾರ್ಗಮಧ್ಯದಲ್ಲಿ ಚಳಿಯಿಂದಾಗಿ ನಡುಗುತ್ತಿದ್ದರು. ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿದ್ದರಿಂದ ಅವರು ಮೃತಪಟ್ಟಿದ್ದಾರೆ. ಇದೆಲ್ಲವೂ ಕರೊನಾ ಲಕ್ಷಣಗಳಾಗಿವೆ ಎಂದು ಹೇಳಲಾಗುತ್ತಿದೆ.

    ಕರೊನಾ ಲಕ್ಷಣಗಳು ಇದ್ದಾಗ್ಯೂ ಲಾಗೋಸ್​ನಲ್ಲಿ ವಿಮಾನ ಹತ್ತಲು ಇವರಿಗೆ ಹೇಗೆ ಅವಕಾಶ ಮಾಡಿಕೊಡಲಾಯಿತು? ವಿಮಾನ ನಿಲ್ದಾಣದಲ್ಲಿನ ಏರ್​ ಇಂಡಿಯಾದ ವೈದ್ಯಕೀಯ ಪರೀಕ್ಷಾ ತಂಡ ಸಮರ್ಪಕವಾಗಿ ಪ್ರಯಾಣಿಕರನ್ನು ಪರೀಕ್ಷಿಸುತ್ತಿಲ್ಲವೇ ಎಂಬುದು ಸೇರಿ ಹಲವು ಅನುಮಾನಗಳು ಮೂಡಲಾರಂಭಿಸಿವೆ.

    ಇದನ್ನೂ ಓದಿ: ಇನ್ನೋರ್ವ ಕಪ್ಪುವರ್ಣೀಯನ ಹತ್ಯೆ! ಅಮೆರಿಕದಲ್ಲಿ ಭುಗಿಲೆದ್ದಿದೆ ಹಿಂಸಾಚಾರ

    ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಏರ್​ ಇಂಡಿಯಾ, ಲಾಗೋಸ್​ನಲ್ಲಿ ಮೃತ ಪ್ರಯಾಣಿಕನನ್ನು ಸಮರ್ಪಕವಾಗಿ ಪರಿಶೀಲಿಸಲಾಗಿತ್ತು. ಅವರಿಗೆ ಜ್ವರ ಇದ್ದಿದ್ದರೆ ವೈದ್ಯಕೀಯ ಪರೀಕ್ಷಾ ತಂಡ ಇವರಿಗೆ ವಿಮಾನ ಹತ್ತಲು ಅವಕಾಶ ಮಾಡಿಕೊಡುತ್ತಿರಲಿಲ್ಲ ಎಂದು ಹೇಳಿದೆ.
    ಪ್ರಯಾಣದ ವೇಳೆ ತುಂಬಾ ನಡಗುತ್ತಿದ್ದ ಇವರನ್ನು ಪ್ರಶ್ನಿಸಿದಾಗ ತಾವು ಮಲೇರಿಯಾದಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಉಸಿರಾಟದ ಸಮಸ್ಯೆ ಇದ್ದ ಕಾರಣ, ಅವರಿಗೆ ಆಕ್ಸಿಜನ್​ ಮಾಸ್ಕ್​ ಕೊಡಲಾಗಿತ್ತು ಎಂದು ತಿಳಿಸಿದೆ.

    ಆದರೂ ಅವರು ಹಠಾತ್ತನೆ ಕೆಳಬಿದ್ದರು. ವಿಮಾನದಲ್ಲಿದ್ದ ಒಬ್ಬ ವೈದ್ಯರು ಹಾಗೂ ಇಂಥ ತುರ್ತು ಸಂದರ್ಭಗಳ ನಿರ್ವಹಣೆಯ ತರಬೇತಿ ಪಡೆದಿರುವ ನಮ್ಮ ಸಿಬ್ಬಂದಿ ಅವರ ಸಹಾಯಕ್ಕೆ ಮುಂದಾದರು. ಅವರನ್ನು ಬದುಕಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಯಿತು. ಆದರೂ ಅವರು ಬದುಕುಳಿಯಲಿಲ್ಲ. ಅವರು ಸಹಜವಾಗಿಯೇ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದೆ.

    ಭಾನುವಾರ ಮುಂಜಾನೆ 3.40ರಲ್ಲಿ ವಿಮಾನ ಮುಂಬೈ ತಲುಪಿತ್ತು. ತಕ್ಷಣವೇ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರ ಸ್ಥಿತಿಯನ್ನು ಪರಿಶೀಲಿಸಿದರು. ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಶವವನ್ನು ಆಸ್ಪತ್ರೆಗೆ ರವಾನಿಸಲಾಯಿತು. ಬಳಿಕ ಮೃತನ ಸಂಬಂಧಿಕರಿಗೆ ವಿಷಯ ತಿಳಿಸಲಾಯಿತು. ವಿಮಾನವನ್ನು ಸಂಪೂರ್ಣ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಯಿತು ಎಂದು ಹೇಳಿದೆ.

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts