More

    ಪ್ರಯಾಣಿಕರಿಗೆ ಸೂರಿಲ್ಲದೆ ಪರದಾಟ

    ಶಿರಸಿ: ಇಲ್ಲಿನ ಹಳೇ ಬಸ್ ನಿಲ್ದಾಣವನ್ನು ಮರು ನಿರ್ವಿುಸಲು ರಾಜ್ಯ ಭೂ ಸಾರಿಗೆ ನಿಗಮಕ್ಕೆ ಸಲ್ಲಿಸಿದ್ದ ನೂತನ ವಿಸõತ ಯೋಜನಾ ವರದಿಗೆ ಇನ್ನೂ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿಲ್ಲ. ಹೀಗಾಗಿ, ಸೌಲಭ್ಯವಂಚಿತ ಪ್ರಯಾಣಿಕರ ಪರದಾಟಕ್ಕೆ ಕೊನೆ ಇಲ್ಲದಂತಾಗಿದೆ.

    ಬಸ್ ನಿಲ್ದಾಣದ ಹೊಸ ಕಟ್ಟಡ ನಿರ್ವಣಕ್ಕಾಗಿ ಕಳೆದ ವರ್ಷ ಆಗಸ್ಟ್​ನಲ್ಲಿ ಹಳೆ ಬಸ್ ನಿಲ್ದಾಣ ಕಟ್ಟಡವನ್ನು ತೆರವುಗೊಳಿಸಲಾಗಿದೆ.

    ಬಸ್ ನಿಲ್ದಾಣ ಸಂಪೂರ್ಣ ಶಿಥಿಲಗೊಂಡ ಹಿನ್ನೆಲೆಯಲ್ಲಿ ತ್ವರಿತವಾಗಿ ನೆಲಸಮಗೊಳಿಸಲಾಗಿತ್ತು. ಈ ಜಾಗದಲ್ಲಿ ಆಧುನಿಕ ಶೈಲಿಯ ಬಸ್ ನಿಲ್ದಾಣ ನಿರ್ವಣಕ್ಕೆ 5 ಕೋಟಿ ರೂಪಾಯಿ ಮಂಜೂರಾತಿಯೂ ದೊರಕಿದೆ. ಆದರೆ, ನಿಲ್ದಾಣ ನಿರ್ವಣಕ್ಕೆ ಸಂಬಂಧಿಸಿ ಸಾರಿಗೆ ಇಲಾಖೆಯ ತಾಂತ್ರಿಕ ವಿಭಾಗದಿಂದ ಸದ್ಯ ಹೊಸ ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ವಿಸõತ ಯೋಜನಾ ವರದಿ ಸಿದ್ಧಪಡಿಸಿ ಅದನ್ನು ಆಡಳಿತಾತ್ಮಕ ಮಂಜೂರಾತಿಗೆ ರಾಜ್ಯ ಭೂಸಾರಿಗೆ ನಿಗಮಕ್ಕೆ ಸಲ್ಲಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಹೊಸ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ಮೀನಮೇಷ ಎಣಿಸುತ್ತಿದ್ದು, ಕಾಮಗಾರಿಗೆ ಈವರೆಗೆ ಒಪ್ಪಿಗೆ ಸಿಕ್ಕಿಲ್ಲ.

    7 ಕೋಟಿ ರೂಪಾಯಿ ಅಂದಾಜು ಪಟ್ಟಿ: ಅತ್ಯಾಧುನಿಕ ರೀತಿಯ ಕಟ್ಟಡ ನಿರ್ಮಾಣ ಮತ್ತು ಅದಕ್ಕೆ ಪೂರಕ ವ್ಯವಸ್ಥೆ ರೂಪಿಸುವ ಸಲುವಾಗಿ 7 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಅದಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕ ಬಳಿಕ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತದೆ. ಅಲ್ಲಿಯವರೆಗೆ ಸದ್ಯ ಇರುವ ಸ್ಥಿತಿಯೇ ಮುಂದುವರಿಯಲಿದೆ ಎಂಬುದು ಸಾರಿಗೆ ಸಂಸ್ಥೆಯ ಸಿವಿಲ್ ವಿಭಾಗದ ಅಧಿಕಾರಿಗಳ ಮಾತು.

    ಪರ್ಯಾಯವಿಲ್ಲದೆ ಅಧ್ವಾನ: ಹೊಸ ಕಟ್ಟಡ ನಿರ್ವಣಕ್ಕೆ ಆಡಳಿತಾತ್ಮಕ ಮಂಜೂರಾತಿ ಸಿಗುವ ಮೊದಲೇ ಹಳೆ ಕಟ್ಟಡ ತೆರವುಗೊಳಿಸಿದ್ದಾರೆ. ಇದೀಗ ಬಸ್​ಗಳ ಓಡಾಟ ಆರಂಭವಾಗಿದ್ದು, ಪ್ರಯಾಣಿಕರಿಗೂ ಸಮಸ್ಯೆಯಾಗುತ್ತಿದೆ. ಸಾರಿಗೆ ಸಂಸ್ಥೆ ಪರ್ಯಾಯ ವ್ಯವಸ್ಥೆ ರೂಪಿಸದೆ, ಇರುವ ಕಟ್ಟಡ ತೆರವು ಮಾಡಿದ್ದು ಈ ಅಧ್ವಾನಕ್ಕೆ ಕಾರಣವಾಗುತ್ತಿದೆ ಎಂಬುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

    ಹಳೇ ಬಸ್ ನಿಲ್ದಾಣ ಜಾಗದಲ್ಲಿ ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯಲು ಆಗುತ್ತಿಲ್ಲ. ಕುಳಿತುಕೊಳ್ಳಲು ಆಸನದ ವ್ಯವಸ್ಥೆಯೂ ಇಲ್ಲವಾಗಿದೆ. ಅತ್ತ ಕಾರ್ಯಾಚರಣೆಯನ್ನು ಹೊಸ ಬಸ್ ನಿಲ್ದಾಣಕ್ಕೆ ಸಂಪೂರ್ಣ ಸ್ಥಳಾಂತರವನ್ನೂ ಮಾಡದೆ ಪ್ರಯಾಣಿಕರ ಜತೆ ಸಾರಿಗೆ ಇಲಾಖೆ ಆಟ ಆಡುತ್ತಿದೆ.

    | ಸದಾಶಿವ ಹೆಗಡೆ- ಪ್ರಯಾಣಿಕ

    ಕೋವಿಡ್ ಕಾರಣದಿಂದ ಸರ್ಕಾರ ಆರ್ಥಿಕವಾಗಿ ಅಶಕ್ತವಾಗಿದೆ. ನಿಲ್ದಾಣ ಕಾಮಗಾರಿ ಸಂಬಂಧ ಅದರ ಪ್ರಕ್ರಿಯೆಗಳು ವಿಳಂಬವಾಗಿರಬಹುದು. ಆದರೆ, ಆದಷ್ಟು ಶೀಘ್ರದಲ್ಲಿ ಅದು ಪೂರ್ಣಗೊಂಡು ನಿಲ್ದಾಣ ನಿರ್ಮಾಣ ಪ್ರಕ್ರಿಯೆ ಆರಂಭಿಸುವ ವಿಶ್ವಾಸವಿದೆ. ಬಸ್ ನಿಲ್ದಾಣ ನಿರ್ವಣಕ್ಕೆ ಈಗಾಗಲೆ ಅನುದಾನ ಲಭ್ಯವಿದೆ. ಕೆಲ ಆಡಳಿತಾತ್ಮಕ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕೆಲಸ ಆರಂಭಗೊಳ್ಳಲಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಲಾಗುವುದು.

    | ಎಂ.ರಾಜಕುಮಾರ, ವಿಭಾಗೀಯ ನಿಯಂತ್ರಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts