More

    ಟಾಟಾ ಟ್ರಸ್ಟ್​ಗಳಿಗೆ ಕುಟುಂಬದ ಹೊರಗಿನವರು ಉತ್ತರಾಧಿಕಾರಿಯಾಗಬಹುದು; ರತನ್ ಟಾಟಾ ಸ್ಪಷ್ಟನೆ

    ನವದೆಹಲಿ: ದೇಶದ ಪ್ರತಿಷ್ಠಿತ ಸಮೂಹ ಸಂಸ್ಥೆಯಾಗಿರುವ ಟಾಟಾ ಟ್ರಸ್ಟ್​ಗಳ ಅಧ್ಯಕ್ಷರಾಗಿ ಟಾಟಾ ಕುಟುಂಬದ ಉತ್ತರಾಧಿಕಾರಿಯೇ ಆಗಬೇಕೆಂದೇನಿಲ್ಲ. ಆ ಹುದ್ದೆಯನ್ನು ಬೇರೆಯವರು ವಹಿಸಿಕೊಳ್ಳಬಹುದು…!

    ಈ ಮಾತನ್ನು ಸ್ವತಃ ರತನ್​ ಟಾಟಾ ಅವರೇ ಹೇಳಿದ್ದಾರೆ. ಸದ್ಯಕ್ಕೆ ಟಾಟಾ ಟ್ರಸ್ಟ್​ಗಳ ಅಧ್ಯಕ್ಷನಾಗಿದ್ದೇನೆ. ಬೇರೆ ಯಾರಾದರೂ ಆಗಬಹುದು. ಭವಿಷ್ಯದಲ್ಲಿ ಟಾಟಾ ಅಡ್ಡಹೆಸರನ್ನು ಹೊಂದಿಲ್ಲದವರೂ ಆಗಬಹುದು. ವ್ಯಕ್ತಿಯ ಬದುಕು ಕೊನೆಗೊಳ್ಳುತ್ತದೆ. ಆದರೆ, ಈ ಸಂಸ್ಥೆಗಳು ಮುಂದುವರಿಯುತ್ತವೆ ಎಂದು ರತನ್​ ಟಾಟಾ ಹೇಳಿದ್ದಾರೆ.

    ಇದನ್ನೂ ಓದಿ; ಈ ಟ್ರ್ಯಾಕ್ಟರ್​ ಬೆಟ್ಟದ ಮೆಟ್ಟಿಲುಗಳನ್ನು ಏರುತ್ತೆ…! ಅಬ್ಬಾ ಭೌತಶಾಸ್ತ್ರದ ಪಂಡಿತರಿವರು

    ಟಾಟಾ ಕಂಪನಿಗಳ ಮೂಲವಾಗಿರುವ ಟಾಟಾ ಸನ್ಸ್​ನ ಅಧ್ಯಕ್ಷ ಹುದ್ದೆಯನ್ನು 2012ರಲ್ಲಿಯೇ ರತನ್​ ಟಾಟಾ ತೊರೆದಿದ್ದಾರೆ. 50 ವರ್ಷಗಳಿಂದ ಅವರು ಈ ಹುದ್ದೆಯಲ್ಲಿದ್ದರು. ಸದ್ಯ ಟಾಟಾ ಸನ್ಸ್​ನ ಗೌರವ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

    ಟಾಟಾ ಸನ್ಸ್​ ಅಧ್ಯಕ್ಷ ಸ್ಥಾನವೂ ಸೇರಿ ಸಂಸ್ಥೆಯ ಮೇಲೆ ಟಾಟಾ ಕುಟುಂಬ ಯಾವುದೇ ಪಟ್ಟಭದ್ರ ಅಧಿಕಾರ ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ ಅಫಿಡವಿಟ್​ನಲ್ಲೂ ಸ್ಪಷ್ಟಪಡಿಸಿದೆ. ಸೈರಸ್​ ಮಿಸ್ತ್ರಿ ಒಡೆತನದ ಸೈರಸ್​ ಇನ್ವೆಸ್ಟ್​ಮೆಂಟ್ಸ್​ಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಹೇಳಿಕೆ ಸಲ್ಲಿಸಲಾಗಿದೆ.

    ಇದನ್ನೂ ಓದಿ; ಹುಡುಗಿಯರೇ ಹುಷಾರ್​..! ಪೊಲೀಸ್​ ಬಲೆಗೆ ಬಿದ್ದವನದ್ದು ಭಯಂಕರ ಇತಿಹಾಸ 

    ಭವಿಷ್ಯದಲ್ಲಿ ಟಾಟಾ ಟ್ರಸ್ಟ್​ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಾಂಸ್ಥೀಕರಣ ಯೋಜನೆಗಳನ್ನು ರತನ್​ ಟಾಟಾ ಹೊಂದಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸದ್ಯ ಟಾಟಾ ಸನ್ಸ್​ ಹಾಗೂ ಟಾಟಾ ಟ್ರಸ್ಟ್​ ಎರಡಕ್ಕೂ ಅಧ್ಯಕ್ಷರಾದ ಕೊನೆಯ ವ್ಯಕ್ತಿ ರತನ್​ ಟಾಟಾ ಆಗಿದ್ದಾರೆ. ಸದ್ಯ ಎನ್​. ಚಂದ್ರಶೇಖರ್​ ಟಾಟಾ ಸನ್ಸ್​ ಅಧ್ಯಕ್ಷರಾಗಿದ್ದಾರೆ.

    ಈ ರಾಸಾಯನಿಕವಿರುವ ಹ್ಯಾಂಡ್​ ಸ್ಯಾನಿಟೈಸರ್​ ಬಳಸದಿರಿ…! ಎಚ್ಚರ ಜೀವಕ್ಕೆ ಅಪಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts