More

    ವಯನಾಡಿನಲ್ಲಿ ಮತ್ತೆ ನಕ್ಸಲ್ ಹೆಜ್ಜೆ: ಕರಪತ್ರ ಹಂಚಿ ಸಿಎಂಗೆ ಸವಾಲು ಹಾಕಿದ ನಕ್ಸಲ್​ ಪಡೆ

    ವಯನಾಡ್: ವಯನಾಡಿನಲ್ಲಿ ಮತ್ತೆ ನಕ್ಸಲರು ಕಾಣಿಸಿಕೊಂಡಿದ್ದು, ಕರಪತ್ರ ಹಂಚಿ ಕೇರಳ ಮುಖ್ಯಮಂತ್ರಿಗೆ ಸವಾಲು ಹಾಕಿದ್ದಾರೆ.

    ಭಾನುವಾರ ರಾತ್ರಿ 8ರ ಸುಮಾರಿಗೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರಿದ್ದ ಸಶಸ್ತ್ರ ನಕ್ಸಲ್ ಗುಂಪೊಂದು ಕಾಲನಿಗೆ ಭೇಟಿ ನೀಡಿರುವುದಾಗಿ ತೊಂಡರ್ನಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪೆರಿಂಚೆರ್ಮಲ ಬುಡಕಟ್ಟು ಕಾಲನಿಯ ನಿವಾಸಿಗಳು ತಿಳಿಸಿದ್ದಾರೆ.

    ನಕ್ಸಲ್ ತಂಡ ಕಾಲನಿಯ 2 ಮನೆಗಳಿಗೆ ನುಗ್ಗಿ ಘೋಷಣೆ ಕೂಗುತ್ತಾ ಕರಪತ್ರ ಕೊಟ್ಟರು. ಬಳಿಕ ಈ ಪ್ರದೇಶದಲ್ಲಿ ಪೋಸ್ಟರ್‌ಗಳನ್ನು ಅಂಟಿಸಿದ ಗುಂಪು ಅರಣ್ಯದತ್ತ ಹೋಯಿತು ಎಂದು ತಿಳಿದುಬಂದಿದೆ. ಪೋಸ್ಟರ್‌ಗಳಲ್ಲಿ ಜುಲೈ 28, ಆಗಸ್ಟ್ 3 ಹುತಾತ್ಮರ ವಾರಾಚರಣೆ ಮತ್ತು ಸರ್ಕಾರಕ್ಕೆ ಕಠಿಣ ಸಂದೇಶಗಳ ವಿವರಣೆ ಬರೆಯಲಾಗಿದೆ. ಅಷ್ಟೇ ಅಲ್ಲ, ಕೇರಳ ಸಿಎಂ ಬಗ್ಗೆ ಅವಹೇಳನಕಾರಿ ಬರಹವೂ ಇದೆ.

    ‘ಶ್ರೀ ಪಿಣರಾಯಿ ವಿಜಯನ್ ಕೇರಳ ಕಂಡ ಅತ್ಯಂತ ನರಭಕ್ಷಕ ಮುಖ್ಯಮಂತ್ರಿ. ಇನ್ನಮುಂದೆ ನಿಮ್ಮನ್ನು ಯಾರೂ ಸಾಮಾಜಿಕ ಫ್ಯಾಸಿಸ್ಟ್ ಅಥವಾ ಕಿಡಿಗೇಡಿ ಮೋದಿ ಎಂದು ಕರೆಯುವುದಿಲ್ಲ. ನೀವು ಮಾನವ ಯಕೃತ್ತನ್ನು ಕಿತ್ತೆಗೆಯುವ ವ್ಯಕ್ತಿ. ಸಾವಿನ ವ್ಯಾಪಾರಿ’ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಪೋಸ್ಟರ್‌ಗಳು ಸಿಪಿಐ-ಮಾವೋವಾದಿ ಬಾಣಾಸುರ ಪ್ರದೇಶ ಸಮಿತಿಯ ಹೆಸರಿನಲ್ಲಿವೆ. ಪೊಲೀಸ್ ಥಂಡರ್ ಬೋಲ್ಟ್ ತಂಡವು ಸ್ಥಳಕ್ಕೆ ತಲಪಿದೆ.

    2022ರ ಮಾರ್ಚ್​ನಲ್ಲಿ ಕರ್ನಾಟಕದ ಸಿಎಂ ಆಗ್ತಾರೆ ಗಡ್ಡಧಾರಿ ವ್ಯಕ್ತಿ! ಭಾರೀ ಕುತೂಹಲ ಮೂಡಿಸಿದೆ ಈ ಭವಿಷ್ಯವಾಣಿ

    ನಿನ್ನ ಅಪ್ಪ-ಅಮ್ಮ ಯಾರು? ಎನ್ನುತ್ತಾ ಸಿದ್ದರಾಮಯ್ಯರ ಮೂಲ ಕೆದಕಿದ ಈಶ್ವರಪ್ಪ

    ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts