More

    ರಾಜ ವಂಶಸ್ಥರ ಜತೆ ಉಪಾಹಾರ ಸೇವಿಸಿದ ಪ್ರಧಾನಿ ಮೋದಿ: ಸ್ಪೆಷಲ್​ ಮೈಸೂರು​ ಪಾಕ್ ಸೇರಿ 10 ಬಗೆಯ ಖಾದ್ಯ

    ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರು ಉಪಾಹಾರದ ವ್ಯವಸ್ಥೆ ಮಾಡಿದ್ದರು. ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಆಹ್ವಾನದ ಉಪಹಾರಕೂಟದಲ್ಲಿ ಭಾಗಿಯಾದ ಮೋದಿ ಅವರಿಗೆ ದಕ್ಷಿಣ ಭಾರತ ಶೈಲಿಯ ತರೇಹವಾರಿ ತಿಂಡಿಗಳನ್ನು ಬಳ್ಳಿ ತಟ್ಟೆಯಲ್ಲಿ ಬಡಿಸಲಾಯಿತು. ಸ್ಪೆಷಲ್​ ಮೈಸೂರು​ ಪಾಕ್​, ಇಡ್ಲಿ ಸಾಂಬರ್, ಅವಲಕ್ಕಿ, ಉಪ್ಪಿಟ್ಟು​ ಕೂಡ ಈ ಮೆನುವಿನಲ್ಲಿತ್ತು.

    ಅರಮನೆ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಸತತ 45 ನಿಮಿಷ ಕಾಲ ಸಾವಿರಾರು ಯೋಗಪಟುಗಳ ಜತೆ ಯೋಗ ಪ್ರದರ್ಶನ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ನಂತರ ಡಿಜಿಟಲ್​ ಯೋಗ ಕೇಂದ್ರವನ್ನು ಉದ್ಘಾಟಿಸಿದರು. ಬಳಿಕ ಅಂಬಾವಿಲಾಸ ಅರಮನೆಗೆ ತೆರಳಿದ ಮೋದಿ ಅವರು ರಾಜಮನೆತನದ ಆತಿಥ್ಯ ಸ್ವೀಕರಿಸಿದರು. ಪ್ರಧಾನಿಗಾಗಿ ಶುದ್ಧ ಸಸ್ಯಹಾರದ ಖಾದ್ಯಗಳನ್ನು ರಾಜಮಾತೆ ಪ್ರಮೋದಾ ದೇವಿ ಅವರ ನೇತೃತ್ವದಲ್ಲಿ ತಯಾರಿಸಲಾಗಿತ್ತು.

    ರಾಜ ವಂಶಸ್ಥರ ಜತೆ ಉಪಾಹಾರ ಸೇವಿಸಿದ ಪ್ರಧಾನಿ ಮೋದಿ: ಸ್ಪೆಷಲ್​ ಮೈಸೂರು​ ಪಾಕ್ ಸೇರಿ 10 ಬಗೆಯ ಖಾದ್ಯ

    ರಾಜವಂಶಸ್ಥರ ಜತೆ ಪ್ರಧಾನಿ ಉಪಹಾರ ಸೇವಿಸುತ್ತಿದ್ದರೆ, ಇತ್ತ ಅರಮನೆ ಆವರಣದ ಹೊಗೆ ಸೇರಿದ್ದ ಸಾವಿರಾರು ಜನರು ಮೋದಿ.. ಮೋದಿ.. ಎಂದು ಜೈಕಾರ ಕೂಗುತ್ತಲೇ ಇದ್ದರು.

    ಯೋಗಕ್ಕೆ ಧರ್ಮದ ಪಟ್ಟಿ ಕಟ್ಟಿರುವುದು ಬೇಸರ: ನಟಿ ಅದಿತಿ ಪ್ರಭುದೇವ ವಿಷಾದ

    ಮೈಸೂರಲ್ಲಿ ‘ನಮೋ’ ಯೋಗ: ನಿರಾಸೆಯಲ್ಲಿದ್ದ ಕೆಲ ಯೋಗಪಟುಗಳ ಮೊಗದಲ್ಲಿ ಸಂತಸ ಮೂಡಿಸಿದ ಡಿಸಿಪಿ

    ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ: ಕರುನಾಡ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು… ಬೆಂಗ್ಳೂರಿನ ಮಹಾ ಜನತೆಗೆ ಧನ್ಯವಾದಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts