More

    20 ಚಿನ್ನದ ಪದಕಗಳಿಗೆ ಮುತ್ತಿಟ್ಟ ರೈತನ ಮಗಳು! ಮೈಸೂರು ವಿವಿ ಘಟಿಕೋತ್ಸವದಲ್ಲಿ ಇವಳ ಸಾಧನೆಯೇ ಆಕರ್ಷಣೆ

    ಮೈಸೂರು: ಇಂದು ನಡೆದ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವ ಸಮಾರಂಭದಲ್ಲಿ ಆಕರ್ಶಕ ಕೇಂದ್ರಬಿಂದುವಾಗಿದ್ದು ಚೈತ್ರಾ ನಾರಾಯಣ ಹೆಗ್ಡೆ. ಕೆಲಸ ಮಾಡುತ್ತಲೇ ಓದಿನ ಮಹದಾಸೆ ಈಡೇರಿಸಿಕೊಂಡ ಚೈತ್ರಾಗೆ ಬರೋಬ್ಬರಿ 20 ಚಿನ್ನದ ಪದಕ, 4 ನಗದು ಬಹುಮಾನ ಒಲಿದಿದೆ. ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ವಿದ್ಯಾರ್ಥಿನಿಯೇ ಸಾಕ್ಷಿ.

    ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಸೀಗೆಹಳ್ಳಿಯ ರೈತ ದಂಪತಿ ನಾರಾಯಣ ಹೆಗ್ಡೆ ಮತ್ತು ಸುಮಂಗಲಾ ಹೆಗ್ಡೆ ಅವರ ಮಗಳಾದ ಚೈತ್ರಾ, ರಸಾಯನಶಾಸ್ತ್ರ ವಿಭಾಗದಲ್ಲಿ ಇಡೀ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಆರ್ಗಾನಿಕ್, ಇನ್ ಆರ್ಗಾನಿಕ್ ಮತ್ತು ಫಿಜಿಕಲ್ ಕೆಮಿಸ್ಟ್ರಿಯಲ್ಲಿ ತಲಾ 3 ಚಿನ್ನದ ಪದಕ ಪಡೆದ ಚೈತ್ರಾ, ಒಟ್ಟಾರೆ ಅತಿ ಹೆಚ್ಚು ಫಲಿತಾಂಶ ಪಡೆದು ಇನ್ನೂ 11 ಪದಕಗಳೊಂದಿಗೆ ಒಟ್ಟು 20 ಚಿನ್ನದ ಪದಕ ಹಾಗೂ 4 ದತ್ತಿ ಬಹುಮಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ.

    ಬಿಎಸ್ಸಿ ಪದವಿಗಾಗಿ ಮೈಸೂರಿನ ಯುವರಾಜ ಕಾಲೇಜು ಸೇರಿದ್ದ ಚೈತ್ರಾ, ನಂತರ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ ಎಂಎಸ್ಸಿ ಪದವಿ ಪೂರ್ಣಗೊಳಿಸಿದ್ದರು. ಇದೀಗ ಯುವರಾಜ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

    20 ಸ್ವರ್ಣ ಪದಕ ಪಡೆದು ಮಾತನಾಡಿದ ಚೈತ್ರಾ, ಪ್ರತಿದಿನ ಅಧ್ಯಾಪಕರು ತರಗತಿಯಲ್ಲಿ ಹೇಳಿಕೊಟ್ಟದ್ದನ್ನು ಹಾಸ್ಟೆಲ್​ಗೆ ಬಂದ ಕೂಡಲೇ ಪುನರಾವರ್ತನೆ ಮಾಡಿಕೊಳ್ಳುತ್ತಿದ್ದೆ. ಸ್ನೇಹಿತರೊಂದಿಗೂ ಚರ್ಚೆ ಮಾಡುತ್ತಿದ್ದೆ. ಹಾಗಾಗಿ ಹೆಚ್ಚು ನೆನಪಿನಲ್ಲಿ ಉಳಿಯುತ್ತಿತ್ತು‌. ಪರೀಕ್ಷೆ ಒಂದು ತಿಂಗಳಿದೆ ಎನ್ನುವಾಗ ಮಾತ್ರ ಸೀರಿಯಸ್ ಆಗಿ ಓದುತ್ತಿದ್ದೆ ಎಂದು ನಗೆ ಬೀರಿದರು‌.

    ರಸಾಯನಶಾಸ್ತ್ರ ವಿಷಯದಲ್ಲೇ ಸಂಶೋಧನೆ ಮಾಡಲು ಬಯಸಿದ್ದೇನೆ. ಸದ್ಯ ಫೆಲೋಶಿಪ್​ಗೆ ಆಯ್ಕೆಯಾಗಿದ್ದು, ಪಿಎಚ್‌ಡಿ ನಂತರ ಸಂಶೋಧಕಿಯಾಗುವ ಗುರಿ ಇದೆ. ನಾನು ಭಾರತೀಯ ವಿಜ್ಞಾನ ಸಂಸ್ಥೆಗೆ ಸೇರುವ ಮಹದಾಸೆ ಇದೆ ಎನ್ನುತ್ತಾ ತನ್ನ ಮುಂದಿನ ಗುರಿ ಏನೆಂದು ತಿಳಿಸಿದರು.

    ಮೈಸೂರು ವಿಶ್ವವಿದ್ಯಾನಿಲಯಕ್ಕೆ 101ನೇ ಘಟಿಕೋತ್ಸವ ಸಂಭ್ರಮ: ಇಬ್ಬರಿಗೆ ಗೌಡಾ​, 29,852 ಮಂದಿಗೆ ಪದವಿ ಪ್ರದಾನ

    ಅಶ್ಲೀಲ ಚಿತ್ರ ತೋರಿಸಿ ಅದರಂತೆ ಸಹಕರಿಸು ಎಂದು ಹಿಂಸಿಸ್ತಾನೆ, ನನ್ನ ಗಂಡನ ಕಿರುಕುಳ ಸಹಿಸಲಾಗ್ತಿಲ್ಲ…

    ಬೆಂಗಳೂರು, ಮೈಸೂರಿನ ಜೆಎಸ್​ಎಸ್​ನಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts