More

    ಮೈಸೂರಲ್ಲಿ ಹಿಂದೂ ದೇಗುಲಗಳನ್ನೇ ಟಾರ್ಗೆಟ್ ಮಾಡ್ತಿರೋದ್ಯಾಕೆ? ದರ್ಗಾ, ಚರ್ಚ್‌ ಅನ್ನೇಕೆ ತೆರವು ಮಾಡ್ತಿಲ್ಲ?

    ಮೈಸೂರು: ಮೈಸೂರು ನಗರದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡ ನೆಪಸಲ್ಲಿ ಶೇ.90ರಷ್ಟು ಹಿಂದು ದೇಗುಲಗಳ ನೆಲಸಮ ಮಾಡುವ ಕ್ರಮಕ್ಕೆ ಸಾರ್ವಜನಕರಾದಿಯಾಗಿ ಜನಪ್ರತಿನಿಧಿಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಹಿಂದು ದೇಗುಲಗಳನ್ನೇ ಟಾರ್ಗೆಟ್​ ಮಾಡ್ತಿರೋದ್ಯಾಕೆ? ದರ್ಗಾ, ಚರ್ಚ್‌ಗಳನ್ನೇಕೆ ತೆರವು ಮಾಡ್ತಿಲ್ಲ? ಎಂದು ಸಂಸದ ಪ್ರತಾಪ್​ ಸಿಂಹ ಆಕ್ರೋಶ ಹೊರ ಹಾಕಿದ್ದಾರೆ.

    ತೆರವು ಮಾಡಲು ಉದ್ದೇಶಿಸಿರುವ ದೇಗುಲಗಳ ಪಟ್ಟಿಯಲ್ಲಿ ಮೈಸೂರಿನ ಅಗ್ರಹಾರದ 101 ಗಣಪತಿ ದೇವಸ್ಥಾನವೂ ಇದೆ. ಈ ದೇಗುಲದ ಮುಂದೆ ಸುದ್ದಿಗೋಷ್ಠಿ ನಡೆಸಿದ ಪ್ರತಾಪ್​ ಸಿಂಹ, ಮಧ್ಯರಾತ್ರಿ ವೇಳೆ ಕಳ್ಳರಂತೆ ಬಂದು ಹಿಂದೂ ದೇವಾಲಯಗಳನ್ನ ಕೆಡವುತ್ತಿದ್ದಿರಿ. ಜನರಿಲ್ಲದೆ ವೇಳೆ ಕಳ್ಳರು ದರೋಡೆ ಮಾಡ್ತಾರೆ. ಅದೇ ರೀತಿ ಇವರು ನಮ್ಮ ದೇವಸ್ಥಾನಗಳನ್ನ ಕೆಡವುತ್ತಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಮಾತೆತ್ತಿದರೆ ಸುಪ್ರೀಂ ಕೋರ್ಟ್ ಆರ್ಡರ್ ಅಂತಾರೆ. ನಮ್ಮ ಹತ್ತಿರವೂ ಸುಪ್ರೀಂ ಕೋರ್ಟ್ ಆರ್ಡರ್ ಪ್ರತಿ ಇದೆ. ಸುಪ್ರೀಂ ಕೋರ್ಟ್ 2009ರಲ್ಲಿ ಮಧ್ಯಂತರ ಆದೇಶ ನೀಡಿದೆ. 8 ವಾರದೊಳಗೆ ತೀರ್ಪು ಅನುಷ್ಠಾನದ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದೆ. 2009ರಲ್ಲಿ ದೇವಸ್ಥಾನ, ಮಸೀದಿ ಮತ್ತು ಚರ್ಚ್​ಗಳನ್ನು ತಲೆ ಎತ್ತಲು ಬಿಡಬೇಡಿ ಅಂತ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮೈಸೂರಿನ ಕ್ಯಾತಮಾರನ ಹಳ್ಳಿಯಲ್ಲಿ ಮಸೀದಿ ತಲೆ ಎತ್ತಲು ಹೇಗೆ ಬಿಟ್ಡಿದ್ದೀರಾ? ಇದರಿಂದ ರಾಜು ಮರ್ಡರ್ ಆಯಿತು… ಎಂದು ಜಿಲ್ಲಾಡಲಿತವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

    ತೆರವು ಮಾಡಲು ಉದ್ದೇಶಿಸಿರುವ ಪಟ್ಟಿಯಲ್ಲಿ ಸುಮಾರು 90 ಹಿಂದು ದೇಗುಲಗಳಿವೆ. ಅವುಗಳನ್ನ ಕೆಡವುದರಿಂದ ಜನರ ಭಾವನೆಗೆ ಧಕ್ಕೆಯಾಗುತ್ತೆ. ನಾನು ಕೆಡಿಪಿ ಸಭೆಯಲ್ಲಿ ಇದನ್ನೇ ಚರ್ಚೆ ಮಾಡಿರುವೆ. ನಮ್ಮ ಹಿಂದೂ ದೇವಾಲಯಗಳನ್ನೇ ಏಕೆ ಟಾರ್ಗೆಟ್ ಮಾಡ್ತೀರಾ? ದರ್ಗಾ, ಚರ್ಚ್‌ಗಳನ್ನು ಏಕೆ ತೆರವು ಮಾಡಿಲ್ಲ? ಎಂದು ಜಿಲ್ಲಾಡಳಿತವನ್ನು ಪ್ರತಾಪ್​ ಸಿಂಹ ಪ್ರಶ್ನಿಸಿದರು.

    ಮೈಸೂರಲ್ಲಿ ಹಿಂದೂ ದೇಗುಲಗಳನ್ನೇ ಟಾರ್ಗೆಟ್ ಮಾಡ್ತಿರೋದ್ಯಾಕೆ? ದರ್ಗಾ, ಚರ್ಚ್‌ ಅನ್ನೇಕೆ ತೆರವು ಮಾಡ್ತಿಲ್ಲ?

    ದೇವಸ್ಥಾನಗಳಿಗೆ ಎದುರಾಗಿರುವ ಕಂಟಕ ನಿವಾರಣೆ ಮಾಡುವಂತೆ ದೇವರನ್ನು ಬೇಡಿರುವೆ. ಈ 101 ಗಣಪತಿಯು ದೇವಸ್ಥಾನದ ಪ್ರತೀಕ. ಇದೇ ಸೆ.21ರಂದು ಈ ದೇಗುಲವನ್ನು ನೆಲಸಮ ಮಾಡುತ್ತೇವೆ ಅಂತ ನೋಟಿಸ್ ನೀಡಿದ್ದಾರೆ. 1955ರಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ತೆರವು ಮಾಡಲು ಬಿಡಲ್ಲ ಎಂದರು.

    ಸುದ್ದಿಗೋಷ್ಠಿಯಲ್ಲಿ ಮೇಯರ್ ಸುನಂದಾ ಪಾಲನೇತ್ರಾ, ನಗರ ಘಟಕ ಬಿಜೆಪಿ ಅಧ್ಯಕ್ಷ ಶ್ರೀವತ್ಸ, ಪ್ರೇಮ್‌ಕುಮಾರ್ ಸೇರಿದಂತೆ ಹಲವು ಪಾಲ್ಗೊಂಡಿದ್ದರು.

    ಮೈಸೂರಲ್ಲಿ 93 ದೇವಾಲಯಗಳಿಗೆ ನೆಲಸಮಕ್ಕೆ ಸಜ್ಜು! ಮಹಾನಗರ ಪಾಲಿಕೆಯ ಲಿಸ್ಟ್​ಗೆ ಜನ ಶಾಕ್​

    ಶನಿ ದೇವರ ಗೋಲಕ ಕದ್ದವ ಸಿಸಿಟಿವಿಯ ವಕ್ರದೃಷ್ಟಿಗೆ ಬಿದ್ದ! ಮರುದಿನವೇ ಕಾದಿತ್ತು ಶಿಕ್ಷೆ

    ರಾತ್ರೋರಾತ್ರಿ ಚಿತ್ರದುರ್ಗದಲ್ಲಿ ಗಣಪತಿ ವಿಗ್ರಹ ಧ್ವಂಸ, ದಕ್ಷಿಣ ಕನ್ನಡದಲ್ಲಿ ಗಣಪತಿ ಕಟ್ಟೆಗೂ ಹಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts