More

    ಮೈಸೂರು ದಸರಾ: ಡೋಲು ಬಡಿದು ಕುಣಿದು ಕುಪ್ಪಳಿಸಿದ ಸಚಿವ ಸೋಮಶೇಖರ್​, ಜಿಲ್ಲಾಧಿಕಾರಿ ಸಾಥ್​

    ಮೈಸೂರು: ನಾಡಹಬ್ಬ ದಸರಾ ಹಿನ್ನೆಲೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ಬರ ಮಾಡಿಕೊಳ್ಳುವ ಸಂದರ್ಭದಲ್ಲಿ‌ ಡೋಲು, ತಮಟೆ ಸದ್ದಿಗೆ ಸಚಿವ ಎಸ್.ಟಿ.ಸೋಮಶೇಖರ್ ಸಖತ್‌ ಸ್ಟೆಪ್‌ ಹಾಕಿ ಗಮನ ಸೆಳೆದರು. ಡೋಲು ಬಡಿದು, ಕಂಸಾಳೆಯಾಡಿ, ಕಲಾವಿದರೊಂದಿಗೆ ವೀರಗಾಸೆ ಕುಣಿತ ಮಾಡಿದರು.

    ಆರಮನೆ ಆವರಣದಲ್ಲಿ ನೆರೆದಿದ್ದ ಕಲಾತಂಡಗಳ ಜತೆ ಕಲಾವಿದರಂತೆಯೇ ಡೋಲು ಬಾರಿಸಿದರು. ವೀರಗಾಸೆ ಕಲಾವಿದರನ್ನು ಹುರಿದುಂಬಿಸುವ ಜತೆಗೆ ತಮ್ಮಲ್ಲಿನ ಜಾನಪದ ಕಲೆಯನ್ನೂ ಸಚಿವರು ಪ್ರದರ್ಶಿಸಿದರು.

    ಮೈಸೂರು ದಸರಾ: ಡೋಲು ಬಡಿದು ಕುಣಿದು ಕುಪ್ಪಳಿಸಿದ ಸಚಿವ ಸೋಮಶೇಖರ್​, ಜಿಲ್ಲಾಧಿಕಾರಿ ಸಾಥ್​

    ಪೂಜಾ ಕುಣಿತ, ಗೊಂಬೆ ಕುಣಿತ ನೋಡಿದ ಸಚಿವರು ಅವರೊಂದಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಸಚಿವರ ಕುಣಿತ, ಡೋಲು ಬಡಿತವನ್ನು ಕಂಡ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಕೂಡ ತಮಟೆ ಬಾರಿಸಿ ಸಂಭ್ರಮಿಸಿದರು.

    ಮೈಸೂರು ದಸರಾ: ಡೋಲು ಬಡಿದು ಕುಣಿದು ಕುಪ್ಪಳಿಸಿದ ಸಚಿವ ಸೋಮಶೇಖರ್​, ಜಿಲ್ಲಾಧಿಕಾರಿ ಸಾಥ್​

    ಸಚಿವರೊಂದಿಗೆ ಮೂಡಾ ಅಧ್ಯಕ್ಷ ರಾಜೀವ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಗಳ ಅಧ್ಯಕ್ಷ ಅಪ್ಪಣ್ಣ ಸೇರಿದಂತೆ ಹಲವು ಮುಖಂಡರು ಹೆಜ್ಜೆ ಹಾಕಿದರು.

    ಮೈಸೂರಿನ ಜಂಬೂಸವಾರಿಯಲ್ಲಿ ಈ 6 ಸ್ತಬ್ಧಚಿತ್ರಗಳಿಗಷ್ಟೇ ಅವಕಾಶ

    ನವರಾತ್ರಿ ಮುಕುಟ ಮೈಸೂರು ದಸರಾ: ಚಾಮುಂಡಿ ನಾಡದೇವತೆಯಾಗಿದ್ದು ಹೇಗೆ?

    ಮೈಸೂರು ದಸರಾ: ಇದೇ ಮೊದಲ ಬಾರಿಗೆ ಚಾಮುಂಡಿ ಬೆಟ್ಟದಿಂದ ಮೆರವಣಿಗೆಯಲ್ಲಿ ಅರಮನೆಗೆ ಬಂದ ಉತ್ಸವ ಮೂರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts