More

    ಮೂರು ಮರಿಗಳಿಗೆ ಜನ್ಮ ನೀಡಿದ ಬಿಳಿಹುಲಿ! ಮೈಸೂರು ಮೃಗಾಲಯದಲ್ಲಿ ಸಂಭ್ರಮ

    ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಮೂರು ಹುಲಿ ಮರಿಗಳ ಜನನವಾಗಿದ್ದು, ಸಂತಸ ಮನೆ ಮಾಡಿದೆ.

    9 ವರ್ಷಗಳ ಬಳಿಕ ಮೃಗಾಲಯದಲ್ಲಿ ಬಿಳಿ ಹುಲಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮರಿಗಳು ಆರೋಗ್ಯದಿಂದ ಇವೆ. 4 ವರ್ಷದ ಗಂಡು ಹುಲಿ ರಾಕಿ ಮತ್ತು 8 ವರ್ಷದ ಬಿಳಿ ಹೆಣ್ಣು ಹುಲಿ ತಾರಾಗೆ ಜನಿಸಿದ ಮರಿಗಳಾಗಿವೆ.

    ಈ ಹುಲಿಯ ಚಲನವಲನ ಹಾಗೂ ಆರೋಗ್ಯದ ಸ್ಥಿತಿಗತಿ ಬಗ್ಗೆ ತಿಳಿಯುವುದಕ್ಕಾಗಿ ಬೋನ್​ನಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಏ.26ರಂದು ಮರಿಗಳಿಗೆ ಜನ್ಮ ನೀಡಿರುವ ತಾರಾ, ಸಹಜವಾಗಿ ಹಾಲುಣಿಸುವ ಮೂಲಕ ಆರೈಕೆ ಮಾಡುತ್ತಿದೆ. ಕಳೆದ ಎರಡು ವಾರಗಳಿಂದ ತಾಯಿ ಮತ್ತು ಮರಿಗಳ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು. ತಾಯಿ ಹುಲಿಯಿಂದ ಸಹಜ ವರ್ತನೆ ದೃಢಪಟ್ಟ ಹಿನ್ನೆಲೆಯಲ್ಲಿ ಸಂತಾನಾಭಿವೃದ್ಧಿಯ ಕುರಿತು ಮೃಗಾಲಯವು ಮಾಹಿತಿಯನ್ನು ಸೋಮವಾರ ಬಹಿರಂಗಪಡಿಸಿದೆ.

    ಹುಲಿ ಮರಿಗಳ ಜನನ ಹಾಗೂ ಹುಲಿಗಳ ಸಂರಕ್ಷಣೆಯಲ್ಲಿ ಮೈಸೂರು ಮೃಗಾಲಯ ಮುಂಚೂಣಿಯಲ್ಲಿದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಹುಲಿಗಳ ಕೂಡುವಿಕೆಗೆ ಅವಕಾಶ ನೀಡಿರಲಿಲ್ಲ. ಇದರಿಂದ ಜನನ ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ ಬೇರೆ ಬೇರೆ ಮೃಗಾಲಯಗಳಿಂದ ಹುಲಿಗಳ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ತಾರಾ ಹಾಗೂ ರಾಕಿ ಹುಲಿಗೆ ಜೋಡಿ ಕಟ್ಟಲಾಗಿತ್ತು. ಕೆಲ ವರ್ಷಗಳ ನಂತರ ಈ ಜೋಡಿ ಪರಸ್ಪರ ಒಂದುಗೂಡಿದ್ದವು. ಇದೀಗ ಮೂರು ಮರಿಗಳು ಜನಿಸಿವೆ.

    ಪ್ರಾಣಿ ಪಾಲಕರು ಹಾಗೂ ವೈದ್ಯರು ತಾಯಿ ಹುಲಿ, ಮರಿಗಳ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ಈ ಮರಿಗಳ ಜನನದಿಂದಾಗಿ ಮೈಸೂರು ಮೃಗಾಲಯ 9 ಗಂಡು ಹುಲಿ, 7 ಹೆಣ್ಣು ಹುಲಿ ಹಾಗೂ 3 ಹುಲಿ ಮರಿಗಳನ್ನು ಹೊಂದಿದಂತಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್​ ಎಂ.ಕುಲಕರ್ಣಿ ತಿಳಿಸಿದ್ದಾರೆ.

    ಬಿಕಿನಿ ಧರಿಸಿಕೊಂಡೇ ಬರ್ತ್​ ಡೇ ಕೇಕ್​ ಕತ್ತರಿಸಿದ ಆಮಿರ್​ ಖಾನ್​ ಪುತ್ರಿ ಇರಾ! ಫೋಟೋ ವೈರಲ್​, ನೆಟ್ಟಿಗರಿಂದ ಬಗೆಬಗೆಯ ಕಮೆಂಟ್​

    ಕೆಆರ್​ಎಸ್​ಗೆ ಸರ್​ ಎಂ.ವಿಶ್ವೇಶ್ವರಯ್ಯರ ಮರಿಮೊಮ್ಮಗ ಭೇಟಿ: ಕುಟುಂಬ ಸಮೇತ ಜಲವೈಭವ ವೀಕ್ಷಣೆ

    ರಾತ್ರಿ ಸತ್ತವ, ಬೆಳಗ್ಗೆ ಬದುಕಿದ! ಕೊಳ್ಳೇಗಾದಲ್ಲಿ ರಾತ್ರಿಯಿಡೀ ನಡೆಯಿತು ನರಬಲಿ ವಿಸ್ಮಯ… ಇದು ದೇವರ ಪವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts