More

    ಹನುಮ ದೇವಸ್ಥಾನಕ್ಕೆ 50 ಲಕ್ಷ ಮೌಲ್ಯದ ಜಾಗ ದಾನ ಮಾಡಿದ ಮುಸ್ಲಿಂ ವ್ಯಕ್ತಿ! ಭಕ್ತರ ಕಷ್ಟ ನೋಡಲಾಗದೆ ದಾನ ಮಾಡಿದರಂತೆ

    ಬೆಂಗಳೂರು: ಧರ್ಮದ ಜಗಳ ಮಾಡುವ ಜನರು ಅವರ ಧರ್ಮದ ಹೊರೆತು ಬೇರೆ ಧರ್ಮದ ಧಾರ್ಮಿಕ ಸ್ಥಳಗಳಿಗೆ ಹಾನಿ ಮಾಡುವ ಪ್ರಕರಣಗಳನ್ನು ಕೇಳಿದ್ದೇವೆ. ಆದರೆ ಬೆಂಗಳೂರಿನ ಈ ಒಬ್ಬ ವ್ಯಕ್ತಿ ಮಾತ್ರ ಬೇರೆ ಧರ್ಮದ ಧಾರ್ಮಿಕ ಸ್ಥಳ ನಿರ್ಮಿಸಿಕೊಳ್ಳಲು ತನ್ನ ಆಸ್ತಿ ದಾನ ಮಾಡುವ ಮೂಲಕ ಆದರ್ಶ ವ್ಯಕ್ತಿ ಎನಿಸಿಕೊಂಡಿದ್ದಾರೆ.

    ಇದನ್ನೂ ಓದಿ: VIDEO: 144 ಮಹಡಿಗಳ ಕಟ್ಟಡ 10 ಸೆಕೆಂಡ್​ನಲ್ಲೇ ನೆಲಸಮ- ಮಾಡಿತು ವಿಶ್ವದಾಖಲೆ

    ಬೆಂಗಳೂರು – ಚೆನ್ನೈ ರಾಷ್ಟ್ರೀಯ ಹೆದ್ದಾರಿಯಿರುವ ಹೊಸಕೋಟೆಯಲ್ಲಿ ಎಚ್​ಎಂಜಿ ಬಾಷಾ ಹೆಸರಿನ ವ್ಯಕ್ತಿಗೆ ಸೇರಿದ್ದ 1.5 ಗುಂಟೆ ಜಾಗವಿತ್ತು. ಹೆದ್ದಾರಿಯ ಪಕ್ಕದಲ್ಲೇ ಈ ಜಾಗವಿದ್ದಿದ್ದರಿಂದ ಇದರ ಬೆಲೆ ಸುಮಾರು 50 ಲಕ್ಷ ರೂಪಾಯಿಯಷ್ಟಿತ್ತು. ಈತನ ಜಾಗದ ಪಕ್ಕದಲ್ಲೇ ಸಣ್ಣದೊಂದು ಹನುಮಾನ್​ ದೇವಸ್ಥಾನವಿದೆ. ದೇವಸ್ಥಾನ ತುಂಬಾ ಸಣ್ಣವಿದ್ದಿದ್ದರಿಂದ ಯಾವಗಲೂ ಭಕ್ತರಿಗೆ ಕಿರಿಕಿರಿಯಾಗುತ್ತಿದ್ದಂತೆ. ಇದನ್ನು ಕಂಡಿದ್ದ ಬಾಷಾ ತನ್ನ ಜಾಗವನ್ನು ದೇವಸ್ಥಾನಕ್ಕೆ ಬಿಟ್ಟುಕೊಡುವ ನಿರ್ಧಾರ ಮಾಡಿದ್ದಾರೆ. ಮನೆಯ ಸದಸ್ಯರನ್ನು ಕೇಳಿದಾಗ ಅವರೂ ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇದೀಗ ತಮ್ಮ 1.5 ಗುಂಟೆ ಜಾಗವನ್ನು ದೇವಸ್ಥಾನಕ್ಕೆ ಬಿಟ್ಟುಕೊಟ್ಟಿದ್ದಾರೆ.

    ಇದನ್ನೂ ಓದಿ: ಪಾವಗಡದಲ್ಲಿ ಆಂಧ್ರ ಶೈಲಿ ರಾಜಕಾರಣ ; ಕುಡಿಯುವ ನೀರಿನ ಬವಣೆ ನೀಗಿಲ್ಲ ; ಗಡಿಭಾಗದಲ್ಲಿ ಗರಿಗೆದರಿದ ರಾಜಕೀಯ

    ಬಾಷಾ ಕೊಟ್ಟಿರುವ ಜಾಗವನ್ನು ಗೌರವದಿಂದ ಸ್ವೀಕರಿಸಿರುವ ದೇವಸ್ಥಾನ ಮಂಡಳಿ ಇದೀಗ ಅಲ್ಲಿ ದೊಡ್ಡ ದೇವಸ್ಥಾನವನ್ನು ನಿರ್ಮಿಸಲಾರಂಭಿಸಿದೆ. ಬಾಷಾ ಅವರ ತ್ಯಾಗವನ್ನು ಜನೆತೆಗೆ ಗೊತ್ತು ಮಾಡಿಸುವ ಸಲುವಾಗಿ ರಸ್ತೆ ಬಳಿ ದೊಡ್ಡ ಫ್ಲಕ್ಸ್​ನ್ನು ದೇವಸ್ಥಾನ ಮಂಡಳಿ ಹಾಕಿಸಿದೆ. ಅವರ ದಾನ ಅತ್ಯಂತ ಶ್ರೇಷ್ಠವಾದದ್ದು ಎಂದು ಮಂಡಳಿ ಸದಸ್ಯ ಭೈರೇ ಗೌಡ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ

    ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts