More

    ಮೇಕೆದಾಟು ಪಾದಯಾತ್ರೆ: ಬೆಂಗ್ಳೂರು-ಮೈಸೂರು ಹೆದ್ದಾರೀಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಪ್ರಕಟ

    ರಾಮನಗರ: ಮೇಕೆದಾಟು ಪಾದಯಾತ್ರೆ ಹಿನ್ನೆಲೆ ಜ.13 ಮತ್ತು 14 ರಂದು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಮಾರ್ಗವನ್ನ ಪೊಲೀಸ್ ಇಲಾಖೆ ಬದಲಾಯಿಸಿದೆ.

    ಇಂದು(ಬುಧವಾರ) ಪಾದಯಾತ್ರೆಯು ಕನಕಪುರದಿಂದ ರಾಮನಗರ ಪ್ರವೇಶಿಸಲಿದೆ. ಈ ಪಾದಯಾತ್ರೆಯು ಜ.13 ಮತ್ತು 14 ರಂದು ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲಿದೆ. ಹಾಗಾಗಿ ಈ 2 ದಿನ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆ ಉಂಟಾಗಲಿದೆ. ಹಾಗಾಗಿ ವಾಹನ ಸವಾರರ ಅನುಕೂಲಕ್ಕಾಗಿ ಬದಲಿ ಮಾರ್ಗ ಸೂಚಿಸಲಾಗಿದೆ.

    ಮೈಸೂರು, ಚಾಮರಾಜನಗರ, ಮಡಿಕೇರಿ ಕಡೆಯಿಂದ ಬೆಂಗಳೂರು ಕಡೆಗೆ, ಬೆಂಗಳೂರು ಕಡೆಯಿಂದ ಮೈಸೂರು, ಚಾಮರಾಜನಗರ, ಮಡಿಕೇರಿ ಕಡೆಗೆ ಸಂಚರಿಸಲಿರುವ ಎಲ್ಲ ಮಾದರಿಯ ವಾಹನಗಳ ಸವಾರರು ರಾಷ್ಟ್ರೀಯ ಹೆದ್ದಾರಿಯ ಮುಖಾಂತರ ಸಂಚರಿಸುವ ಬದಲು ಮೈಸೂರು-ಬನ್ನೂರು-ಕಿರುಗಾವಲು-ಮಳವಳ್ಳಿ-ಹಲಗೂರು-ಸಾತನೂರು-ಕನಕಪುರ-ಹಾರೋಹಳ್ಳಿ-ಕಗ್ಗಲೀಪುರ-ಬನಶಂಕರಿ-ಸಾರಕ್ಕಿ ಮಾರ್ಗವಾಗಿ ಅಥವಾ ಮೈಸೂರು-ಶ್ರೀರಂಗಪಟ್ಟಣ-ಪಾಂಡವಪುರ-ನಾಗಮಂಗಲ-ಬೆಳ್ಳೂರುಕ್ರಾಸ್-ಕುಣಿಗಲ್ ನೆಲಮಂಗಲ ಮಾರ್ಗವಾಗಿ ಸಂಚರಿಸಬೇಕು. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ಮನವಿ ಮಾಡಿದೆ.

    ಪಾದಯಾತ್ರೆ ಹಿನ್ನೆಲೆ ನಾಳೆ-ನಾಡಿದ್ದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್​ ಮಾಡುವ ಮೂಲಕ ಪೋಲಿಸ್ ಇಲಾಖೆಯೇ ಪರೋಕ್ಷವಾಗಿ ಪಾದಯಾತ್ರೆಗೆ ಅನುಮತಿ ಕೊಟ್ಟಂತಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ. ಆದರೆ, ಅನುಮತಿ ಇಲ್ಲದಿದ್ದರೂ ಪಾದಯಾತ್ರೆ ನಡೆಯುತ್ತಿದ್ದು, ಒಂದು ವೇಳೆ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ದಿನಗಟ್ಟಲೆ ಟ್ರಾಫಿಕ್​ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಳ್ಳಲಿದೆ. ಈ ಹಿನ್ನೆಲೆ ಪೊಲೀಸರು ಕೈಗೊಂಡ ಕ್ರಮ ಸರಿ ಎಂಬ ಮಾತೂ ಕೇಳಿಬರುತ್ತಿದೆ.

    ಮೇಕೆದಾಟು ಪಾದಯಾತ್ರೆ ತಡೆಗೆ ಪಿಐಎಲ್​: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ಹಿಗ್ಗಾಮುಗ್ಗಾ ತರಾಟೆ

    ಲೈಂಗಿಕತೆಗಾಗಿ ಪತ್ನಿಯರ ವಿನಿಮಯ! ಟೆಲಿಗ್ರಾಂ, ಮೆಸೆಂಜರ್​ ಗ್ರೂಪ್​ನಲ್ಲೇ ವ್ಯವಹಾರ… ಅಸಹ್ಯ ಹುಟ್ಟಿಸುತ್ತೆ ಇವರ ಕೃತ್ಯ

    ಬರೋಬ್ಬರಿ 6 ಅಡಿ ಮೇಲೆದ್ದ ಡುಪ್ಲೆಕ್ಸ್​ ಮನೆ! ಶಿವಮೊಗ್ಗದಲ್ಲಿ 150 ಜಾಕ್​ ಬಳಸಿ ಬಿಹಾರಿ ಕಾರ್ಮಿಕರ ಮ್ಯಾಜಿಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts