ಕೊಂಡೋತ್ಸವ ವೇಳೆ ದುರಂತ: ಮನೆಯ ಸಜ್ಜಾ ಕುಸಿದು ಸ್ಥಳದಲ್ಲೇ ಮಹಿಳೆ ಸಾವು, 10 ಮಕ್ಕಳ ಸ್ಥಿತಿ ಗಂಭೀರ

MADDUR
Published on

ಮಂಡ್ಯ: ದೇವರ ಕೊಂಡೋತ್ಸವ ವೇಳೆ ಮನೆಯ ಸಜ್ಜಾ ಕುಸಿದು ಮಹಿಳೆ ಮೃತಪಟ್ಟಿದ್ದು, ಮಕ್ಕಳು ಸೇರಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಮದ್ದೂರು ತಾಲೂಕಿನ ಹುಲಗೆರೆಪುರದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

ಹುಲಗೆರೆಪುರ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ ಕೊಂಡೋತ್ಸವ ನೋಡಲು ದೇವಾಲಯ ಸಮೀಪ ಮಾದೇಗೌಡ ಎಂಬುವರ ಮನೆ ತಾರಸಿ ಮೇಲೆ 70ಕ್ಕೂ ಹೆಚ್ಚು ಜನ ನಿಂತಿದ್ದರು. ಇದು 90 ವರ್ಷದ ಹಳೇ ಕಟ್ಟಡವಾಗಿದ್ದು, ಜನರ ಭಾರ ತಾಳಲಾರದೆ ತಾರಸಿಯ ಒಂದು ಭಾಗ ಕುಸಿದಿದೆ. ಪುಟ್ಟಲಿಂಗಮ್ಮ(50) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, 10ಕ್ಕೂ ಹೆಚ್ಚು ಮಕ್ಕಳ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಮಂಡ್ಯ ಜಿಲ್ಲಾಸ್ಪತ್ರೆ ಮತ್ತು ಮದ್ದೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net