More

    ಫ್ಲೈಓವರ್ ಮೇಲೆ ಪೊಲೀಸರಿಗೆ ಚಮಕ್​ ಕೊಟ್ಟ ಕುಡುಕ!

    ಬೆಂಗಳೂರು: ಇಂದು ಮುಂಜಾನೆ ತುಮಕೂರು ರಸ್ತೆ ಫ್ಲೈಓವರ್ ಮೇಲೆ ನಿತ್ರಾಣವಾಗಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ಪರದಾಡಿದ ಪೊಲೀಸರಿಗೂ ಕೊನೆಯಲ್ಲಿ ಶಾಕ್​ ಕಾದಿತ್ತು!

    ಕರೊನಾ ಭೀತಿ ಹಿನ್ನೆಲೆ ಫ್ಲೈಓವರ್ ಮೇಲೆ ಬಿದ್ದು ನರಳಾಡುತ್ತಿದ್ದ ವ್ಯಕ್ತಿಯ ಹತ್ತಿರ ಯಾರೊಬ್ಬರೂ ಸುಳಿದಿರಲಿಲ್ಲ. ಸ್ಥಳಕ್ಕೆ ಬಂದ ಪೀಣ್ಯಾ ಪೊಲೀಸರು ಆ ವ್ಯಕ್ತಿ ಬಳಿ ಹೊಯ್ಸಳ ವಾಹನವನ್ನು ಅಡ್ಡಲಾಗಿ ನಿಲ್ಲಿಸಿ ಕಾವಲಿದ್ದರು. ಆಂಬುಲೆನ್ಸ್​ಗಾಗಿ ಮೂರು ತಾಸು ಕಾದರು. ಈ ವ್ಯಕ್ತಿ ತೀವ್ರ ಜ್ವರದಿಂದ ಬಳಲಿ ಕುಸಿದು ಬಿದ್ದಿದ್ದಾನೆ ಎಂದೇ ಪೊಲೀಸರು ಭಾವಿಸಿದ್ದರು. ಅವನನ್ನು ಆಸ್ಪತ್ರೆಗೆ ಸೇರಿಸಲು ಸಾಕಷ್ಟು ಬಾರಿ ಆಂಬುಲೆನ್ಸ್​ಗಾಗಿ ಕರೆ ಮಾಡಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ತಡವಾಗಿ ಆಂಬುಲೆನ್ಸ್​ ಬಂದರೂ ಆ ಬಳಿಕ ಗೊತ್ತಾಯ್ತು ಆ ವ್ಯಕ್ತಿಯ ಮರ್ಮ. ಇದನ್ನೂ ಓದಿರಿ ಗಂಡ-ಹೆಂಡ್ತಿ ಸಮಸ್ಯೆ ಬಗೆಹರಿಸಿ ಅಂದ್ರೆ ಪಲ್ಲಂಗಕ್ಕೆ ಕರೀತಾರೆ!

    ಫ್ಲೈಓವರ್ ಮೇಲೆ ಬಿದ್ದಿದ್ದ ವ್ಯಕ್ತಿಯ ದೇಹದ ಉಷ್ಣಾಂಶ ಹೆಚ್ಚಿತ್ತು. ಹಾಗಾಗಿ ಆತ ತೀವ್ರ ಜ್ವರದಿಂದ ಬಳಲುತ್ತಿದ್ದಾನೆ ಎಂದು ಆತನ ರಕ್ಷಣೆಗಾಗಿ ಪೊಲೀಸರು ಕಾದಿದ್ದರು.

    ಆಂಬುಲೆನ್ಸ್​ ಸ್ಥಳಕ್ಕೆ ಬಂದಾಗ ಎಚ್ಚರಗೊಂಡ ಆತ, ‘ಅಯ್ಯೋ ಸಾರ್, ನನಗೆ ಯಾವ ಜ್ವರವೂ ಇಲ್ಲ. ರಾತ್ರಿಯೇ ಕಂಠಪೂರ್ತಿ ಕುಡಿದು ಇಲ್ಲೇ ಮಲಗಿಬಿಟ್ಟೆ. ನನ್ನನ್ನು ಬಿಟ್ಟುಬಿಡಿ…’ ಎಂದು ಗೋಗರೆದ. ಆತ ಯಾರು? ಎಲ್ಲಿಯವ? ಎಂಬ ಮಾಹಿತಿ ಇಲ್ಲ.

    video/ ಕಾರು ಬಿಟ್ಟು ಸೈಕಲ್​ನಲ್ಲೇ ಬಂದ ಸಿದ್ದರಾಮಯ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts