More

    ಪುತ್ರಿ ಅಂತರ್ಜಾತಿ ವಿವಾಹ: ಪತ್ನಿ, ಪುತ್ರನನ್ನು ಮನೆಯಿಂದ ಹೊರಗೆ ಹಾಕಿದ ಪತಿ!

    ಶಿವಮೊಗ್ಗ: ತಾಲೂಕಿನ ಮಂಡಘಟ್ಟ ಸಮೀಪದ ಚಿನ್ಮನೆ ಗ್ರಾಮದಲ್ಲಿ ಪುತ್ರಿ ಅಂತರ್ಜಾತಿ ಯುವಕನೊಂದಿಗೆ ಪ್ರೇಮ ವಿವಾಹವಾದಳೆಂಬ ಕಾರಣಕ್ಕೆ ಪತ್ನಿ ಮತ್ತು ಮಗನನ್ನೇ ವ್ಯಕ್ತಿಯೊಬ್ಬ ಮನೆಗೆ ಹೊರಗೆ ಹಾಕಿದ್ದು, ಪ್ರಕರಣ ಇದೀಗ ಮಹಿಳಾ ಠಾಣೆ ಮೆಟ್ಟಿಲೇರಿದೆ.

    ಚಿನ್ಮನೆ ಗ್ರಾಮದ ಮಂಜುನಾಥ್ ಎಂಬುವರ ವಿರುದ್ಧ ಪತ್ನಿ ಮತ್ತು ಪುತ್ರನನ್ನು ಮನೆಯಿಂದ ಹೊರಗೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಶುಕ್ರವಾರ ಸಿ.ಜೆ.ಅನಿತಾ ಮತ್ತು ಆಕೆಯ ಪುತ್ರ ಪೊಲೀಸರಿಗೆ ದೂರು ನೀಡಿದ್ದಾರೆ.

    ಗುರುಪುರದ ಅನಿತಾ 24 ವರ್ಷದ ಹಿಂದೆ ಚಿನ್ಮನೆ ಗ್ರಾಮದ ಮಂಜುನಾಥ್ ಜತೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಅದರಲ್ಲಿ ಆರೇಳು ತಿಂಗಳ ಹಿಂದೆ 22 ವರ್ಷದ ಪುತ್ರಿ ಅಂತರ್ಜಾತಿ ವಿವಾಹವಾಗಿದ್ದಳು. ಇದನ್ನೇ ನೆಪ ಮಾಡಿಕೊಂಡ ಮಂಜುನಾಥ, ಪತ್ನಿ ಮತ್ತು ಪುತ್ರನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ.

    ಪತಿಗೆ ಅನೈತಿಕ ಸಂಬಂಧವಿದೆ. ಹಾಗಾಗಿ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾರೆಂದು ಅನಿತಾ ಈ ಮೊದಲು ಕುಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ ಎಫ್‌ಐಆರ್ ದಾಖಲಾದ ಹಿನ್ನಲೆಯಲ್ಲಿ ಇತ್ತೀಚೆಗೆ ಪೊಲೀಸರೊಂದಿಗೆ ಮಹಜರು ಮಾಡಲು ತೆರಳಿದಾಗ ಮಂಜುನಾಥ ಮತ್ತು ಅವರ ಸಹೋದರರು ಅನಿತಾ ಮೇಲೆ ಹಲ್ಲೆ ನಡೆಸಿ ಮೊಬೈಲ್ ಸೇರಿ ಕೆಲ ದಾಖಲೆಗಳನ್ನು ಕಿತ್ತುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಅನಿತಾ ಅವರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

    ಡಿಜೆ ಹಳ್ಳಿ ಗಲಭೆ ಹಿಂದೆ ಇರುವ ನಾಯಕ ಜಮೀರ್ ಅಹ್ಮದ್: ಈಶ್ವರಪ್ಪ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts