More

    ವಿಶೇಷ ಪ್ಯಾಕೇಜ್ ಘೋಷಿಸಿ ಲಾಕ್​ಡೌನ್​ ಮಾಡಿ: ಮಲ್ಲಿಕಾರ್ಜುನ ಖರ್ಗೆ

    ಕಲಬುರಗಿ: ಆರ್ಥಿಕ ಹೊಡೆತದ ಸಂಷಕ್ಟದಿಂದ ಜನ ಕೊಂಚ ಚೇತರಿಸಿಕೊಳ್ಳುವ ಹೊತ್ತಿಗೆ ಲಾಕ್​ಡೌನ್, ಸೆಮಿ ಲಾಕ್​ಡೌನ್, ವಾರಾಂತ್ಯ ಕರ್ಫ್ಯೂ ಹೇರುತ್ತಿರುವ ಸರ್ಕಾರದ ಕ್ರಮಕ್ಕೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಬಿಜೆಪಿ ಸರ್ಕಾರಗಳ ಬೇಕಾಬಿಟ್ಟಿ ನಿರ್ಧಾರಗಳಿಂದ ಈ ಹಿಂದೆ ಬಡ, ಮಧ್ಯಮ ವರ್ಗದ ಜನರು ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ವ್ಯಾಪಾರಿಗಳು ಇನ್ನೂ ತೊಂದರೆಯಿಂದ ಹೊರಬಂದಿಲ್ಲ. ಕಾರ್ಮಿಕರು ಸೇರಿ ಎಲ್ಲರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಲಿ. ಆಮೇಲೆ ಲಾಕ್​ಡೌನ್​ ಸೇರಿ ಏನಾದರೂ ಮಾಡಲಿ ಎಂದು ಆಗ್ರಹಿಸಿದರು.

    ಎಲ್ಲರೂ ಗಂಗಾ ಸ್ನಾನ ಮಾಡುವಾಗ ಲಕ್ಷಾಂತರ ಜನ ಇರುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಗಂಗಾ ಸ್ನಾನ ಮಾಡುವಾಗ ಒಬ್ಬರೇ ಇದ್ದರು. ನದಿಯಲ್ಲಿ ಮುಳುಗಿದಾಗ ಪೂರ್ಣ ತಲೆಯೂ ತೋಯ್ದಿರಲಿಲ್ಲ. ಮೋದಿ ಕೇವಲ ಶೋ ಪುಟಪ್ ಮಾಡುತ್ತಾರೆ. ಆಗ ನಿತ್ಯ ಮೂರು ಜಾಕೆಟ್ ಬದಲಿಸುತ್ತಿದ್ದರು. ಈಗ ದಿನಕ್ಕೊಂದು ಕಾಶ್ಮೀರಿ ಶಾಲು ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದು ಖರ್ಗೆ ಟೀಕಿಸಿದರು.

    ಮೇಕೆದಾಟು ಯೋಜನೆ ಪಾದಯಾತ್ರೆ ಕುರಿತು ರಾಜ್ಯ ಕಾಂಗ್ರೆಸ್ ನಾಯಕರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಖರ್ಗೆ ಹೇಳಿದರು.

    ತೃತೀಯ ರಂಗ ರಚನೆ ಕಷ್ಟ, ನನಗೆ ವಯಸ್ಸಾಗಿದೆ, ದೇಶ ಸುತ್ತುವ ಶಕ್ತಿ ನನ್ನಲ್ಲಿಲ್ಲ: ದೇವೇಗೌಡ

    ನಾನು ಜೀವಂತವಾಗಿ ವಾಪಸ್​ ಬರಲು ಸಹಕರಿಸಿದ್ದಕ್ಕೆ ಥ್ಯಾಂಕ್ಸ್​: ಪಂಜಾಬ್​ ಸಿಎಂಗೆ ಪ್ರಧಾನಿ ಟಾಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts