More

    ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ: ಪಂಚಲೋಹದ ಮಹಿಷ ವಿಗ್ರಹ ಮೆರವಣಿಗೆ

    ಮೈಸೂರು: ಅಶೋಕ ಪುರಂನಲ್ಲಿ ಇಂದು ಮಹಿಷ ದಸರಾ ಆಚರಣೆ ಮಾಡಲಾಯಿತು. ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಮಹಿಷಾ ದಸರಾ ಆಚರಣಾ ಸಮಿತಿ ಅನುಮತಿ ಕೇಳಿತ್ತಾದರೂ ಜಿಲ್ಲಾಡಳಿತ ಕೊಟ್ಟಿರಲಿಲ್ಲ. ಹಾಗಾಗಿ ಅಶೋಕ ವೃತ್ತದ ಬಳಿಯಿರುವ ಬುದ್ಧ ವಿಹಾರದಿಂದ ಅಶೋಕಪುರಂ ಅಂಬೇಡ್ಕರ್ ಪಾರ್ಕ್​ವರೆಗೂ ಮಹಿಷ ವಿಗ್ರಹವನ್ನು ಮೆರವಣಿಗೆ ಮೂಲಕ ತಂದು ಆಚರಣೆ ಮಾಡಲಾಯಿತು.

    ಟ್ಯಾಬ್ಲೋ ಮಾದರಿಯಲ್ಲಿ ಪಂಚಲೋಹದ ಮಹಿಷ ವಿಗ್ರಹ ಪ್ರತಿಷ್ಠಾಪಿಸಿ ಪುಷ್ಪಾರ್ಚನೆ ಮಾಡಲಾಯಿತು. ಮಹಿಷ ದಸರಾ ಮೆರವಣಿಗೆ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಹಾಗೂ ಮಾಜಿ ಮೇಯರ್ ಪುರುಷೋತ್ತಮ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶ್ರೀಗಳು, ಜಿಲ್ಲಾಧಿಕಾರಿ ಬೇಕಿದ್ದರೆ ಒಂದು ಪಕ್ಷದ ಕಚೇರಿ ಅಂತ ಬೋರ್ಡ್ ಹಾಕಿಕೊಳ್ಳಲಿ. ಆಗ ನಾವು ಅವರ ಅನುಮತಿಯನ್ನು ಕೇಳುವುದಿಲ್ಲ. ನಮ್ಮದು ಬಹುತ್ವದ ಭಾರತ. ಸಂವಿಧಾನದ ಅಡಿಯಲ್ಲಿ ನಡೆಯುವ ಆಚರಣೆಗೆ ಅನುಮತಿ ಕೊಡಲ್ಲ ಅಂದ್ರೆ ಯಾವ ಸಂವಿಧಾನ ಆಚರಣೆ ಮಾಡುತ್ತೀರಿ ನೀವು? ಆರ್ಟಿಕಲ್ 21, 25ರಲ್ಲಿ ನಮಗೆ ಅವಕಾಶ ಇದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ‌ ಇದ್ರೆ ಸರ್ಕಾರವೇ ಇದನ್ನು ಆಚರಣೆ ಮಾಡಬೇಕು ಎಂದು ಆಕ್ರೋಶ ಹೊರ ಹಾಕಿದರು.

    ಇಂದಿನಿಂದ ಗುರುವಾರ ಮಧ್ಯಾಹ್ನದ ವರೆಗೆ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ಬಂದ್​

    ಸಾರಿಗೆ ಬಸ್​ ಡ್ರೈವರ್​-ಕಂಡಕ್ಟರ್​ ಮೇಲೆ ಡಿಪೋ ಮ್ಯಾನೇಜರ್​ ದಬ್ಬಾಳಿಕೆ: ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts