More

    ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿದೆ ‘ಮಹಾ’ ಡ್ರಾಮಾ: ಈ ಮಧ್ಯೆ ಗವರ್ನರ್​ಗೆ ಕರೊನಾ ಪಾಸಿಟಿವ್​

    ಮುಂಬೈ: ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿದೆ ‘ಮಹಾ’ ಡ್ರಾಮಾ. ಮೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಉಂಟಾಗಿದ್ದಂಥ ರಾಜಕೀಯ ಅಸ್ಥಿರತೆ ಇದೀಗ ಮಹಾರಾಷ್ಟ್ರದಲ್ಲೂ ತಲೆದೋರಿದೆ. ಸಚಿವ ಏಕನಾಥ ಶಿಂಧೆ ನೇತೃತ್ವದಲ್ಲಿ ಬಂಡಾಯವೆದ್ದ ಶಿವಸೇನೆಯ 40ಕ್ಕೂ ಅಧಿಕ ಶಾಸಕರು ರೆಬಲ್​ ಆಗಿದ್ದು, ರಾಜ್ಯ ಸರ್ಕಾರ ಅತಂತ್ರ ಸ್ಥಿತಿಯಲ್ಲಿದೆ. ಬಂಡಾಯ ಶಾಸಕರ ಮನವೊಲಿಸಲು ಶರದ್​ ಪವಾರ್​ ಮತ್ತು ಉದ್ಧವ್​ ಠಾಕ್ರೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಇನ್ನೂ ಫಲಿಸಿಲ್ಲ. ನಿನ್ನೆ ಗುಜರಾತ್​ನ ಸೂರತ್​ನಲ್ಲಿರುವ ಹೋಟೆಲೊಂದರಲ್ಲಿ ಬೀಡುಬಿಟ್ಟಿದ್ದ ಈ ಎಲ್ಲ ಶಾಸಕರು ಇಂದು ಗುವಾಹಟಿಗೆ ತೆರಳಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಮಹಾರಾಷ್ಟ್ರದ ಗವರ್ನರ್​ ಕೋಶಿಯಾ ಅವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸರ್ಕಾರ ಅತಂತ್ರ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಸ್ಪೀಕರ್​ ಮತ್ತು ಗವರ್ನರ್​ ಪಾತ್ರ ಬಹಳ ಮುಖ್ಯ. ಒಂದು ವೇಳೆ ಏಕ್​ನಾಥ್​ ಶಿಂಧೆ ಹೇಳುವಂತೆ ಅವರ ಬಳಿ 40ಕ್ಕೂ ಶಾಸಕರ ಬೆಂಬಲ ಇದ್ರೆ, ನಾವು ಸರ್ಕಾರಕ್ಕೆ ಬೆಂಬಲ ಕೊಡುವುದಿಲ್ಲ, ಬಹುಮತ ಸಾಬೀತು ಮಾಡಲು ತಿಳಿಸಿ ಎಂದು ಹೇಳಬಹುದು. ಆಗ ಬಹುಮತ ಸಾಬೀತು ಪಡಿಸಲು ಗವರ್ನರ್​ ಹೇಳಬೇಕಾಗುತ್ತೆ. ರಾಜಕೀಯ ವಲಯದಲ್ಲಿ ಇದೇ ವಿಚಾರ ಬಹಳ ಚರ್ಚೆಯಾಗುತ್ತಿದೆ. ಗವರ್ನರ್​ ಅವರಿಗೆ ಕರೊನಾ ಸೋಂಕು ತಗುಲಿದ್ದು, ಅವರ ಅನುಪಸ್ಥಿತಿಯಲ್ಲಿ ಏನಾಗುತ್ತೆ? ಎಂಬ ಕುತೂಹಲ ಮೂಡಿದೆ. ಇಮದು ಮಧ್ಯಾಹ್ನ 12 ಗಂಟೆಯೊಳಗೆ ಮನೆಯಲ್ಲೇ ಕ್ಯಾಬಿನೆಟ್​ ಮೀಟಿಂಗ್​ ಮಾಡಲು ಉದ್ಧವ್​ ಠಾಕ್ರೆ ಸಜ್ಜಾಗಿದ್ದಾರೆ.

    ಸೂರತ್​ನಿಂದ ಅಸ್ಸಾಂಗೆ ಹಾರಿದ 40 ಶಿವಸೇನಾ ಶಾಸಕರು: ಶಿಂಧೆ ಬಾಯಲ್ಲಿ ಬಾಳ್ ಠಾಕ್ರೆ ಹಿಂದುತ್ವ ಘೋಷಣೆ

    ಬೆಂಗಳೂರಲ್ಲಿ ಪ್ರಧಾನಿ ಮೋದಿ, ಖರ್ಚಾಗಿದ್ದು ಎಷ್ಟು ಕೋಟಿ?

    ರಾ ರಾ ರಕ್ಕಮ್ಮ… ಹಾಡಿಗೆ ಡ್ಯಾನ್ಸ್​ ಮಾಡಿ ಕಿಚ್ಚನ ಮನಗೆದ್ದ ಪೌರ ಕಾರ್ಮಿಕರಿಗೆ ಸಿಕ್ತು ಖಾಯಂ ಉದ್ಯೋಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts