More

    ಸೂಟ್​ಕೇಸ್​ನಲ್ಲಿ ಪ್ರೇಯಸಿಯನ್ನು ತುಂಬಿಕೊಂಡು ಹಾಸ್ಟೆಲ್​ಗೆ ಕರೆತಂದ ವಿದ್ಯಾರ್ಥಿ! ವಿಡಿಯೋ ಸಖತ್​ ವೈರಲ್​

    ಬೆಂಗಳೂರು: ವಿದ್ಯಾರ್ಥಿಯೊಬ್ಬ ದೊಡ್ಡ ಟ್ರಾವೆಲ್ ಬ್ಯಾಗ್​ನಲ್ಲಿ ತನ್ನ ಗೆಳೆತಿಯನ್ನ ತುಂಬಿಕೊಂಡು ಕಾಲೇಜು ಹಾಸ್ಟೆಲ್​ಗೆ ಬಂದಿದ್ದ. ಗೆಳೆಯನಿಗೆ ಹತ್ತಿರವಾಗಲು ಖುಷಿಯಿಂದಲೇ ಬ್ಯಾಗ್​ ಒಳಗೆ ಕೂತು ಯಾರಿಗೂ ಅನುಮಾನ ಬಾರದಂತೆ ಹಾಸ್ಟೆಲ್​ ರೂಂ ಒಳ ಹೋಗಲು ಯುವತಿಯೂ ಸಿದ್ಧವಾಗಿದ್ದಳು. ಇನ್ನೇನು ಒಳ ಹೋಗಬೇಕು ಅನ್ನುವಷ್ಟರಲ್ಲಿ ಆಗಿದ್ದೇ ಬೇರೆ!

    ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಹಾಸ್ಟೆಲ್ ಒಳಗೆ ಕರೆದುಕೊಂಡು ಹೋಗಲು ದೊಡ್ಡ ಟ್ರಾವೆಲ್ ಬ್ಯಾಗ್ ಅನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದ್ದ. ಹಾಸ್ಟೆಲ್​ನಲ್ಲಿ ಯಾರಿಗೂ ಅನುಮಾನ ಬರುವುದಿಲ್ಲ. ಮೇಲ್ನೋಟಕ್ಕೆ ಬ್ಯಾಗ್​ನಲ್ಲಿ ಬಟ್ಟೆ ಅಥವಾ ಪುಸ್ತಕ ಇರಬೇಕು ಅಂದುಕೊಳ್ತಾರೆ ಎಂದು ಯುವತಿಯನ್ನ ಅದರಲ್ಲಿ ಕೂರಿಸಿಕೊಂಡು ಸಲೀಸಾಗಿ ಹಾಸ್ಟೆಲ್​ಗೆ ಬಂದಿದ್ದ. ಗೇಟ್​ನಲ್ಲಿ ಯುವಕನನ್ನು ತಡೆದ ಸೆಕ್ಯೂರಿಟಿ ಗಾರ್ಡ್​ಗಳು ಬ್ಯಾಗ್​ನಲ್ಲಿ ಏನಿದೆ? ಓಪನ್​ ಮಾಡು ಎಂದಿದ್ದಾರೆ.

    ಭಯಗೊಂಡ ಯುವಕ, ಬ್ಯಾಗ್​ ಸಮೇತ ಓಡಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಅನುಮಾನಗೊಂಡು ಸೂಟ್​ಕೇಸ್ ಓಪನ್​ ಮಾಡಿದ್ರೆ ಅದರಲ್ಲಿ ಯುವತಿ! ತಕ್ಷಣ ಯುವತಿ ಅಲ್ಲಿಂದ ಹೊರ ಹೋಗಿದ್ದಾಳೆ. ಈ ಎಲ್ಲ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಅಂದಹಾಗೆ ಇಂತಹ ವಿಲಕ್ಷಣ ಘಟನೆ ಉಡುಪಿ ಜಿಲ್ಲೆಯ ಮಣಿಪಾಲ ವಿವಿಯ ಎಂಐಟಿ ಕ್ಯಾಂಪಸ್​ನಲ್ಲಿ ನಡೆದದ್ದು ಎನ್ನಲಾಗಿದೆ. ಆದರೆ, ಈ ವಿಡಿಯೋಗೂ ಮಣಿಪಾಲ್​ಗೂ ಸಂಬಂಧವಿಲ್ಲ. ಇದು 2019ರಲ್ಲಿ ಉತ್ತರಖಾಂಡ್​ನ ಡೆಹ್ರಾಡೂನ್​ನಲ್ಲಿ ನಡೆದ ಘಟನೆ. ಹಳೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

    ಮಗಳ ಜತೆ ತಾಯಿ ಆತ್ಮಹತ್ಯೆ! 10 ದಿನದ ಹಿಂದೆ ವಿದ್ಯಾರ್ಥಿನಿಯೊಬ್ಬಳ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡದ್ದೇ ಮುಳುವಾಯ್ತಾ?

    4 ವರ್ಷದಿಂದ ಅಪ್ಪ ಲೈಂಗಿಕವಾಗಿ ಹಿಂಸಿಸ್ತಿದ್ದಾನೆ, ಈ ನರಕ ಸಹಿಸೋಕೆ ಆಗ್ತಿಲ್ಲಮ್ಮ… ಶಿವಮೊಗ್ಗದಲ್ಲಿ ತಾಯಿ-ಮಗಳ ನರಳಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts