More

    ಸಾಗುವ ದಾರಿ ಇನ್ನೂ ದೂರವಿದೆ…. ಸಾಮಾನ್ಯ ಜನರ ಸಂಕಷ್ಟ ನಿವಾರಣೆಗೆ ಆರ್ಥಿಕ ತಜ್ಞರು ಹೇಳೋದೇನು?

    ನವದೆಹಲಿ: ಲಾಕ್​ಡೌನ್​ ಅವಧಿ ಮತ್ತೆ ವಿಸ್ತರಣೆಯಾಗಿದೆ. ಹೀಗಾಗಿ ಸಾಗಬೇಕಾದ ದಾರಿ ಇನ್ನೂ ದೂರವಿದೆ. ಜೀವನಾಧಾರ ಕಳೆದುಕೊಂಡಿರುವುದು ಹಾಗೂ ಪೂರೈಕೆ ವ್ಯವಸ್ಥೆಯಲ್ಲಿ ಉಂಟಾಗಿರುವ ಅಡ್ಡಿಗಳಿಂದಾಗಿ ಹೆಚ್ಚಿನ ಜನರು ಬಡತನದ ಅಗ್ನಿಕುಂಡದಲ್ಲಿ ಬೇಯಲಿದ್ದಾರೆ ಅಥವಾ ಹಸಿವಿನಿಂದ ಕಂಗೆಡಲಿದ್ದಾರೆ ಎನ್ನುತ್ತಾರೆ ಆರ್ಥಿಕ ಪರಿಣತರು.

    ನೊಬೆಲ್​ ಪ್ರಶಸ್ತಿ ಪುರಸ್ಕೃತರಾದ ಅಮರ್ತ್ಯ ಸೇನ್​, ಅಭಿಜಿತ್​ ಬ್ಯಾನರ್ಜಿ ಹಾಗೂ ಆರ್​ಬಿಐ ಮಾಜಿ ಗವರ್ನರ್​ ಈ ಕುರಿತು ಹಲವು ಗಂಭೀರ ಕಳವಳವನ್ನು ವ್ಯಕ್ತಪಡಿಸಿದ್ದು, ಹಲವು ಸಲಹೆಗಳನ್ನು ನೀಡಿದ್ದಾರೆ.

    ಬಹುದೊಡ್ಡ ಪ್ರಮಾಣದಲ್ಲಿ ಆಹಾರ ಹಾಗೂ ಹಣ ಬಡವರಿಗೆಂದು ನೀಡಲಾಗುತ್ತಿದೆ. ಆದರೆ, ಇದು ಅನರ್ಹರ ಪಾಲಾಗುತ್ತದೆಯೇ ಎಂಬ ದೊಡ್ಡ ಚಿಂತೆ ಎಲ್ಲರನ್ನೂ ಕಾಡುತ್ತಿದೆ. ಬಡವರು ಇನ್ನಷ್ಟು ಬಡತನಕ್ಕೆ ತಳ್ಳಲ್ಪಡುವ ಸನ್ನಿವೇಶವಿದು. ಊಟ, ಅನ್ನಕ್ಕಾಗಿ ಅಲೆಯುತ್ತ, ತಮ್ಮೂರಿನ ದಾರಿ ಹಿಡಿದಿರುವ ನಿರಾಶ್ರಿತರು ಲಾಕ್​ಡೌನ್​ ಆದೇಶವನ್ನು ಉಲ್ಲಂಘಿಸುತ್ತ ಇನ್ನಷ್ಟು ತೊಂದರೆಗೆ ಸಿಲುಕುತ್ತಿದ್ದಾರೆ ಎನ್ನಬಹುದು. ಆದರೆ, ನಾವು ಕಳೆದುಕೊಳ್ಳುವುದು ಏನೂ ಇಲ್ಲ ಎಂಬ ಭಾವ ಅವರದು. ಆದರೆ, ಅವರ ಜೀವನದ ಅಗತ್ಯಗಳನ್ನು ನೋಡಿಕೊಳ್ಳಲಾಗುತ್ತದೆ ಎಂಬ ಭರವಸೆಯನ್ನು ಸಮಾಜ ಅವರಲ್ಲಿ ಮೂಡಿಸಬೇಕಿದೆ.

    ಇದಕ್ಕಾಗಿ ಅಗತ್ಯ ಸಂಪನ್ಮೂಲ ನಮ್ಮ ಬಳಿಯಿದೆ. ಭಾರತೀಯ ಆಹಾರ ನಿಗಮದ ಬಳಿ ಮಾರ್ಚ್​ ಅಂತ್ಯಕ್ಕೆ 77 ಮಿಲಿಯನ್ ಟನ್​ ಧಾನ್ಯಗಳನ್ನು ದಾಸ್ತಾನು ಹೊಂದಿದೆ. ಇದು ಅಗತ್ಯ ದಾಸ್ತಾನಿಗಿಂತಲೂ ಹೆಚ್ಚಾಗಿದೆ. ಕೆಲ ವಾರಗಳಲ್ಲಿ ಹಿಂಗಾರು ಫಸಲು ಕೊಯ್ಲಿಗೆ ಬಂದು ಇದು ಇನ್ನಷ್ಟು ಹೆಚ್ಚಾಗಲಿದೆ. ಪ್ರಸ್ತುತ ಲಾಕ್​ಡೌನ್​ನಿಂದಾಗಿ ಕೃಷಿ ಮಾರುಕಟ್ಟೆ ವಲಯದಲ್ಲಿ ಉಂಟಾಗಿರುವ ಅವ್ಯವಸ್ಥೆಯನ್ನು ಸರ್ಕಾರ ಪರಿಹರಿಸಬೇಕು. ರೈತರು ಫಸಲನ್ನು ಮಾರಲಾಗದೆ ಪರಿತಪಿಸುತ್ತಿದ್ದಾರೆ. ಅವರಿಂದ ಬೆಳೆಯನ್ನು ಖರೀದಿಸಬೇಕು. ತನ್ನಲ್ಲಿರುವ ಹೆಚ್ಚುವರಿ ದಾಸ್ತಾನು ವಿತರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವೆನಿಸುತ್ತದೆ. ಆದರೆ, ಇದನ್ನು ಅನಗತ್ಯ ಹೆಚ್ಚುವರಿ ವೆಚ್ಚವೆಂದು ಸಾರ್ವಜನಿಕ ಲೆಕ್ಕ ಪರಿಶೋಧನಾ ವ್ಯವಸ್ಥೆ ಪರಿಗಣಿಸಬಾರದು.

    ಈಗಾಗಲೇ ಪಡಿತರ ವ್ಯವಸ್ಥೆ ಮೂಲಕ ಮೂರು ತಿಂಗಳಿಗಾಗುವಷ್ಟು ಅಕ್ಕಿ, ಗೋಧಿ, ಬೇಳೆಯನ್ನು ನೀಡಲಾಗುತ್ತಿದೆ. ಆದರೆ, ಇದು ಸಾಕಾಗದು. ಏಕೆಂದರೆ ಲಾಕ್​ಡೌನ್​ ಮುಗಿದ ಬಳಿಕ ಆರ್ಥಿಕ ವ್ಯವಸ್ಥೆ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.
    ಇದಲ್ಲದೆ, ಪಡಿತರ ವ್ಯವಸ್ಥೆಯಿಂದ ಹೊರಗಿರುವ ಬಡವರ ಸಂಖ್ಯೆಯೂ ದೊಡ್ಡದಿದೆ. ಸಣ್ಣ ರಾಜ್ಯವಾದ ಜಾರ್ಖಂಡ್​ನಲ್ಲಿ ಪಡಿತರ ಕಾರ್ಡ್​ಗಳಿಗಾಗಿ ಸಲ್ಲಿಕೆಯಾಗಿರುವ ಏಳು ಲಕ್ಷ ಅರ್ಜಿಗಳು ಬಾಕಿ ಉಳಿದಿವೆ. ದೇಶಾದ್ಯಂತ ಒಟ್ಟಾರೆ ಅರ್ಜಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಅನರ್ಹರನ್ನು ಗುರುತಿಸಲು ಕೆಲ ಅರ್ಜಿಗಳನ್ನು ಬಾಕಿ ಉಳಿಸಿರಬಹುದು. ಆದರೆ, ಸಂದಿಗ್ಧ ಸಮಯದಲ್ಲಿ ಬಿಪಿಎಲ್​ ಕಾರ್ಡ್​ಗಳನ್ನು ನೀಡದಿರುವುದು ಸರಿಯಲ್ಲ. ಕನಿಷ್ಠ ಪರಿಶೀಲನೆಯೊಮದಿಗೆ ಆರು ತಿಂಗಳ ಮಟ್ಟಿಗಾದರೂ ತಾತ್ಕಾಲಿಕ ಕಾರ್ಡ್​ಗಳನ್ನು ವಿತರಿಸುವ ವ್ಯವಸ್ಥೆಯಾಗಬೇಕು ಎನ್ನುವುದು ಆರ್ಥಿಕ ತಜ್ಞರ ಸಲಹೆಯಾಗಿದೆ.

    ಯಾರೂ ಹಸಿವಿನಿಂದ ಕಂಗೆಡಬಾರದು ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಇದಕ್ಕಾಗಿ ಪಡಿತರ ವ್ಯವಸ್ಥೆ ವಿಸ್ತರಣೆ, ವಲಸಿಗರು, ನಿರಾಶ್ರಿತರಿಗಾಗಿ ಸಾರ್ವಜನಿಕ ಕ್ಯಾಂಟೀನ್​ಗಳನ್ನು ತೆರೆಯುವುದು, ಕೆಲ ರಾಜ್ಯಗಳಲ್ಲಿ ಈಗಾಗಲೇ ಮಾಡುತ್ತಿರುವಂತೆ ಮಧ್ಯಾಹ್ನದ ಬಿಸಿಯೂಟವನ್ನು ಮಕ್ಕಳ ಮನೆಗೆ ತಲುಪಿಸಲು ವ್ಯವಸ್ಥೆ ಮಾಡುವುದು ಇದಕ್ಕಾಗಿ ಸರ್ಕಾರೇತರ ಸಂಸ್ಥೆಗಳ ನೆರವು ಪಡೆಯಬಹುದು ಎನ್ನುತ್ತಾರೆ ಪರಿಣತರು.

    ಇದರೊಂದಿಗೆ ಆದಾಯದಲ್ಲಿ ನಷ್ಟ, ಉಳಿತಾಯದ ಮೊತ್ತವನ್ನು ಕಳೆದುಕೊಂಡಿರುವುದು ಕೂಡ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಲ್ಲುದು. ಅವರಿಗೆ ತಾತ್ಕಾಲಿಕವಾಗಿ ಊಟದ ವ್ಯವಸ್ಥೆಯಾಗಿದೆ ಎಂದಿಟ್ಟುಕೊಂಡರೂ, ಬೀಜ, ಗೊಬ್ಬರ ಖರೀದಿಸಿ ಕೃಷಿ ಚಟುವಟಿಕೆ ನಡೆಸಲು ರೈತರಿಗೆ ಹಣದ ಅಗತ್ಯ ಉಂಟಾಗಲಿದೆ. ಅಂಗಡಿಗಳಿಗೆ ಮತ್ತೆ ಸಾಮಗ್ರಿಗಳನ್ನು ಎಲ್ಲಿಂದ ತರಬೇಕೆಂಬ ಚಿಂತೆ ವ್ಯಾಪಾರಿಗಳನ್ನು ಕಾಡುತ್ತದೆ. ಈಗಾಗಲೇ ಮಾಡಿರುವ ಸಾಲದ ಕಂತನ್ನು ಪಾವತಿಸುವುದು ಹೇಗೆ ಎಂಬ ಚಿಂತೆ ಹಲವರನ್ನು ಬಾಧಿಸಲಿದೆ. ಇದ್ಯಾವುದನ್ನು ಸಮಾಜ ಚಿಂತಿಸದೆ ಇರಲು ಕಾರಣಗಳೇ ಇಲ್ಲ.

    ಸರ್ಕಾರ ಹಲವು ವಲಯಗಳಿಗೆ ನೆರವಿನ ಹಸ್ತ ಚಾಚಿದೆ. ಉಳಿದವರನ್ನು ಬಿಟ್ಟಿದ್ದೇಕೆ ಎಂಬ ಪ್ರಶ್ನೆ ಅಲ್ಲಿಯೂ ಕಾಡುತ್ತದೆ. ತೀವ್ರ ಸಂಕಷ್ಟದಲ್ಲಿರುವವರಿಗೆ ಹಾಗೂ ಕೈಗಾರಿಕೆ, ಉದ್ಯಮ, ಸೇವಾ ವಲಯ ಸೇರಿ ವಿವಿಧ ಕ್ಷೇತ್ರಗಳಿಗೆ ನೆರವಾಗಲು ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಅಗತ್ಯ ಸಂಪನ್ಮೂಲವಿರುವಂತೆ ನೋಡಿಕೊಳ್ಳಬೇಕಾಗುತ್ತದೆ ಎಂಬ ಸಲಹೆ ಅವರದ್ದು.

    ಚಿತ್ರಕಲೆಯಲ್ಲಿ ಆಸಕ್ತರಾಗಿದ್ದೀರಾ? ನಿಮಗಿದೆ 50 ಸಾವಿರ ರೂ. ಬಹುಮಾನ ಗೆಲ್ಲುವ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts