More

    ತಾರ್ಕಿಕವಾಗಿ ಯೋಚಿಸುವ ಮನಸ್ಸು ಅಗತ್ಯ

    ಕಿಕ್ಕೇರಿ: ಯುವಜನರು ಜಾಗೃತರಾದಲ್ಲಿ ಮಾತ್ರ ದೇಶ ಸಮಗ್ರವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಉಪಪ್ರಾಂಶುಪಾಲ ಎಚ್.ಎಂ. ಬಸವರಾಜಪ್ಪ ತಿಳಿಸಿದರು.

    ಯುವಜನ ಮತ್ತು ಅಭಿವೃದ್ಧಿ ಸಂಸ್ಥೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಶುಕ್ರವಾರ ಪಟ್ಟಣದ ಕೆಪಿಎಸ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೌಢ್ಯ ಬಿಟ್ಟು ಎಲ್ಲವನ್ನೂ ತಾರ್ಕಿಕವಾಗಿ ಯೋಚಿಸುವ ಮನಸ್ಸು ಅಗತ್ಯ ಎಂದರು.

    ಹುಟ್ಟು-ಸಾವಿನ ನಡುವೆ ಇರುವ ಸಮಯದಲ್ಲಿ ಗುರಿಮುಟ್ಟುವ ತನಕ ವಿರಮಿಸಿದೆ ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಸಾಧನೆಗೆ ಬೇಕಿರುವುದು ಅಚಲ ವಿಶ್ವಾಸ, ಕಠಿಣ ಶ್ರಮ ಎಂದು ಹೇಳಿದರು.

    ಯುವಜನ ಮತ್ತು ಅಭಿವೃದ್ಧಿ ಸಂಸ್ಥೆ ಮೇಲ್ವಿಚಾರಕ ಎನ್.ಪರಮೇಶ್ ಮಾತನಾಡಿ, ವಿವೇಕರು ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದು, ಇವರ ಧಾರ್ಮಿಕ ಪ್ರವಚನದಿಂದ ಇಡೀ ವಿಶ್ವವೇ ನಮ್ಮ ದೇಶದತ್ತ ನೋಡುವಂತಾಗಿದೆ ಎಂದು ನುಡಿದರು.

    ವಿವೇಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸ್ಮರಿಸಲಾಯಿತು. ಆಪ್ತ ಸಮಾಲೋಚಕಿ ವಿಂಧ್ಯಾ, ಮೇಲ್ವಿಚಾರಕ ಎನ್. ಪರಮೇಶ್, ಲ್ಯಾಬ್ ಟೆಕ್ನಿಷಿಯನ್ ರಂಗಸ್ವಾಮಿ, ಶಿಕ್ಷಕ ಸುರೇಶ್, ಶ್ರೀಕಾಂತ್ ಚಿಮ್ಮಲ್, ಸುಷ್ಮಾ, ತೇಜಾವತಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts