More

    ಕೋಳಿ ಫಾರಂಗೆ ನುಗ್ಗಿ 200 ಕೋಳಿಗಳನ್ನು ತಿಂದು ಮುಗಿಸಿದ ಚಿರತೆ!

    ತುಮಕೂರು: ಸಾಮಾನ್ಯವಾಗಿ ಕುರುಚಲು ಕಾಡು, ಗುಡ್ಡಗಾಡು ಪ್ರದೇಶ, ಪಾಳುಬಿದ್ದ ಜಮೀನುಗಳಲ್ಲಿ ಪೊದೆಗಳನ್ನು ಅರಸಿ ವಾಸಿಸುವ ಚಿರತೆಗಳಿಗೆ ಅಗತ್ಯ ಪ್ರಮಾಣ ಆವಾಸಸ್ಥಾನ ಸಿಗುತ್ತಿಲ್ಲ. ಹೀಗಾಗಿ ಚಿರತೆ ದಾಳಿ ಪ್ರಕರಣ ಹೆಚ್ಚಾಗುತ್ತಿವೆ. ರಾಜ್ಯದಲ್ಲೀಗ ಚಿರತೆ ಬಿಟ್ಟರೆ ಬೇರೆ ಮಾತೇ ಇಲ್ಲ. ತುಮಕೂರಿನ ಕುಣಿಗಲ್‌, ರಾಮನಗರ ಜಿಲ್ಲೆಯಲ್ಲಿಅಧಿಕವಾಗಿದ್ದ ಚಿರತೆಗಳ ಕಾಟ ಈಗ ರಾಜ್ಯಾದ್ಯಂತ ವಿಸ್ತರಿಸುತ್ತಿದೆ.

    ಚಿರತೆಯೊಂದು ಕೋಳಿ ಫಾರಂಗೆ ನುಗ್ಗಿ 200 ಕೋಳಿಗಳನ್ನು ತಿಂದಿರುವ ಘಟನೆ ಯಗಚಿಹಳ್ಳಿ ಗ್ರಾಮದ ತೋಟದ ಫಾರಂನಲ್ಲಿ ನಡೆದಿದೆ.

    ಇದನ್ನೂ ಓದಿ: 9 ತಿಂಗಳ ಕಾಲ ಬಾಣಂತಿಯೆಂದು ಸುಳ್ಳು ಹೇಳಿದಳು; ಸರ್ಕಾರದ ಪ್ರಯೋಜನ ಪಡೆಯಲು ಮಾಸ್ಟರ್​ ಪ್ಲ್ಯಾನ್​​!
    ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಗಚಿಹಳ್ಳಿಯ ನಿವಾಸಿ ಮಹಾಲಕ್ಷ್ಮೀ ಗಿರೀಶ್ ಎಂಬುವರಿಗೆ ಸೇರಿದ ಕೋಳಿ ಫಾರಂ ಇದಾಗಿದೆ. ಈ ಕೋಳಿ ಫಾರಂಗೆ ನುಗ್ಗಿದ ಚಿರತೆ ಕೋಳಿಗನ್ನು ತಿಂದು ಹಾಕಿದೆ. ಸಾಲ ಮಾಡಿ ಕೋಳಿ ಫಾರಂ ಮಾಡಿದ್ದ ರೈತ ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ.

    ಇದನ್ನೂ ಓದಿ: ನನ್ನ ಹೆಂಡ್ತಿಗೆ ಸೊಳ್ಳೆಗಳು ಕಚ್ಚುತ್ತಿವೆ ಕಾಪಾಡಿ.. ಕೆಲವೇ ಕ್ಷಣದಲ್ಲಿ ಸೊಳ್ಳೆ ಬತ್ತಿ ಕೊಟ್ಟ ಪೊಲೀಸ್!
    ಕಾಡು ಪ್ರಾಣಿಗಳ ದಾಳಿಯಿಂದ ಜಾನುವಾರುಗಳು ಪ್ರಾಣ ಕಳೆದುಕೊಂಡರೆ ಅರಣ್ಯ ಇಲಾಖೆ ಪರಿಹಾರ ನೀಡುತ್ತಿದೆ. ಹೀಗೆ ಚಿರತೆ ದಾಳಿಯಿಂದ ಕೋಳಿಗಳಿಗೆ ಪರಿಹಾರ ನೀಡುವಂತೆ ಪಶು ಇಲಾಖೆ‌ಯನ್ನು ಮನವಿ ಮಾಡಿದ್ದಾರೆ. ಈ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts