More

    ಆಟವಾಡುತ್ತಿದ್ದಾಗ ಬಾಲಕಿಯನ್ನು ಹೊತ್ತೊಯ್ದ ಚಿರತೆ ; ಕುಣಿಗಲ್‌ನ ತೆರೆದಕುಪ್ಪೆ ಗ್ರಾಮದಲ್ಲಿ ಪ್ರಕರಣ

    ಕುಣಿಗಲ್: ತಾಲೂಕಿನ ತೆರೆದಕುಪ್ಪೆ ಗ್ರಾಮದ ತೋಟದ ಮನೆ ಮುಂದೆ ಗುರುವಾರ ಮಧ್ಯಾಹ್ನ ಆಟವಾಡುತ್ತಿದ್ದ 6 ವರ್ಷದ ಬಾಲಕಿ ರೇಖಾಳನ್ನು ಚಿರತೆ ಎಳೆದೊಯ್ದು ಗಂಭೀರ ಗಾಯಗೊಳಿಸಿರುವ ಪ್ರಕರಣ ಗ್ರಾಮಸ್ಥರನ್ನು ಕೆರಳಿಸಿದೆ.

    ತಾಲೂಕಿನಲ್ಲಿ ಚಿರತೆ ದಾಳಿಗೆ ಈ ಹಿಂದೆ ವೃದ್ಧೆ ಹಾಗೂ ಬಾಲಕಿ ಬಲಿಯಾಗಿದ್ದು, ಮತ್ತೆ ಮುಂದುವರಿದಿದೆ. ಹೀಗಾಗಿ ತಕ್ಷಣವೇ ಚಿರತೆ ಸೆರೆ ಹಿಡಿಯುವಂತೆ ಪಟ್ಟು ಹಿಡಿದ ಗ್ರಾಮಸ್ಥರು ವಡ್ಡರಕುಪ್ಪೆ ಬಳಿ ಕುಣಿಗಲ್-ತುಮಕೂರು ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು. ಒಂದು ಗಂಟೆ ರಸ್ತೆ ಬಂದ್ ಮಾಡಿದ ಹಿನ್ನೆಲೆಯಲ್ಲಿ ತುಮಕೂರು-ಕುಣಿಗಲ್ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ನಿರಂಜನ್ ಕುಮಾರ್ ಗ್ರಾಮಸ್ಥರನ್ನು ಮನವೊಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಾಲಕಿ ರೇಖಾ ಮೇಲೆ ನರಭಕ್ಷಕ ಚಿರತೆ ದಾಳಿ ನಡೆಸಿದ ಸುದ್ದಿ ಕ್ಷಣಮಾತ್ರದಲ್ಲಿ ಸುತ್ತಮುತ್ತಲ ಗ್ರಾಮಗಳಿಗೆ ಹಬ್ಬಿತು. ಸ್ಥಳೀಯರ ಆಕ್ರೋಶಕ್ಕೆ ಹೆದರಿದ ಅರಣ್ಯ ಇಲಾಖೆ ಸಿಬ್ಬಂದಿ ಸವಮಸ್ತ್ರವಿಲ್ಲದೆ ಸ್ಥಳೀಯರಂತೆ ಆಗಮಿಸಿ ಸ್ಥಳದಲ್ಲಿ ಚಿರತೆಯ ಚಲನ, ವಲನದ ಮಾಹಿತಿ ಪಡೆದುಕೊಂಡರು.

    ಸಚಿವ ಆನಂದ್‌ಸಿಂಗ್ ಭೇಟಿ: ಅರಣ್ಯ ಸಚಿವ ಆನಂದಸಿಂಗ್ ಹಾಗೂ ಶಾಸಕ ರಂಗನಾಥ್ ಬೆಂಗಳೂರಿನ ಆಸ್ಪತ್ರೆಗೆ ಭೇಟಿ ನೀಡಿ ರೇಖಾ ಆರೋಗ್ಯ ವಿಚಾರಿಸಿಕೊಂಡಿದ್ದಾರೆ, ಅಲ್ಲದೇ ಶಾಸಕ ರಂಗನಾಥ್ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದ್ದು, ಸಚಿವ ಆನಂದ ಸಿಂಗ್ ಬಾಲಕಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದಲೇ ಭರಿಸುವುದಾಗಿ ತಿಳಿಸಿದ್ದಾರೆ.

    ನೆಮ್ಮದಿ ಕೆಡಿಸಿರುವ ನರಭಕ್ಷಕ ಚಿರತೆ!: ಕುಣಿಗಲ್, ಗುಬ್ಬಿ ಹಾಗೂ ತುಮಕೂರು ತಾಲೂಕು ಗಡಿ ಭಾಗದಲ್ಲಿ ಹೆಬ್ಬೂರು ಸುತ್ತಮುತ್ತ ನರಭಕ್ಷಕ ಚಿರತೆ ಹಾವಳಿಗೆ ಜನರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ 25ಕ್ಕೂ ಹೆಚ್ಚು ಚಿರತೆಗಳನ್ನು ಸೆರೆಹಿಡಿದು ಕಾಡಿಗಟ್ಟಿದ್ದರೂ, ನರಹಂತಕ ಚಿರತೆ ಯಾರ ಕೈಗೂ ಸಿಗದೆ ಮತ್ತೆಮತ್ತೆ ಮಕ್ಕಳು, ವೃದ್ಧರ ಮೇಲೆ ದಾಳಿ ನಡೆಸುತ್ತಿರುವುದು ಸ್ಥಳೀಯರು ಮನೆಯಿಂದ ಹೊರಬರಲು ಹೆದರುವಂತಾಗಿದೆ.

    4 ಚಿರತೆ ಕೊಲ್ಲಲು ಆದೇಶವಿದೆ!: 6 ತಿಂಗಳಿನಿಂದ ವೃದ್ಧರು, ಮಕ್ಕಳ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಚಿರತೆ ಕೊಲ್ಲಲು ಸರ್ಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನುಮತಿ ನೀಡಿದ್ದರೂ ಇಲಾಖೆ ಸಿಬ್ಬಂದಿ ನರಭಕ್ಷಕನ ಪತ್ತೆ ಮಾಡಲು ಸಾಧ್ಯವಾಗಿಲ್ಲ. ನರಭಕ್ಷಕ ನಾಲ್ಕು ಚಿರತೆಗಳನ್ನು ಸೆರೆ ಹಿಡಿಯಬೇಕು, ಸಾಧ್ಯವಾಗಿದ್ದರೆ ಕಂಡಲ್ಲಿ ಗುಂಡಿಕ್ಕಬೇಕು ಎಂಬ ಆದೇಶ ಮಾ.10ರಂದು ಹೊರಬಿದ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts