More

    ನಾಪೋಕ್ಲುವಿನಲ್ಲಿ ವಿಜೃಂಭಣೆಯ ಕ್ರಿಸ್‌ಮಸ್ ಹಬ್ಬ ಆಚರಣೆ

    ನಾಪೋಕ್ಲು: ಸ್ಥಳೀಯ ಸಂತಮೇರಿ ಮಾತೆಯ ದೇವಾಲಯದಲ್ಲಿ ಕ್ರೈಸ್ತರು ಭಾಗವಹಿಸುವ ಮೂಲಕ ಕ್ರಿಸ್‌ಮಸ್ ಹಬ್ಬವನ್ನು ಸೋಮವಾರ ಶ್ರದ್ಧಾ-ಭಕ್ತಿ, ಸಡಗರ-ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಿದರು.

    ಚರ್ಚ್‌ನ ಧರ್ಮ ಗುರುಗಳಾದ ಜ್ಞಾನಪ್ರಕಾಶ್ ಅವರು ದೇವಾಲಯದಲ್ಲಿ ವಿಶೇಷಪೂಜೆ ಪ್ರಾರ್ಥನೆ, ನೆರವೇರಿಸಿದರು. ಬಳಿಕ ಸಂದೇಶ ನೀಡಿದ ಅವರು, ಯೇಸುವಿನ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಅವರಂತೆ ಬದುಕಿ ಬಾಳಬೇಕು. ಬೇರೆಯವರ ಭಾವನೆ ಅರ್ಥ ಮಾಡಿಕೊಂಡು ಅವರ ಕಷ್ಟಕ್ಕೆ ಸ್ಪಂದಿಸುವಂತಾಗಬೇಕು ಎಂದರು.

    ಬೇರೆಯವರ ಕಣ್ಣಲ್ಲಿ ಕಣ್ಣೀರು ತರಿಸದೆ ನಾವು ಸುಖವಾಗಿ ಬದುಕಿ ಬೇರೆಯವರು ಸುಖವಾಗಿ ಬದುಕುವಂತೆ ನಾವು ಯೋಚಿಸಿ ಬದುಕುವುದೇ ಕ್ರೈಸ್ತರ ಜೀವನ ಎಂದು ಹಿತ ನುಡಿದು ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದರು.

    ಹಬ್ಬದ ಪ್ರಯುಕ್ತ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಭವ್ಯವಾಗಿ ಅಲಂಕರಿಸಿ ಆಕರ್ಷಕ ಗೋದಲಿಯನ್ನು ನಿರ್ಮಿಸಲಾಗಿತ್ತು. ಕಾರ್ಯಕ್ರಮದಲ್ಲಿ ಯೇಸುವಿನ ಜನನದ ಗೋದಲಿ ನಿರ್ಮಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಜಾಲಿ ಶರ್ಲಿ, ದ್ವಿತೀಯ ಸ್ಥಾನ ಕೆ.ಜೆ.ರಾಯ್, ತೃತೀಯ ಸ್ಥಾನ ಅಹಿಲ್ ಜೋಸೆಫ್ ಬಹುಮಾನ ಪಡೆದುಕೊಂಡರು. ಈ ಸ್ಪರ್ಧೆಯ ವಿಜೇತರಿಗೆ ಧರ್ಮ ಗುರುಗಳಾದ ಜ್ಞಾನಪ್ರಕಾಶ್ ಬಹುಮಾನ ವಿತರಿಸಿದರು. ಕ್ರೈಸ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts