More

    ರಾಜ್ಯದ ಏಕೈಕ ಸ್ವರ್ಣಗೌರಿ ದೇವಾಲಯಲ್ಲಿ ಈ ಭಾರಿ ನಡೆಯುತ್ತಿಲ್ಲ ಗೌರಿ ಹಬ್ಬ! ಕಾರಣ ಇಲ್ಲಿದೆ

    ಚಾಮರಾಜನಗರ: ರಾಜ್ಯಾದ್ಯಂತ ಗೌರಿ-ಗಣೇಶ ಹಬ್ಬದ ಸಡಗರ ಕಳೆಗಟ್ಟಿದೆ. ರಾಜ್ಯದಲ್ಲೆಡೆ ಗಣೇಶನಿಗೆ ಆಗ್ರ ಪೂಜೆಯಾದ್ರೆ, ಚಾಮರಾಜನಗರ ತಾಲೂಕಿ‌ನ ಕುದೇರು ಗ್ರಾಮದಲ್ಲಿ ಮಾತ್ರ ಗೌರಿಗೆ ಮೊದಲ ಪ್ರಾಶಸ್ತ್ಯ. ಸ್ವರ್ಣಗೌರಿ ಮೂರ್ತಿಗನ್ನು ಪ್ರತಿಷ್ಠಾಪಿಸಿ 12 ದಿನಗಳ ಕಾಲ ಸಂಭ್ರಮದಿಂದ ಹಬ್ಬ ಆಚರಣೆ ಮಾಡುತ್ತಿದ್ದರು. ಆದರೆ ಈ ಬಾರಿ ರದ್ದಾಗಿದೆ.

    ರಾಜ್ಯದ ಏಕೈಕ ಸ್ವರ್ಣಗೌರಿ ದೇವಾಲಯ ಇರೋದು ಕುದೇರು ಗ್ರಾಮದಲ್ಲಿ. ಇಲ್ಲಿ ಪ್ರತಿವರ್ಷ ಗೌರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತಿತ್ತು. ಕರೊನಾ ಮತ್ತು ನಿಫಾ ವೈರಸ್​ ಭೀತಿಯಿಂದಾಗಿ ಈ ಭಾರಿ ಗೌರಮ್ಮ ದೇವಾಲಯದಲ್ಲಿ ಇಲ್ಲ ಪೂಜೆ, ಪುನಸ್ಕಾರ! ಕಳೆದ ಬಾರಿಯೂ ಕರೊನಾ ಹಿನ್ನೆಲೆ ಗೌರಿ ಹಬ್ಬ ಆಚರಣೆ ರದ್ದಾಗಿತ್ತು.

    ಕುದೇರು ಗೌರಮ್ಮನಿಗೆ ಹರಕೆ ಹೊತ್ತರೆ ಇಷ್ಟಾರ್ಥ ಸಿದ್ಧಿಸುತ್ತೆ ಅನ್ನೋ ನಂಬಿಕೆ. ಹಾಗಾಗಿ ಸಾವಿರಾರು ಮಂದಿ ಈ ದೇಗುಲಕ್ಕೆ ಬರುತ್ತಾರೆ. ಹಬ್ಬ ಆಚರಣೆ ನೆಪದಲ್ಲಿ ಜನಜಂಗುಳಿ ಸೇರಿದ್ರೆ ಸೋಂಕು ಹರಡುವಿಕೆ ಹೆಚ್ಚಾಗಬಹುದು ಎಂದು ಹಬ್ಬವನ್ನು ರದ್ದು ಮಾಡಲಾಗಿದೆ.

    ಬೆಂಗಳೂರಲ್ಲಿ ಸೆ.10ಕ್ಕೆ ಮಾಂಸ ಮಾರಾಟ ನಿಷೇಧ

    ಆ ಚುಚ್ಚುಮಾತನ್ನ ಸಹಿಸಲಾಗ್ತಿಲ್ಲ, ನನ್ನ ಸಾವಿಗೆ ಅಪ್ಪ-ಅಮ್ಮನೇ ಕಾರಣ… ಮಗನ ಸಾವಿನ ಬಳಿಕ ಹೆತ್ತವರು ಎಸ್ಕೇಪ್​

    ಬೆಂಗಳೂರಲ್ಲಿ ಸೆ.10ಕ್ಕೆ ಮಾಂಸ ಮಾರಾಟ ನಿಷೇಧ

    12 ದಿನದಲ್ಲಿ ಹಸೆಮಣೆ ಏರಬೇಕಿದ್ದ ವಕೀಲ ದುರಂತ ಸಾವು! ಅಜ್ಜಿಯನ್ನ ಮದ್ವೆಗೆ ಕರೆಯಲು ಹೋದವ ಶವವಾಗಿ ಬಂದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts