More

    ಕರೊನಾ ಎಂಬುದು ಕೇವಲ 1 ಗ್ರಾಂ ಅಷ್ಟೆ, ಇನ್ನೂ 8 ವರ್ಷ ಸಾವು-ನೋವು ಕಾಡುತ್ತೆ: ಭವಿಷ್ಯ ನುಡಿದ ಕೋಡಿಶ್ರೀಗಳು

    ಕೋಲಾರ: ಕರೊನಾ ಎಂಬುದು ಕೇವಲ 1 ಗ್ರಾಂ ಅಷ್ಟೆ. ಆದರೆ, ಜಗತ್ತಿನ 800 ಕೋಟಿ ಜನರನ್ನು ಅಲ್ಲಾಡಿಸಿತು. ಎಲ್ಲ ಕಡೆ ಮನುಷ್ಯ ವಿಫಲವಾಗಿ ಬಿಟ್ಟಿದ್ದಾನೆ. ಸಮಾಚಾರ-ವಿಚಾರ-ಪ್ರಚಾರದ ಜತೆಗೆ ಅಪಪ್ರಚಾರ ಹುಟ್ಟಿಕೊಂಡಿದೆ. ಇನ್ನೂ 8 ವರ್ಷಗಳು ಸಾವು-ನೋವುಗಳು ಇದ್ದೇ ಇರುತ್ತವೆ ಎಂದು ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದರು.

    ವೇಮಗಲ್​ನಲ್ಲಿ ಸೋಮವಾರ ಮಾತನಾಡಿದ ಶ್ರೀಗಳು, ಮೇಲೆ ಜೀವನ ನಡೆಯುತ್ತಿದ್ದು, ಮನುಷ್ಯ ಸಂಪಾದನೆ ಮಾಡಿದ್ದನ್ನೆಲ್ಲಾ ಆಸ್ಪತ್ರೆಗಳಿಗೆ ಕಟ್ಟುತ್ತಿದ್ದಾನೆ. ಇದಕ್ಕೆಲ್ಲ ನಮ್ಮ ಜೀವನ ಶೈಲಿಯ ಬದಲಾವಣೆ ಕಾರಣ. ಪ್ರಕೃತಿ ಮುನಿಸಿಕೊಂಡಿದೆ. ಹಣ ಮದದಿಂದ ದೈವ ಭಕ್ತಿ, ತಂದೆ-ತಾಯಿ, ಗುರು-ಹಿರಿಯರು, ಮಾನವೀಯತೆಯನ್ನೂ ಮರೆಯುತ್ತಿರುವುದೇ ಇದಕ್ಕೆ ಕಾರಣ ಎಂದರು.

    ಈ ಹಿಂದೆ ಶುಭ್ರವಾಗಿ ಪಾತ್ರೆ, ಮನೆ, ಅಡುಗೆ ಮನೆಯನ್ನು ಸಾರಿಸಿ ತೊಳೆಯುತ್ತಿದ್ದರು. ಕೈಕಾಲು ತೊಳೆದು ಊಟ ಮಾಡುತ್ತಿದ್ದರು. ಇಂದು ಚಪ್ಪಲಿ ಹಾಕಿಕೊಂಡೇ ಮನೆಯಲ್ಲಿ ಓಡಾಡುತ್ತಾರೆ, ಊಟ ಮಾಡುತ್ತಾರೆ. ಇದರ ಪರಿಣಾಮವಾಗಿ ಹಲವು ರೋಗಗಳನ್ನು ಎದುರಿಸುವಂತಾಗಿದೆ. ಚಪ್ಪಲಿ ಹಾಕಬಾರದು ಎಂದು ಹೇಳುತ್ತಿಲ್ಲ, ಸ್ವಚ್ಛತೆಗೆ ಆದ್ಯತೆ ನೀಡುವ ದಿಸೆಯಲ್ಲಿ ಹಿಂದಿನ ಸಂಪ್ರದಾಯ ಅಳವಡಿಸಿಕೊಳ್ಳಬೇಕು ಎಂದು ಕೋಡಿಶ್ರೀಗಳು ತಿಳಿಸಿದರು.

    ಮೈಸೂರಿನಲ್ಲಿ ದೇವಾಲಯಗಳನ್ನು ಕೆಡವುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜರುಗಳು ದೇವಾಲಯಗಳನ್ನು ನಿರ್ವಿುಸಿದ್ದರು, ಈಗ ರಾಜರ ಸ್ಥಾನದಲ್ಲಿರುವ ಸರ್ಕಾರವೇ ದೇವಾಲಯಗಳನ್ನು ಕೆಡವಿದರೆ ಯಾರಿಗೆ ಹೇಳಬೇಕು? ನೈಜವಾದ ಜ್ಞಾನ ಕಡಿಮೆಯಾಗಿದೆ. ಜಾತಿಯ ಬಣ್ಣಗಳು, ಮತಾಂಧತೆ ಬೆಳೆಯುತ್ತಿದೆ. ಜಾತಿ-ಜಾತಿಗಳ ಕೀಳರಿಮೆಯೇ ಕಾರಣವಾಗಿದ್ದು, ಇದು ಬದಲಾಗಬೇಕಿದೆ ಎಂದರು.

    ಸಾವಿನಲ್ಲೂ ನಾಲ್ವರ ಪ್ರಾಣ ಉಳಿಸಿ ಸಾರ್ಥಕತೆ ಮೆರೆದ ಹಾವೇರಿ ಯುವತಿ

    ಚಿಂತಾಮಣಿಯಲ್ಲಿ ಭೀಕರ ಅಪಘಾತ, 8 ಮಂದಿ ಸಾವು: ಒಬ್ಬೊಬ್ಬರ ಹಿಂದಿದೆ ಕರುಣಾಜನಕ ಕಥೆ

    ಮಹಿಳೆಯನ್ನ ನಗ್ನಗೊಳಿಸಿ ಹಿಂಸೆ ಕೊಟ್ಟ ಕೇಸ್​ಗೆ ಟ್ವಿಸ್ಟ್​! ಆರೋಪಿಗಳಲ್ಲಿ ಒಬ್ಬ ಪೊಲೀಸ್ ಜೀಪ್ ಡ್ರೈವರ್ ಆಗಿದ್ದವ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts