More

    ರಾಮನಗರದಲ್ಲಿ ಧಾರಾಕಾರ ಮಳೆ: ಕಣ್ವ ನೀರಲ್ಲಿ ತೇಲಿ ಬಂತು ಶವ

    ರಾಮನಗರ: ಧಾರಾಕಾರ ಮಳೆಗೆ ಕಣ್ವ ನದಿ ಉಕ್ಕಿ ಹರಿಯುತ್ತಿದ್ದು, ನದಿ ನೀರಲ್ಲಿ ವ್ಯಕ್ತಿಯೊಬ್ಬರ ಶವ ತೇಲಿ ಬಂದಿದ್ದು ಜನರು ಬೆಚ್ಚಿಬಿದ್ದಿದ್ದಾರೆ.

    ಇಂತಹ ದೃಶ್ಯ ಚನ್ನಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದ ಬಳಿ ಕಂಡು ಬಂದಿದೆ. ವಾರದಿಂದ ರಾಮನಗರ ಜಿಲ್ಲಾದ್ಯಂತ ಧಾರಾಕಾರ ಮಳೆಯಾಗಿದ್ದು, ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಕಣ್ವ ನದಿಯೂ ಉಕ್ಕಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಹೆಣ ತೇಲಿ ಬಂದಿದೆ. ಹುಣಸನಹಳ್ಳಿ-ಕೊಂಡಾಪುರ ಮಧ್ಯೆ ಕಣ್ವ ನೀರಲ್ಲಿ ಶವ ತೇಲುತ್ತಿರುವುದನ್ನ ನೋಡಿದ ಜನರು ಭಯಭೀತರಾಗಿದ್ದಾರೆ. ಯಾರೋ ಕೊಲೆ ಮಾಡಿ ನೀರಿಗೆ ಎಸೆದಿರಬೇಕು ಇಲ್ಲವೇ ವ್ಯಕ್ತಿ ಕಾಲು ಜಾರಿ ನೀರಲ್ಲಿ ಬಿದ್ದು ಸತ್ತಿರಬೇಕು ಎಂದು ಹಲವರು ಮಾತಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಇತ್ತೀಚಿಗೆ ಮೃತಪಟ್ಟಿದ್ದ ವ್ಯಕ್ತಿಯನ್ನು ಕಣ್ವ ನದಿ ಬಳಿ ಮುಚ್ಚಲಾಗಿತ್ತು. ನೀರು ಆವರಿಸಿದ್ದರಿಂದ ಹೂತಿಟ್ಟಿದ್ದ ಶವ ಹೊರಬಂದಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಈ ಭಾಗದಲ್ಲಿ ಮೃತರ ಅಂತ್ಯಕ್ರಿಯೆ ಮಾಡುವಾಗ ಶವಕ್ಕೆ ತೊಡಿಸಿದ್ದ ಬಟ್ಟೆಯನ್ನ ಕಳಚಿ ಮುಚ್ಚುತ್ತಾರಂತೆ. ಆದರೆ, ನೀರ ಮೇಲೆ ತೇಲಿಬಂದ ಶವದ ಮೈಮೇಲೆ ಬಟ್ಟೆ ಇರುವುದನ್ನ ಗಮನಿಸಿದರೆ ಇದು ಹೂತಿಟ್ಟಿದ್ದ ಶವ ಅಲ್ಲ ಎಂದು ಹಲವರು ಹೇಳುತ್ತಿದ್ದಾರೆ. ಪೊಲೀಸ್​ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಬೇಕಿದೆ.

    ಕಣ್ವ ಜಲಾಶಯದ ನೀರಿನ ಮಟ್ಟ 28 ಅಡಿ ಇದೆ. ಆದರೆ ಜಲಾಶಯ ಭರ್ತಿಯಾಗಿ ಒಳಹರಿವು ಹೆಚ್ಚಿದೆ, ಈ ಹಿನ್ನೆಲೆಯಲ್ಲಿ ನೀರನ್ನು ಹೊರಬಿಡಲಾಗಿದ್ದು, ವಿರುಪಾಕ್ಷಿಪುರ ಹೋಬಳಿ ಭಾಗದ ಸಾದರಹಳ್ಳಿ, ಹುಣಸನಗಳ್ಳಿ, ಕೊಂಡಾಪುರ, ಮಾದಾಪುರ, ಬಾಣಗಹಳ್ಳಿ, ಅಂಬಾಡಹಳ್ಳಿ, ನೆಲಮಾಕನಹಳ್ಳಿ, ಸಾಮಂದಿಪುರ ಸರಹದ್ದಿನಲ್ಲಿ ಕೆರೆಗಳು ತುಂಬಿ ಮೈದುಂಬಿ ಹರಿಯುತ್ತಿವೆ.

    ಅಪಘಾತದಲ್ಲಿ ಅಪ್ಪು ಅಭಿಮಾನಿ ಸಾವು: ಕೊನೇ ಕ್ಷಣದಲ್ಲಿ ಪತ್ನಿಗೆ ಆತ ಹೇಳಿದ ಕೊನೇ ಮಾತು ಕೇಳಿದ್ರೆ ಮನಕಲಕುತ್ತೆ

    ಡಿಕೆ ಡಿಕೆ ಎಂದು ಘೋಷಣೆ… ಅರ್ಧಕ್ಕೆ ಭಾಷಣ ನಿಲ್ಲಿಸಿ ವೇದಿಕೆಯಿಂದ ಕೆಳಗಿಳಿದ ಸಿದ್ದರಾಮಯ್ಯ!

    ಕಣ್ಣೀರ ಕಟ್ಟೆ ಒಡೆಯಿತು.. ವೇದಿಕೆಯಲ್ಲೇ ಬಿಕ್ಕಿಬಿಕ್ಕಿ ಅತ್ತ ಶಿವಣ್ಣ, ರಾಘಣ್ಣ: ಬಂದ್ಬಿಡು ಕಂದಾ.. ನಾನೇ ಹೋಗುವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts