More

    ವಿಮಾ ಪಾಲಿಸಿ ಮಾಡಿಸುವ ಸೋಗಿನಲ್ಲಿ ಮನೆ ಕಳ್ಳತನ: ಹೆಬ್ಬಾಳ ಪೊಲೀಸರಿಂದ ಆರೋಪಿಯ ಬಂಧನ

    ಬೆಂಗಳೂರು: ವಿಮಾ ಪಾಲಿಸಿ ಮಾಡಿಸುವ ನೆಪದಲ್ಲಿ ಬಡಾವಣೆಗಳಲ್ಲಿ ಸುತ್ತಾಡಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.

    ಆರ್.ಟಿ.ನಗರದ ಇಮ್ರಾನ್ ಉಲ್ಲಾ ಖಾನ್(40) ಬಂಧಿತ. 15.5 ಲಕ್ಷ ರೂ. ಮೌಲ್ಯದ 309 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ ಮತ್ತು ಕೃತ್ಯಕ್ಕೆ ಬಳಸಿದ್ದ 1 ಬೈಕ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಖಾಸಗಿ ವಿಮಾ ಪಾಲಿಸಿ ನವೀಕರಣ ಮತ್ತು ಹೊಸ ಪಾಲಿಸಿ ಮಾಡಿಸುವ ಸೋಗಿನಲ್ಲಿ ಬಡಾವಣೆಗಳಲ್ಲಿ ಸುತ್ತಾಡಿ ಗ್ರಾಹಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಬೀಗ ಹಾಕಿರುವ ಮನೆಗಳನ್ನು ಗಮನಿಸಿ ಬೀಗ ಒಡೆದು ಒಳನುಗ್ಗಿ ಚಿನ್ನಾಭರಣ ಕಳವು ಮಾಡುತ್ತಿದ್ದ. ಒಂದು ವೇಳೆ ಯಾರಾದರೂ ಕೇಳಿದರೆ ನಾನು ವಿಮಾ ಪಾಲಿಸಿದಾರ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದ.

    ಇದೇ ರೀತಿ ಹೆಬ್ಬಾಳದ ಕುಂತಿಗ್ರಾಮ 1ನೇ ಮುಖ್ಯರಸ್ತೆಯಲ್ಲಿ ವ್ಯಕ್ತಿಯೊಬ್ಬ, ಸ್ನಾನ ಮಾಡಲು ಸ್ನಾನ ಗೃಹಕ್ಕೆ ಹೋದಾಗ ಇತ್ತ ಆರೋಪಿ ಒಳನುಗ್ಗಿ ಚಿನ್ನಾಭರಣ ದೋಚಿದ್ದ. ಈ ಬಗ್ಗೆ ದಾಖಲಾದ ದೂರಿನ ಮೇರೆಗೆ ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ದಿಲೀಪ್ ಕುಮಾರ್ ನೇತೃತ್ವದ ತಂಡ ಆರೋಪಿಯ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಇಮ್ರಾನ್ ಖಾನ್‌ನನ್ನು ಬಂಧಿಸಿದ್ದಾರೆ. ಈತನ ಬಂಧನದಿಂದ 3 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಒಂದು ವಾರದ ಅಂತರದಲ್ಲಿ ಎರಡು ಕರುಗಳಿಗೆ ಜನ್ಮ ನೀಡಿದ ಎಮ್ಮೆ! ಸಾಗರದಲ್ಲಿ ಅಪರೂಪದ ಪ್ರಕರಣ

    ಗಣೇಶೋತ್ಸವ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುತ್ತಲೇ ಪ್ರಾಣ ಬಿಟ್ಟ! ಡಿಜೆ ಸೌಂಡ್ಸ್​ ಎಫೆಕ್ಟ್​ಗೆ ಹೃದಯಾಘಾತ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts