More

    ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತ ಮರು ಆಯ್ಕೆ

    ನವದೆಹಲಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ (ಯುಎನ್​ಹೆಚ್‌ಆರ್‌ಸಿ) ಭಾರತವು ಬಹುಮತದೊಂದಿಗೆ ಮರು ಆಯ್ಕೆಯಾಗಿದೆ. ಆ ಮೂಲೀಕ ಯುಎನ್​ಎಚ್‌ಆರ್‌ಸಿಗೆ ಮತ್ತೊಮ್ಮೆ ಅಂದರೆ 6ನೇ ಅವಧಿಗೆ ಆಯ್ಕೆಯಾದಂತಾಗಿದೆ. ಸಮ್ಮಾನ, ಸಂವಾದ ಮತ್ತು ಸಹಯೋಗದ ಮೂಲಕ ಮಾನವ ಹಕ್ಕುಗಳ ರಕ್ಷಣೆಗೆ ತನ್ನ ಬದ್ಧತೆಯನ್ನು ಮುಂದುವರಿಸುವುದಾಗಿ ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ನಿಯೋಗವು ತನ್ನ ನಿಲುವನ್ನು ಸಾರಿ ಹೇಳಿದೆ.

    ಭಾರತವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 2022-24ರ ಅವಧಿಗೆ (6ನೇ ಅವಧಿ)ಗೆ ಮತ್ತೊಮ್ಮೆ ಬಹುಮತದೊಂದಿಗೆ ಆಯ್ಕೆಯಾಗಿದೆ. ಭಾರತದ ಮೇಲೆ ವಿಶ್ವಾಸ ತೋರಿದ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ನಿಯೋಗವು ಟ್ವೀಟ್ ಮಾಡಿದೆ.

    ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ರಹಸ್ಯ ಮತದಾನದ ಮೂಲಕ 18 ದೇಶಗಳನ್ನು ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆ ಮಾಡಿದೆ. ಅರ್ಜಂಟೀನಾ, ಬೆನಿನ್, ಕ್ಯಾಮರೂನ್, ಎರಿಟ್ರಿಯಾ, ಫಿನ್​ಲೆಂಡ್, ಅಮೆರಿಕ, ಗ್ಯಾಂಬಿಯಾ, ಹೌಂಡರಾಸ್, ಭಾರತ, ಕಜಕಿಸ್ತಾನ್, ಲಿಥುವೇನಿಯಾ, ಲಕ್ಸಂಬರ್ಗ್, ಮಲೇಷಿಯಾ, ಮಾಂಟೆನೆಗ್ರೊ, ಪರುಗ್ವೆ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೊಮಾಲಿಯಾ ದೇಶಗಳು ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾಗಿವೆ.

    ನವರಾತ್ರಿ ಮುಕುಟ ಮೈಸೂರು ದಸರಾ: ಚಾಮುಂಡಿ ನಾಡದೇವತೆಯಾಗಿದ್ದು ಹೇಗೆ?

    ಕಂದಾಯ ನಿರೀಕ್ಷಕಿ ಆತ್ಮಹತ್ಯೆ! ಮಹತ್ತರ ಕನಸು ಕಂಡಿದ್ದವಳ ಬಾಳಲ್ಲಿ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts